ಬ್ರೇಕಿಂಗ್ ನ್ಯೂಸ್
29-07-24 10:41 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 29: ಲೋಕಸಭೆಯಲ್ಲಿ ಒಬ್ಬರನ್ನು ಮುಖ್ಯ ಸಚೇತಕ ಹಾಗೂ 16 ಮಂದಿಯನ್ನು ಸಚೇತಕರನ್ನಾಗಿ ನೇಮಕ ಮಾಡಿ ಬಿಜೆಪಿ ಸಂಸದೀಯ ಮಂಡಳಿ ಕಾರ್ಯದರ್ಶಿ ಶಿವಶಕ್ತಿನಾಥ್ ಭಕ್ಷಿ ಅವರು ಸೋಮವಾರ (ಜುಲೈ 29) ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಚೇತಕ ಹುದ್ದೆ ಪಡೆದಿದ್ದಾರೆ.
ಡಾ.ಸಂಜಯ್ ಜೈಸ್ವಾಲ್ ಅವರನ್ನು ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿದ್ದರೆ, ಇನ್ನುಳಿದ 16 ಜನರನ್ನು ಸಚೇತಕರನ್ನಾಗಿ ನೇಮಿಸಲಾಗಿದೆ. 16 ಜನರ ಸಚೇತಕರ ಪೈಕಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಸ್ಥಾನ ಸಿಕ್ಕಿದೆ. ಈಮೂಲಕ ತಳಹಂತದಿಂದ ಮೇಲಕ್ಕೆ ಬಂದಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಷ್ಟ್ರ ರಾಜಕಾರಣದಲ್ಲಿಯೂ ಮತ್ತೊಂದು ಹಂತಕ್ಕೆ ಹೋಗಿದ್ದಾರೆ.
ತಮ್ಮನ್ನು ಸಚೇತಕರನ್ನಾಗಿ ನೇಮಕ ಮಾಡಿದ ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಗೆ ಕೋಟಾ ಶ್ರೀನಿವಾಸ ಪೂಜಾರಿ ಧನ್ಯವಾದ ತಿಳಿಸಿದ್ದಾರೆ. ಪಕ್ಷದ ಸಂಸದೀಯ ಮಂಡಳಿಯು ನನ್ನನ್ನು ಲೋಕಸಭಾ ಸಚೇತಕ ಹುದ್ದೆಗೆ ಪರಿಗಣಿಸಿ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ವಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿತ್ತು. ಅದರಂತೆ ಈ ಕ್ಷೇತ್ರದಲ್ಲಿ ಗೆದ್ದ ಕೋಟ ಶ್ರೀನಿವಾಸ್ ಪೂಜಾರಿ ಸಂಸತ್ ಪ್ರವೇಶಿಸಿದ್ದಾರೆ. ಇದೀಗ ಇವರನ್ನು ಲೋಕಸಭೆಯಲ್ಲಿ ಸಚಿವ ಸ್ಥಾನ ಸಿಗದಿದ್ದರೂ ಪಕ್ಷದ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
Bjp parliamentary board secretary Shivshaktinath Bakshi on Monday (July 29) issued an order appointing one chief whip and 16 as whips in the Lok Sabha. Udupi-Chikkamagaluru MP Kota Srinivas Poojary has been appointed as the whip.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 01:46 pm
HK News Staffer
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
ಹೊರ್ಮುಜ್ ಜಲಸಂಧಿಯನ್ನು ನಾವೇ ತಡೆಯುತ್ತೇವೆ, ಅಣ್ವಸ್...
12-04-26 10:59 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:52 am
HK News Staffer
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm