ಬ್ರೇಕಿಂಗ್ ನ್ಯೂಸ್
07-08-21 03:51 pm Headline Karnataka News Network ಕರ್ನಾಟಕ
ನವದೆಹಲಿ, ಆಗಸ್ಟ್ 7: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ಹೊರ ರಾಜ್ಯದ ಪ್ರಯಾಣಿಕರ ಪ್ರವೇಶಕ್ಕೆ ಆರ್ ಟಿ ಪಿಸಿಆರ್ ನೆಗೆಟಿವ್ ಕಡ್ಡಾಯ ಮಾಡಿದೆ. ಇದೇ ವೇಳೆ, ಕೇಂದ್ರ ಸರಕಾರ ಕೊರೊನಾ ಲಸಿಕೆಯ ಎರಡೂ ಡೋಸನ್ನು ಪಡೆದಿರುವ ಮಂದಿಗೆ ಕೊರೊನಾ ನೆಗೆಟಿವ್ ಕಡ್ಡಾಯ ಮಾಡುವಂತಿಲ್ಲ. ಡೋಸ್ ಪಡೆದಿರುವುದನ್ನು ಖಾತ್ರಿಪಡಿಸಿ ಪ್ರವೇಶ ನೀಡಬಹುದು ಎಂದು ಹೇಳಿದೆ.
ಎರಡೂ ಲಸಿಕೆಯನ್ನು ಪಡೆದಿದ್ದರೂ, ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕೆಂದು ಕೆಲವು ರಾಜ್ಯಗಳು ಕಡ್ಡಾಯ ಪಡಿಸಿರುವುದನ್ನು ಕೇಂದ್ರ ಸರಕಾರ ಆಕ್ಷೇಪಿಸಿದ್ದು, ಪೂರ್ತಿ ಲಸಿಕೆ ಪಡೆದವರನ್ನು ಆ ರೀತಿ ಕಡ್ಡಾಯ ಮಾಡುವಂತಿಲ್ಲ ಎಂದು ಹೇಳಿದೆ. ಲಸಿಕೀಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು ಕಳೆದ ಮೇ ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಎರಡೂ ಲಸಿಕೆ ಪಡೆದವರ ಪ್ರಯಾಣಕ್ಕೆ ಆರ್ ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಕೇಳುವ ಅಗತ್ಯವಿಲ್ಲ ಎಂದು ಹೇಳಿತ್ತು.
ಈ ವಿಚಾರದಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಆಯಾ ರಾಜ್ಯಗಳ ಜೊತೆ ಮಾತುಕತೆ ನಡೆಸಲಿದೆ. ಕೋವಿಡ್ ಲಸಿಕೆಯು ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ರೋಗ ಬರದಂತೆ ತಡೆಯುತ್ತದೆ. ಈಗ ಕೊರೊನಾ ಹೆಚ್ಚುತ್ತಿರುವ ಮಧ್ಯೆ ಎಲ್ಲಿ ಅಗತ್ಯವಿದೆಯೋ ಅಲ್ಲಿ ಮಾತ್ರ ಆರ್ ಟಿಪಿಸಿಆರ್ ಟೆಸ್ಟ್ ಮಾಡಿದರೆ ಸಾಕು. ಇಲ್ಲದಿದ್ದರೆ ಯಾರು ಲಸಿಕೆಯನ್ನೂ ಪೂರ್ತಿಯಾಗಿ ತೆಗೆದುಕೊಂಡಿರುತ್ತಾರೋ, ಅಂಥವರು ಲಸಿಕೆ ಪಡೆದಿರುವುದನ್ನೇ ಪ್ರಯಾಣ ಸಂದರ್ಭದಲ್ಲಿ ತೋರಿಸಬೇಕು. ಕೋವಿಡ್ ನೆಗೆಟಿವ್ ಅಗತ್ಯವಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎನ್.ಕೆ. ಅರೋರಾ ಹೇಳಿದ್ದಾರೆ.
ಕೇಂದ್ರ ಸರಕಾರದ ಮಾರ್ಗಸೂಚಿ ಈ ರೀತಿ ಹೇಳಿದ್ದರೂ, ಕರ್ನಾಟಕ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಕೇರಳ ಮತ್ತು ಮಹಾರಾಷ್ಟ್ರದ ಜನರ ಪ್ರವೇಶಕ್ಕೆ ಆರ್ ಟಿಪಿಸಿಆರ್ ಟೆಸ್ಟ್ ವರದಿಯನ್ನು ಕಡ್ಡಾಯ ಮಾಡಿದೆ. ತಮಿಳುನಾಡು ಸರಕಾರವಂತೂ ಕೋವಿಡ್ ನೆಗೆಟಿವ್ ಮತ್ತು ಎರಡೂ ಡೋಸ್ ಲಸಿಕೆ ಪಡೆದಿರುವುದನ್ನು ಖಾತ್ರಿ ಪಡಿಸಿದರೆ ಮಾತ್ರ ಕೇರಳದವರಿಗೆ ಪ್ರವೇಶ ಎಂದಿದ್ದು ಭಾರೀ ಆಕ್ಷೇಪಕ್ಕೆ ಕಾರಣವಾಗಿದೆ.
ಛತ್ತೀಸ್ ಗಢ ಸರಕಾರ ವಿಮಾನದಲ್ಲಿ ಬರುವ ಎಲ್ಲ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯಗೊಳಿಸಿದ್ದರೆ, ಗೋವಾ ಸರಕಾರ ಕೇರಳದ ಪ್ರಯಾಣಿಕರಿಗೆ ಮಾತ್ರ ಆರ್ ಟಿಪಿಸಿಆರ್ ಟೆಸ್ಟ್ ವರದಿ ಕಡ್ಡಾಯ ಪಡಿಸಿದೆ. ಪಶ್ಚಿಮ ಬಂಗಾಳ ಸರಕಾರ ಆಗಸ್ಟ್ 8ರಿಂದ ಪುಣೆ, ಮುಂಬೈ, ಚೆನ್ನೈ ಹೀಗೆ ಕೆಲವು ನಗರಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಕಡ್ಡಾಯ ಮಾಡಿದೆ. ಕೇರಳದಲ್ಲಿ ಇಡೀ ದೇಶದಲ್ಲೇ ಅತ್ಯಧಿಕ ಕೊರೊನಾ ಸೋಂಕಿನ ಪ್ರಕರಣಗಳು ಇರುವುದರಿಂದ ಹೆಚ್ಚಿನ ರಾಜ್ಯಗಳು ಅಲ್ಲಿನ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳ ನಿರ್ಬಂಧ ಕ್ರಮದ ಬಗ್ಗೆ ಮೂಗುತೂರಿಸಿದ್ದು, ಎರಡೂ ಡೋಸ್ ಪಡೆದಿರುವ ಮಂದಿಗೆ ಕೋವಿಡ್ ನಿರ್ಬಂಧ ವಿಧಿಸುವಂತಿಲ್ಲ ಎಂದು ಹೇಳಿದೆ. ಈ ಬಗ್ಗೆ ಸದ್ಯದಲ್ಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬರಲಿದೆ.
The central government has informed states that there is no need for mandatory RT-PCR reports to allow entry for those who have received both doses of covid-19 vaccines.
27-08-25 12:33 pm
Bangalore Correspondent
Dk Shivakumar, Chamundi Hill: ಚಾಮುಂಡಿ ಬೆಟ್ಟ ಹ...
27-08-25 11:48 am
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm