ಬ್ರೇಕಿಂಗ್ ನ್ಯೂಸ್
23-02-26 11:14 am HK News Staffer ಕರ್ನಾಟಕ
ಕಾರವಾರ, ಫೆ.23: ಬಹು ನಿರೀಕ್ಷಿತ ಜಿಲ್ಲಾ, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿ ಚುನಾವಣೆಯನ್ನು ಇದೇ ಜೂನ್ ತಿಂಗಳ ಒಳಗೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆ ಬಳಿಕವೇ ಸ್ಥಳೀಯ ಸಂಸ್ಥೆಗಳ ಮೇಲ್ದರ್ಜೆಗೇರಿಸುವ ಕಾರ್ಯ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ''ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಪ್ರಕ್ರಿಯೆ ನಡೆಸಲಾಗುತ್ತಿದೆ. ಜನಸಂಖ್ಯೆ ಆಧರಿಸಿ ವಾರ್ಡ್ಗಳನ್ನು ವಿಂಗಡನೆ ಕಾರ್ಯ ಮಾಡಬೇಕಾಗಿದೆ ಎಂದರು. ಯಾವೆಲ್ಲ ಸ್ಥಳೀಯ ಸಂಸ್ಥೆಗಳು ಮೇಲ್ದರ್ಜೆಗೆ ಏರಿಸಬೇಕು ಎಂಬ ವಿಷಯವನ್ನು ಚುನಾವಣೆ ನಂತರ ಗಮನಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾದ ಮಂಜಗುಣಿ - ಗಂಗಾವಳಿ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. 2018ರಲ್ಲಿ ಈ ಸೇತುವೆಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ನಂತರ ಬಂದ ಸರಕಾರ ಐದು ವರ್ಷ ಸೇತುವೆ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ಮಾಡಿತ್ತು. ಮತ್ತೆ ನಮ್ಮ ಸರಕಾರ ಬಂದ ನಂತರ ಕಾಮಗಾರಿ ಮುಂದುವರಿಸಿ ಈಗ ಉದ್ಘಾಟಿಸಿದ್ದೇವೆ. ಆ ಸಮಯದಲ್ಲಿ 28 ಕೋಟಿ ಇದ್ದ ಅಂದಾಜು ಹೆಚ್ಚು, ಈಗ 35 ಕೋಟಿಗೆ ಏರಿಕೆಯಾಗಿದೆ. ಸೇತುವೆ ನಿರ್ಮಾಣದಿಂದ ಈ ಭಾಗದ ಜನರಿಗೆ 18 ಕಿ.ಮೀ ಸಂಚಾರ ಕಡಿಮೆಯಾಗಲಿದೆ ಎಂದು ಸಿಎಂ ನುಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, 334 ಕಿ.ಮೀ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ನಿಯಮಗಳನ್ನು ಜಾರಿಗೊಳಿಸಲಾಗುವುದು. ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಸ್ಥಳೀಯರು ಉದ್ಯೋಗವನ್ನು ಆರಿಸಿ ಹೊರಗಡೆ ಹೋಗುವುದರ ಬದಲು ಇಲ್ಲಿಯೇ ತಮ್ಮ ಉದ್ಯೋಗವನ್ನು ಕಂಡುಕೊಳ್ಳಬೇಕು ಎಂದರು.
Chief Minister Siddaramaiah on Sunday assured that the long-pending elections to district, taluk, and gram panchayats will be conducted within the month of June. He said the process of upgrading local bodies would be taken up only after the completion of the elections.
23-02-26 12:35 pm
HK News Desk
ಜೂನ್ ಒಳಗಡೆ ಸ್ಥಳೀಯ ಸಂಸ್ಥೆ ಚುನಾವಣೆ ; ಸಿಎಂ ಸಿದ್ದ...
23-02-26 11:14 am
ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್...
21-02-26 11:27 am
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
22-02-26 06:19 pm
HK News Desk
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶರ್ಟ್ ಬಿ...
20-02-26 08:45 pm
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
23-02-26 12:19 pm
Mangalore Correspondent
Mangalore, Thokottu: ವಿದ್ಯುತ್ ಆಘಾತಕ್ಕೊಳಗಾಗಿ ಯ...
23-02-26 12:00 pm
ನನ್ನ ಅಕ್ಕಿ, ತರಕಾರಿ ನಾನೇ ಬೆಳೆಯುತ್ತೇನೆ, ನೀವೂ ಬೆ...
22-02-26 06:55 pm
ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ ಪ್ರಕರಣ ; ಸಾ...
21-02-26 09:30 pm
ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟು ವರ್...
21-02-26 09:02 pm
23-02-26 11:36 am
HK News Desk
ಶಿವಮೊಗ್ಗದಿಂದ ಕೇರಳಕ್ಕೆ ಗೋಸಾಗಣೆ ; ಮಂಗಳೂರಿನಲ್ಲಿ...
22-02-26 10:43 pm
ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ; ಜೈಶ್ ಕಮಾ...
22-02-26 10:00 pm
ಮದುವೆ ದಿನವೇ ಆಘಾತ ; ಹಸೆಮಣೆ ಏರಬೇಕಿದ್ದ ಇಬ್ಬರು ಸೋ...
22-02-26 09:32 pm
ಒಂದು ಕೋಟಿ ಕಾಮಗಾರಿಗೆ 11 ಲಕ್ಷ ಬೇಡಿಕೆ ; ಗುತ್ತಿಗೆ...
21-02-26 05:50 pm