ಬ್ರೇಕಿಂಗ್ ನ್ಯೂಸ್
17-06-26 05:12 pm HK News Staffer ಕರ್ನಾಟಕ
ಬೆಂಗಳೂರು, ಜೂನ್ 17: ಧರ್ಮಸ್ಥಳ ಬುರುಡೆ ಪ್ರಕರಣ ಹಾಗೂ ಕ್ಷೇತ್ರದ ವಿರುದ್ಧದ ಷಡ್ಯಂತ್ರ ಆರೋಪದಲ್ಲಿ ತಮ್ಮ ಹೆಸರನ್ನು ಎಳೆದು ತರುತ್ತಿರುವುದಕ್ಕೆ ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಸದಾ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡುವ ವ್ಯಕ್ತಿ. ಬಿಜೆಪಿ ವಿರುದ್ಧ ಮಾತನಾಡುತ್ತೇನೆ ಎಂಬ ಕಾರಣಕ್ಕೆ ನನ್ನ ಹೆಸರನ್ನು ಈ ಪ್ರಕರಣದಲ್ಲಿ ಥಳುಕು ಹಾಕಲಾಗುತ್ತಿದೆ” ಎಂದು ಅವರು ಕಿಡಿಕಾರಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್ ಮತ್ತು ತಮ್ಮ ನಡುವಿನ ಸಂಪರ್ಕದ ಬಗ್ಗೆ ಸ್ಪಷ್ಟನೆ ನೀಡಿದರು.
‘ಮಾರಿಕೊಂಡ ಮಾಧ್ಯಮಗಳು’ ವಿವಾದಕ್ಕೆ ಸ್ಪಷ್ಟನೆ
ಸುದ್ದಿಗೋಷ್ಠಿ ಆರಂಭದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಳಸಿದ್ದ ‘ಮಾರಿಕೊಂಡ ಮಾಧ್ಯಮಗಳು’ ಎಂಬ ಪದದ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ಸೋಶಿಯಲ್ ಮೀಡಿಯಾದಲ್ಲಿ ಆ ಪದ ಬಳಕೆಯಾಗಿದ್ದು ನಿಜ. ಆದರೆ ಪ್ರೆಸ್ ಕ್ಲಬ್ಗೆ ಕಳುಹಿಸಿದ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ನಾನು ಆ ಪದ ಬಳಸಿಲ್ಲ. ಅಲ್ಲಿ ಮಾಧ್ಯಮದವರನ್ನು ಆತ್ಮೀಯರು, ಬಂಧುಗಳು ಎಂದೇ ಸಂಬೋಧಿಸಿದ್ದೇನೆ” ಎಂದರು, ಆದರೆ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಪ್ರಕಾಶ್ ರಾಜ್ ಮಧ್ಯೆ ಜಟಾಪಟಿ ಉಂಟಾಯಿತು, ಯಾರು ಮಾರಿಕೊಂಡ ಮಾಧ್ಯಮಗಳು? ಅವರ ಹೆಸರು ಉಲ್ಲೇಖಿಸಿ ಎಂಬ ಪ್ರಶ್ನೆ ಕೇಳಿಬಂತು.
ಚಿನ್ನಯ್ಯನನ್ನು ಭೇಟಿಯೇ ಆಗಿಲ್ಲ
“ಮಾಧ್ಯಮಗಳಲ್ಲಿ ಚಿನ್ನಯ್ಯ ನನ್ನ ಹೆಸರು ಹೇಳಿದ್ದಾನೆ ಎಂದು ವರದಿಯಾಗಿದೆ. ಆತ ಏನು ಹೇಳಿದ್ದಾನೋ ನನಗೆ ಗೊತ್ತಿಲ್ಲ. ಆದರೆ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಮಾತನಾಡಿದ್ದಾನೆ ಎಂಬುದು ನನ್ನ ಅನಿಸಿಕೆ. 200 ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ಆತ ಹೇಳಿದ್ದಾನೆ ಎನ್ನಲಾಗುತ್ತಿದೆ. ಕೆಲವು ಮಾಧ್ಯಮಗಳು ಈ ಷಡ್ಯಂತ್ರದಲ್ಲಿ ಪ್ರಕಾಶ್ ರಾಜ್ ಕೈವಾಡ ಇದೆ ಎಂದು ನೇರವಾಗಿ ತೀರ್ಪು ನೀಡಿವೆ. ಆದರೆ ನಾನು ಚಿನ್ನಯ್ಯ ಅಥವಾ ಗಿರೀಶ್ ಮಟ್ಟಣ್ಣನವರ್ ಅವರನ್ನು ಇದುವರೆಗೂ ಖುದ್ದಾಗಿ ಭೇಟಿಯಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
‘ಮಾಸ್ಕ್ಮ್ಯಾನ್’ ಕರೆ ಮಾಡಿದ ಬಳಿಕ ಪೊಲೀಸರಿಗೆ ತಿಳಿಸಿದ್ದೆ
ಒಂದು ದಿನ ಗಿರೀಶ್ ಮಟ್ಟಣ್ಣನವರ್ ಕಡೆಯಿಂದ ಕರೆ ಬಂತು. ‘ಮಾಸ್ಕ್ಮ್ಯಾನ್’ ಮಾತನಾಡಬೇಕು ಎಂದರು. ಫೋನ್ನಲ್ಲಿ ಚಿನ್ನಯ್ಯ ತಮಿಳಿನಲ್ಲಿ ಮಾತನಾಡಿ, ತನಗೆ ಹಲವು ವಿಷಯಗಳು ಗೊತ್ತಿವೆ, ಭಯವಾಗುತ್ತಿದೆ, ನಿಮ್ಮ ಬೆಂಬಲ ಬೇಕು ಎಂದಿದ್ದ. ಆಗ ನಾನು ಅವನಿಗೆ ವಾಯ್ಸ್ ಮೆಸೇಜ್ ಕಳುಹಿಸುವಂತೆ ಹೇಳಿದೆ. ಆಡಿಯೋ ಬಂದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿ ಮೊಹಾಂತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ವಾಯ್ಸ್ ಮೆಸೇಜ್ ಕೂಡ ಪೊಲೀಸರಿಗೆ ಕಳುಹಿಸಿದ್ದೆ” ಎಂದು ಹೇಳಿದರು.
‘ಸತ್ಯ ಹೇಳಿದರೆ ನಾನೇ ತಬ್ಬಿಕೊಳ್ಳುತ್ತೇನೆ ಎಂದಿದ್ದೆ'
“ನಂತರ ಚಿನ್ನಯ್ಯ ನನಗೆ ಮತ್ತೆ ಕರೆ ಮಾಡಿ ಭಯವಾಗುತ್ತಿದೆ ಎಂದಾಗ, ‘ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್ಐಟಿ ಮುಂದೆ ಹೋಗಿ ಹೇಳು. ಸತ್ಯ ಹೇಳಿದರೆ ಇಡೀ ಊರೇ ನಿನ್ನನ್ನು ಕೊಂಡಾಡುತ್ತದೆ. ನಾನೇ ಬಂದು ನಿನ್ನನ್ನು ತಬ್ಬಿಕೊಳ್ಳುತ್ತೇನೆ’ ಎಂದು ಹೇಳಿದ್ದೆ. ಆದರೆ ಕೆಲ ದಿನಗಳ ಬಳಿಕ ಮೊಹಾಂತಿ ಅವರೇ ಕರೆ ಮಾಡಿ, ‘ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ. ಆತ ಸುಳ್ಳು ಮಾಹಿತಿ ನೀಡುತ್ತಿದ್ದಾನೆ. ಅವನಿಂದ ದೂರ ಇರಿ’ ಎಂದು ಎಚ್ಚರಿಸಿದ್ದರು. ಹೀಗಾಗಿ ನಾನು ಆತನಿಂದ ದೂರವಾದೆ” ಎಂದು ವಿವರಿಸಿದರು.
‘200 ಕೋಟಿ ಎಲ್ಲಿಂದ ತರಲಿ?’
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು 200 ಕೋಟಿ ರೂಪಾಯಿ ಡೀಲ್ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ನಾನು 200 ಕೋಟಿ ರೂಪಾಯಿ ಎಲ್ಲಿಂದ ತರಲಿ? ಪರಮ ಪವಿತ್ರ ಧರ್ಮಸ್ಥಳದ ವಿರುದ್ಧ ನಾನು ಯಾಕೆ ಷಡ್ಯಂತ್ರ ಮಾಡಲಿ? ವಿಷಯವನ್ನು ತಿರುಚಿ ನಾನು ಧರ್ಮದ ವಿರುದ್ಧ ಎಂಬ ಬಣ್ಣ ಬಳಿಯಲಾಗುತ್ತಿದೆ. ನನ್ನ ಪತ್ನಿ ಪ್ರತಿದಿನ ಪೂಜೆ ಮಾಡುತ್ತಾಳೆ. ನಾನು ಆಕೆಯ ನಂಬಿಕೆಯನ್ನು ಗೌರವಿಸುತ್ತೇನೆ” ಎಂದು ಹೇಳಿದರು.
ವೀರೇಂದ್ರ ಹೆಗ್ಗಡೆ ಬಗ್ಗೆ ಮೆಚ್ಚುಗೆ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬಗ್ಗೆ ಮಾತನಾಡಿದ ಅವರು, “ನಾನು ಜೀವನದಲ್ಲಿ ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿದ್ದೇನೆ. ಅವರು ಅತ್ಯಂತ ಶ್ರೇಷ್ಠ ಮತ್ತು ಅದ್ಭುತ ವ್ಯಕ್ತಿ. ಈ ಪ್ರಕರಣದಲ್ಲಿ ಧರ್ಮ, 200 ಕೋಟಿ ರೂಪಾಯಿ, ಷಡ್ಯಂತ್ರದಂತಹ ಕಟ್ಟುಕಥೆಗಳನ್ನು ಜೋಡಿಸುವುದು ಸರಿಯಲ್ಲ” ಎಂದರು.
‘ನನ್ನ ಹೋರಾಟ ಸೌಜನ್ಯ ಸಾವಿನ ನ್ಯಾಯಕ್ಕಾಗಿ’
“ನಾನು ಯಾವುದೇ ರಾಜಕೀಯ ಹುದ್ದೆಗಾಗಿ ಹೋರಾಟ ಮಾಡುತ್ತಿಲ್ಲ. ಧರ್ಮಸ್ಥಳದಲ್ಲಿ ಮೃತಪಟ್ಟ ಹೆಣ್ಣುಮಕ್ಕಳ ಬಗ್ಗೆ ಪ್ರಶ್ನೆ ಕೇಳುವುದು ತಪ್ಪೇ? ಸೌಜನ್ಯ ಹೇಗೆ ಮೃತಪಟ್ಟಳು? ಇತರ ಯುವತಿಯರ ಸಾವುಗಳು ಹೇಗೆ ಸಂಭವಿಸಿದವು? ಎಂಬ ಪ್ರಶ್ನೆಗಳಿಗೆ ಉತ್ತರ ಕೇಳುತ್ತಿದ್ದೇನೆ. ನನ್ನ ಹೋರಾಟ ಸೌಜನ್ಯ ಸೇರಿದಂತೆ ಮೃತರ ನ್ಯಾಯಕ್ಕಾಗಿ ಮಾತ್ರ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಯಾವುದೇ ಷಡ್ಯಂತ್ರದಲ್ಲಿ ನಾನು ಭಾಗಿಯಾಗಿಲ್ಲ” ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದರು.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm