ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ ಕಾರಣ, ಅವರೇ ಹೊಣೆ ; ಸೋದರ, ವೈಟ್ ಗೋಲ್ಡ್ ಮಾಲೀಕ ಬಾಬು ಜೋಸೆಫ್ ಗಂಭೀರ ಆರೋಪ

30-01-26 10:37 pm       Bangalore Correspondent   ಕರ್ನಾಟಕ

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರ ಹಾಗೂ ವೈಟ್ ಗೋಲ್ಡ್ ಕಂಪನಿಯ ಮಾಲೀಕರಾದ ಬಾಬು ಸಿ. ಜೋಸೆಫ್ ಪ್ರತಿಕ್ರಿಯೆ ನೀಡಿದ್ದು ಸಹೋದರನ ಸಾವಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಒತ್ತಡವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು, ಜ.30 : ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರ ಹಾಗೂ ವೈಟ್ ಗೋಲ್ಡ್ ಕಂಪನಿಯ ಮಾಲೀಕರಾದ ಬಾಬು ಸಿ. ಜೋಸೆಫ್ ಪ್ರತಿಕ್ರಿಯೆ ನೀಡಿದ್ದು ಸಹೋದರನ ಸಾವಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಒತ್ತಡವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

“ನನಗೆ ತಿಳಿದಿರುವಂತೆ ಕಳೆದ ಮೂರು ದಿನಗಳಿಂದ ಐಟಿ ದಾಳಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಐಟಿ ಅಧಿಕಾರಿ ಕೃಷ್ಣಪ್ರಸಾದ್ ಅವರು ನನ್ನ ಸಹೋದರನ ಮೇಲೆ ಒತ್ತಡ ಹೇರಿದ್ದರು. ತಮ್ಮ ಸಹೋದರನ ಸಾವಿಗೆ ಐಟಿ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಬಾಬು ಸಿ. ಜೋಸೆಫ್ ಹೇಳಿದ್ದಾರೆ. ವ್ಯಾಪಾರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಇಂದು ಬೆಳಗ್ಗೆ 11 ಗಂಟೆಗೆ ನನ್ನ ಸಹೋದರ ನನ್ನೊಂದಿಗೆ ಮಾತನಾಡಿದ್ದರು. ಅವರು ಕಚೇರಿಯಲ್ಲೇ ಇದ್ದು, ಯಾವಾಗ ದೆಹಲಿಯಿಂದ ಬರ್ತೀಯಾ ಎಂದು ವಿಚಾರಿಸಿದ್ದರು. ಯಾವುದೇ ಅಸಹಜತೆ ಕಾಣಿಸಲಿಲ್ಲ. ಅವರಿಗೆ ಯಾವುದೇ ಸಾಲವೂ ಇರಲಿಲ್ಲ ಎಂದಿದ್ದಾರೆ. 

ಇನ್ಕಮ್ ಟ್ಯಾಕ್ಸ್ ಇಲಾಖೆಯ ಒತ್ತಡದ ಬಗ್ಗೆ ಕಳೆದ ಒಂದು ತಿಂಗಳಿಂದ ತಮ್ಮ ಬಳಿ ಹೇಳಿಕೊಳ್ಳುತ್ತಿದ್ದರು ಎಂದು ಬಾಬು ಸಿ. ಜೋಸೆಫ್ ತಿಳಿಸಿದರು. “ನನ್ನ ಸಹೋದರ ಎಲ್ಲಾ ವಿಚಾರಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಐಟಿ ಅಧಿಕಾರಿಗಳಿಂದ ಆಗುತ್ತಿರುವ ಒತ್ತಡದ ಬಗ್ಗೆ ಅವರು ನನಗೆ ಹಲವು ಬಾರಿ ಹೇಳಿದ್ದಾರೆ” ಎಂದು ಹೇಳಿದರು.

ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಐಟಿ ಪರಿಶೀಲನೆ ನಡೆಯುತ್ತಿತ್ತು ಎಂದು ಅವರು ತಿಳಿಸಿದ್ದು, “ಐಟಿ ಅಧಿಕಾರಿಗಳು ನನ್ನ ಮನೆಗೂ ಬಂದಿದ್ದರು. ಈ ದೇಶದಲ್ಲಿ ಉದ್ಯಮಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲ. ನಾವು ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಐಟಿ ಇಲಾಖೆಯ ಹೆಚ್ಚುವರಿ ಆಯುಕ್ತ ಕೃಷ್ಣಪ್ರಸಾದ್ ಅವರೇ ಸಿ.ಜೆ. ರಾಯ್ ಅವರ ಸಾವಿಗೆ ಹೊಣೆ” ಎಂದಿರುವ ಬಾಬು ಸಿ. ಜೋಸೆಫ್, ತಾವು ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವುದಾಗಿ ತಿಳಿಸಿದ್ದಾರೆ. ಜೋಸೆಫ್ ದೂರಿನಂತೆ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a serious allegation following the reported suicide of Confident Group Chairman C.J. Roy, his brother and White Gold company owner Babu C. Joseph claimed that pressure from Income Tax (IT) officials was the primary reason behind Roy’s death.