ಬ್ರೇಕಿಂಗ್ ನ್ಯೂಸ್
15-02-21 12:02 pm Headline Karnataka News Network ಕರ್ನಾಟಕ
ಭಟ್ಕಳ, ಫೆ.15: ಪೆಟ್ರೋಲ್‌ನಲ್ಲಿ ನೀರು ಮಿಶ್ರಣಗೊಂಡಿದ್ದ ಆರೋಪಕ್ಕೆ ಸಂಬಂಧಿಸಿ ಕಾರಿನ ಮಾಲೀಕರಿಗೆ 15,13,475 ರೂ. ಜೊತೆ ವಾರ್ಷಿಕ ಶೇ. 6 ಬಡ್ಡಿ ಸೇರಿಸಿ ಪರಿಹಾರ ನೀಡುವಂತೆ ಪೆಟ್ರೋಲ್ ಪಂಪ್ ಮಾಲೀಕರಿಗೆ ಗ್ರಾಹಕ ನ್ಯಾಯಾಲಯ ಆದೇಶ ಮಾಡಿದೆ.
ಕಾರವಾರದ ಗ್ರಾಹಕ ನ್ಯಾಯಾಲಯ ಈ ಆದೇಶ ಮಾಡಿದ್ದು ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಭಟ್ಕಳದ ಜೆ.ಅಬ್ದುಲ್ ರಹೀಮ್ ಪೆಟ್ರೋಲ್ ಬಂಕ್ ಮಾಲಿಕರಾದ ಫೈಮಾನ್ ಅಲಿ ಮುರ್ತುಝಾ ಹಾಗೂ ಸಿರಾಜುದ್ದೀನ್ ಅವರಿಗೆ ಸೂಚನೆ ನೀಡಿದೆ.
ಅಲ್ಲದೇ ಕಾರಿನ ಮಾಲೀಕ ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರವಾಗಿ 50,000 ರೂ. ಹಾಗೂ ದೂರು ದಾಖಲಿಸಿದ ಖರ್ಚು 10,000 ರೂ.ಗಳನ್ನು ನೀಡಬೇಕು. 30 ದಿನಗಳ ಒಳಗಾಗಿ ಪರಿಹಾರದ ಹಣ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ 2018 ರ ಮಾರ್ಚ್ ತಿಂಗಳಲ್ಲಿ ಭಟ್ಕಳದ ಸಂಶುದ್ದೀನ್ ಸರ್ಕಲ್‌ನಲ್ಲಿರುವ ಜೆ.ಅಬ್ದುಲ್ ರಹೀಮ್ ಪೆಟ್ರೋಲ್ ಬಂಕ್‌ನಲ್ಲಿ ಉದ್ಯಮಿ ಮಹ್ಮದ್ ಅನ್ಸಾರ್ ಎಂಬವರು ತಮ್ಮ ಕಾರಿಗೆ 57 ಲೀಟರ್ ಪೆಟ್ರೋಲ್ ಹಾಕಿಸಿಕೊಂಡಿದ್ದರು. ನಂತರ ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆ ಮಾರ್ಗವಾಗಿ 1.5 ಕಿ.ಮೀ. ತೆರಳುವಷ್ಟರಲ್ಲಿ ಕಾರು ಬಂದ್ ಆಗಿತ್ತು. ನಂತರ ಮೆಕ್ಯಾನಿಕ್‌ನನ್ನು ಕರೆಸಿ ಪರಿಶೀಲಿಸಿದಾಗ ಕಾರಿಗೆ ಹಾಕಲಾಗಿದ್ದ ಪೆಟ್ರೋಲ್‌ನಲ್ಲಿ ನೀರು ಮಿಶ್ರಣವಾಗಿದ್ದ ಅಂಶ ಬಗ್ಗೆ ತಿಳಿದು ಬಂದಿತ್ತು.
ಈ ಬಗ್ಗೆ ಉದ್ಯಮಿ ಅನ್ಸಾರ್, ಭಟ್ಕಳ ಶಹರ ಠಾಣೆಯಲ್ಲಿ ಪೆಟ್ರೋಲ್ ಬಂಕ್ ವಿರುದ್ಧ ದೂರು ದಾಖಲಿಸಿದ್ದಲ್ಲದೇ, ತಮಗೆ ಪರಿಹಾರ ನೀಡುವಂತೆ ಕಾರವಾರ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ದೂರಿಗೆ ಸಂಬಂಧಿಸಿ ಪೊಲೀಸರು ಬಂಕ್ ಮಾಲಿಕ ಫೈಮಾನ್‌ರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.
Adulteration of Petrol with Water Abdul Rahim Petrol pump in Bhatkal has been fined by Consumer court to pay 15 lakh compensation to the Plaintiff who filed the case.
14-08-25 01:48 pm
Bangalore Correspondent
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm