ಬ್ರೇಕಿಂಗ್ ನ್ಯೂಸ್
26-01-21 05:37 pm Headline Karnataka News Network ಕರ್ನಾಟಕ
ತುಮಕೂರು, ಜ.26: ಪದೇ ಪದೇ ಖಾತೆ ಬದಲಾವಣೆಯಿಂದ ಬೇಸತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ತುಮಕೂರಿನಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, ಖಾತೆ ಬದಲಾವಣೆಯಿಂದ ಬೇಸರಗೊಂಡು ರಾಜಿನಾಮೆ ನೀಡಲು ಮುಂದಾಗಿದ್ದು ನಿಜ. ಇಂತಹ ಸ್ಥಿತಿ ನೋಡಿ ಮನಸ್ಸಿಗೆ ಬೇಸರವಾಗಿತ್ತು. ನನ್ನ ಒಳ್ಳೆಯತನ, ನಿಷ್ಠೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು. ಸಿಎಂ ಫೋನ್ ಮಾಡಿದ್ದಾಗ, ಹೀಗೆ ಪದೇ ಪದೇ ಖಾತೆ ಬದಲಾವಣೆ ಮಾಡಿ ಸಮಾಜಕ್ಕೆ ನನ್ನ ಬಗ್ಗೆ ಯಾವ ಸಂದೇಶ ಕೊಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದೆ. ಹೀಗಾಗಿ ಇಂದಿನ ಗಣರಾಜ್ಯೋತ್ಸವ ಭಾಷಣವನ್ನೇ ಕೊನೆಯ ಭಾಷಣವೆಂದು ಹೇಳಬೇಕೆಂದು ಯೋಚನೆ ಮಾಡಿದ್ದೆ ಎಂದು ಹೇಳಿದರು.
ನನಗೇನು ದೊಡ್ಡ ಖಾತೆ ಬೇಕೆಂದು ಕೇಳಿರಲಿಲ್ಲ. ನಾನು ಹಳ್ಳಿಯವನು. ಜನರ ಜೊತೆ ಬೆರೆತು ಕೆಲಸ ಮಾಡುವಂಥ ಖಾತೆಯನ್ನು ಕೊಡುವಂತೆ ಹೇಳಿದ್ದೆ. ಮುಖ್ಯಮಂತ್ರಿಯವರೇ ನನಗೆ ನೀರಾವರಿ ಖಾತೆ ಕೊಟ್ಟಿದ್ದರು. ಹಿಂದೆಲ್ಲಾ ಬೇರೆ ಪ್ರಮುಖ ಖಾತೆಗಳ ಜೊತೆ ನೀರಾವರಿ ಖಾತೆಯನ್ನು ಹೆಚ್ಚುವರಿಯಾಗಿ ಕೊಡುತ್ತಿದ್ದರು. ನನಗೆ ಖಾತೆ ಬಂದ ಬಳಿಕ ಒಂದಷ್ಟು ಕೆಲಸ ಮಾಡಿ ತೋರಿಸಿದ್ದೇನೆ. ಜೊತೆಗೆ ಕಾನೂನು ಮತ್ತು ಸಂಸದೀಯ ಖಾತೆಯಿಂದಲೂ ತೆರವು ಮಾಡಿದ್ದಾರೆ. ದಿಢೀರ್ ಆಗಿ ಹೀಗೆ ನಡೆದುಕೊಂಡಿದ್ದು ಬೇಸರ ಮೂಡಿಸಿತ್ತು. ಕೆಲವು ಪ್ರಮುಖರು ಮತ್ತು ಮಠಾಧೀಶರು ರಾಜಿನಾಮೆ ನೀಡದಂತೆ ಹೇಳಿದ್ದಾರೆ. ಮರಳಿ ಅದೇ ಖಾತೆ ನೀಡುವ ಬಗ್ಗೆ ಹೇಳಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು.
ಮತ್ತೆ ನೀರಾವರಿ ಖಾತೆ ಕೊಟ್ಟ ಸಿಎಂ
ಸೋಮವಾರದ ಬೆಳವಣಿಗೆಯಲ್ಲಿ ಮಾಧುಸ್ವಾಮಿ ರಾಜಿನಾಮೆ ನೀಡುತ್ತಾರೆಂದು ವದಂತಿ ಹಬ್ಬುತ್ತಲೇ ರಾತ್ರಿ ವೇಳೆ ಫೋನ್ ಮಾಡಿದ್ದ ಸಿಎಂ ಯಡಿಯೂರಪ್ಪ, ತಮ್ಮ ಪರಮಾಪ್ತನನ್ನು ಮನವೊಲಿಸಿದ್ದಾರೆ. ಅಲ್ಲದೆ, ನೀರಾವರಿ ಖಾತೆಯನ್ನೇ ಮರಳಿ ನೀಡುವುದಾಗಿ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಮಾಧುಸ್ವಾಮಿ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆದು ಪ್ರವಾಸೋದ್ಯಮ ಮತ್ತು ವಕ್ಫ್ ಖಾತೆ ನೀಡಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಮಾಧುಸ್ವಾಮಿ, ಸಿಎಂ ಫೋನ್ ಮಾಡಿದಾಗಲು ಸ್ವಾಭಿಮಾನಕ್ಕೆ ಪೆಟ್ಟಾಗಿದ್ದು ಸಚಿವನಾಗಿ ಮುಂದುವರಿಯಲ್ಲ. ಶಾಸಕನಾಗಿಯೇ ಇರುತ್ತೇನೆ ಎಂದು ಹೇಳಿ ಫೋನ್ ಇಟ್ಟಿದ್ದರು. ತಮ್ಮ ಆಪ್ತರ ಬಳಿಯೂ ಇದನ್ನೇ ಹೇಳುತ್ತಿದ್ದರು.
ಸಿಎಂ ಯಡಿಯೂರಪ್ಪ ವಿರುದ್ಧ ವಿಪಕ್ಷಗಳು ಮುಗಿಬೀಳುತ್ತಿದ್ದಾಗ ಗಟ್ಟಿಯಾಗಿ ಅಡ್ಡ ನಿಂತು ಸಮರ್ಥಿಸಿಕೊಳ್ಳುತ್ತಿದ್ದ ಮಾಧುಸ್ವಾಮಿ ಸಚಿವ ಸ್ಥಾನದಿಂದ ದೂರ ಸರಿಯುವುದು ಯಡಿಯೂರಪ್ಪರಿಗೆ ದೊಡ್ಡ ಪೆಟ್ಟು ಬಿದ್ದಂತಾಗಿತ್ತು. ಕೂಡಲೇ ಎಚ್ಚೆತ್ತ ಯಡಿಯೂರಪ್ಪ ಸಿ.ಪಿ.ಯೋಗೀಶ್ವರ್ ಗೆ ಕೊಟ್ಟಿದ್ದ ನೀರಾವರಿ ಖಾತೆಯನ್ನು ಮರಳಿ ಮಾಧುಸ್ವಾಮಿಗೆ ನೀಡಿ ಕೈತೊಳೆದುಕೊಂಡಿದ್ದಾರೆ.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm