ಬ್ರೇಕಿಂಗ್ ನ್ಯೂಸ್
04-09-20 02:30 pm Bangalore Correspondent ಕರ್ನಾಟಕ
ಬೆಂಗಳೂರು, ಸೆಪ್ಟೆಂಬರ್ 4: ಡ್ರಗ್ಸ್ ನಂಟು ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಯಲಹಂಕದ ಫ್ಲಾಟಿಗೆ ರೈಡ್ ಮಾಡಿದ್ದ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ನೀಡಿದ ಮಾಹಿತಿಯಂತೆ ಇಂದು ಬೆಳಗ್ಗೆ ಸಿಸಿಬಿ ತಂಡ ರಾಗಿಣಿಯ ಯಲಹಂಕದಲ್ಲಿರುವ ಫ್ಲ್ಯಾಟ್ ಗೆ ದಾಳಿ ನಡೆಸಿತ್ತು. ಮನೆಯಲ್ಲಿ ಸಿಕ್ಕಿದ ಸಿಡಿ, ಇನ್ನಿತರ ರಾಗಿಣಿಗೆ ಸಂಬಂಧಿಸಿದ ಮಾಹಿತಿ ಇರುವ ಪರಿಕರಗಳನ್ನು ವಶಕ್ಕೆ ಪಡೆದ ಪೊಲೀಸರು, ರಾಗಿಣಿಯನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು. ಇದೀಗ ಪೊಲೀಸರು ರಾಗಿಣಿಯನ್ನು ವಶಕ್ಕೆ ಪಡೆದು ಡ್ರಗ್ ಜಾಲದ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ, ರಾಗಿಣಿ ತಾವು ಡ್ರಗ್ ಸೇವಿಸುವುದರ ಜೊತೆಗೆ ಇತರರಿಗೂ ನೀಡುತ್ತಿದ್ದರು ಎಂದು ಹೇಳಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈಗ ರಾಗಿಣಿಯನ್ನು ಡ್ರಿಲ್ ಮಾಡಲು ಆರಂಭಿಸಿದ್ದಾರೆ.
ಖಚಿತ ಮಾಹಿತಿಗಳು ಲಭ್ಯವಾದರೆ ರಾಗಿಣಿಯನ್ನು ಇಂದೇ ಬಂಧಿಸುವ ಸಾಧ್ಯತೆಯಿದೆ. ರಾಗಿಣಿ ಜೊತೆಗೆ ಸಂಜನಾಳನ್ನು ಕೂಡ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಡ್ರಗ್ಸ್ ನಂಟಿನಲ್ಲಿ ಕನ್ನಡ ಚಿತ್ರರಂಗದ 15 ಕ್ಕೂ ಹೆಚ್ಚು ನಟ- ನಟಿಯರ ಹೆಸರು ಕೇಳಿಬಂದಿದ್ದು ಆರಂಭದಲ್ಲಿ ಡ್ರಗ್ ಪೆಡ್ಲರ್ ಗಳನ್ನ ಬೆಂಡೆತ್ತುವ ಕೆಲಸದಲ್ಲಿದ್ದಾರೆ. ರಾಗಿಣಿ ಆತ್ಮೀಯನಾಗಿದ್ದ ರವಿಶಂಕರ್ ಎಂಬಾತನನ್ನು ನಿನ್ನೆಯೆ ಪೊಲೀಸರು ಬಂಧಿಸಿದ್ದರು.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm