ಬ್ರೇಕಿಂಗ್ ನ್ಯೂಸ್
09-04-26 09:30 pm HK News Staffer ಕರ್ನಾಟಕ
ಮಂಗಳೂರು, ಎಪ್ರಿಲ್ 9: ರಾಜ್ಯದಲ್ಲಿ ಎರಡನೇ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಉಡುಪಿ ಮತ್ತು ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಉಡುಪಿ ಜಿಲ್ಲೆಗೆ 96.39 ಶೇಕಡಾ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ 96.35 ಶೇಕಡಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ 92.34 ಮತ್ತು ಉತ್ತರ ಕನ್ನಡ 91.78 ಶೇ. ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಆಕಾಶಭವನದ ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ಪ್ರಿನ್ಸಿಲ್ಲಾ ಕಾರ್ಡೋಜ(599 ಅಂಕ) ರಾಜ್ಯಕ್ಕೆ ಟಾಪರ್ ಸಾಧನೆ ಮಾಡಿದ್ದಾರೆ. 12 ಮಂದಿ ತಲಾ 598 ಅಂಕ ಪಡೆದು ಗರಿಷ್ಠ ಅಂಕದ ಸಾಧನೆ ಮಾಡಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಅಭಿರಾಮ್ ಭಟ್, ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ಆಂಜೆಲ್ ತಿವಾರಿ, ಹುಕ್ಕೇರಿ ಮೊರಾರ್ಜಿ ದೇಸಾಯಿ ಶಾಲೆಯ ಅಂಕಿತ್ ಕರಟಗಿ, ಮೂಡುಬಿದ್ರೆಯ ನ್ಯೂ ವೈಬ್ರಂಟ್ ಪಿಯು ಕಾಲೇಜಿನ ಧನುಷ್ ಗುತ್ತಿ, ಮಂಗಳೂರಿನ ಆಕಾಶಭವನದ ದಿ ಲರ್ನಿಂಗ್ ಪಿಯು ಕಾಲೇಜಿನ ಮೀನಾಕ್ಷಿ ಉನ್ನಿತ್ತಾನ್, ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ನಂದನ್ ನಾಯಕ್, ಆಳ್ವಾಸ್ ಮೂಡುಬಿದ್ರೆಯ ರಕ್ಷಿತಾ, ಕುಂದಾಪುರ ಜನತಾ ಪಿಯು ಕಾಲೇಜಿನ ರಶ್ಮಿ, ಬೆಂಗಳೂರಿನ ಆಕ್ಸ್ ಫರ್ಡ್ ಪಿಯು ಕಾಲೇಜಿನ ಸಾಯಿ ರಾಘವ್, ಎಕ್ಸ್ ಪರ್ಟ್ ಪಿಯು ಕಾಲೇಜಿನ ಸಮನ್ಯು ಎಸ್. ಶೆಟ್ಟಿ, ಗಂಗಾವತಿ ವಿದ್ಯಾನಿಕೇತನ ಪಿಯು ಕಾಲೇಜಿನ ಯು.ಶ್ರಾವಣಿ, ಮಂಗಳೂರಿನ ಶಾರದಾ ಪಿಯು ಕಾಲೇಜಿನ ವೈಭವಿ ಕರ್ಕೇರ ತಲಾ 598 ಅಂಕ ಪಡೆದಿದ್ದಾರೆ.

ಕಾಮರ್ಸ್ ವಿಭಾಗದಲ್ಲಿ ಇಬ್ಬರು ಟಾಪರ್
ಕಾಮರ್ಸ್ ವಿಭಾಗದಲ್ಲಿ ಬೆಂಗಳೂರಿನ ಶ್ರೀರಾಮಪುರದ ಮಹಾವೀರ ಜೈನ್ ಪಿಯು ಕಾಲೇಜಿನ ಅದಿತಿ ಎ. ಬಾಪು ಮತ್ತು ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ದಿಶಾ 600ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಶ್ರೇಯ ತಂದಿದ್ದಾರೆ. ಬೆಳಗಾವಿಯ ಗೋಗ್ಟೆ ಪಿಯು ಕಾಲೇಜಿನ ಧ್ವನಿ ಕುಲ್ಕರ್ಣಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಾಚೆಲ್ ಡಿಸೋಜ ತಲಾ 599 ಅಂಕ ಪಡೆದಿದ್ದಾರೆ. ಬೆಂಗಳೂರಿನ ಜಯನಗರ ಜೈನ್ ಪಿಯು ಕಾಲೇಜಿನ ದೇವಳಾಪುರ ವೈಷ್ಣವಿ, ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ಪ್ರೇರಣಾ, ಚನ್ನಸಂದ್ರ ಆರೆನ್ನೆಸ್ ಪಿಯು ಕಾಲೇಜಿನ ಸಹನಾ, ಜಯನಗರದ ಟ್ರಾನ್ಸೆಂಡ್ ಪಿಯು ಕಾಲೇಜಿನ ಶ್ರುತಿ, ಜಯನಗರ ಜೈನ್ ಪಿಯು ಕಾಲೇಜಿನ ಸ್ನೇಹಾ, ಮಂಗಳೂರಿನ ಮ್ಯಾಪ್ಸ್ ಪಿಯು ಕಾಲೇಜಿನ ವೃಷಾ ತಲಾ 598 ಅಂಕ ಪಡೆದಿದ್ದಾರೆ.
ಒಂದೇ ಕಾಲೇಜಿಗೆ ಇಬ್ಬರು ಟಾಪರ್
ಕಲಾ ವಿಭಾಗದಲ್ಲಿ ಬಳ್ಳಾರಿ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಅರ್ಚನಾ ಡಿ.ಎಂ., ಅದೇ ಕಾಲೇಜಿನ ಸಂಗೀತಾ ಪಾಟೀಲ್ ಮತ್ತು ಕಲಬುರ್ಗಿಯ ವಿಜಿ ಪಿಯು ಕಾಲೇಜಿನ ಸೃಷ್ಟಿ ತಲಾ 598 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಸುಳ್ಯದ ಶಾರದಾ ಮಹಿಳಾ ಪಿಯು ಕಾಲೇಜಿನ ಫಾತಿಮಾ ಶಾಹ್ಲಾ 595 ಅಂಕ ಪಡೆದಿದ್ದಾರೆ.
The Karnataka 2nd PUC results have been announced, with Udupi and Dakshina Kannada districts once again leading the state in performance. Udupi recorded a pass percentage of 96.39%, followed closely by Dakshina Kannada with 96.35%. Kodagu registered 92.34%, while Uttara Kannada stood at 91.78%. In the Science stream, Princilla Cardoza from The Learning Centre PU College, Akash Bhavan, Mangaluru secured the state first rank, scoring 599 out of 600.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm