ಬ್ರೇಕಿಂಗ್ ನ್ಯೂಸ್
17-11-23 07:15 pm Bangalore Correspondent ಕರ್ನಾಟಕ
ಬೆಂಗಳೂರು, ನ.17: ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಪುತ್ರ, ಮೈಸೂರು ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ. ರಂಗನಾಥ್ ಅವರಿಂದ ಮೋಸ ಹೋಗಿದ್ದೇನೆ ಎಂದು ಹೇಳುತ್ತಿರುವ ಯುವತಿ ಇದೀಗ ಎರಡನೇ ಪತ್ನಿಯಾಗಿ ಬೇಕಾದರೂ ಇರುತ್ತೇನೆ, ಅವರು ನನಗೆ ಬೇಕೇ ಬೇಕು ಎಂದು ಹಠ ಹಿಡಿದಿದ್ದಾಳೆ.
ಒಂದುವರೆ ವರ್ಷದ ಹಿಂದೆ ಪರಿಚಯವಾಗಿ, ಪ್ರೀತಿಸಿ, ದೈಹಿಕ ಸಂಪರ್ಕವನ್ನೂ ಹೊಂದಿದ್ದ ಇವರಿಬ್ಬರ ನಡುವೆ ಈಗ ವೈಮನಸ್ಸು ಹುಟ್ಟಿಕೊಂಡಿದೆ. ರಂಗನಾಥ್ ತನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಆಕೆ ಆರೋಪಿಸುತ್ತಿದ್ದರೆ, ಯುವತಿ ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ರಂಗನಾಥ್ ಕೌಂಟರ್ ದೂರು ನೀಡಿದ್ದಾರೆ.
ಈ ನಡುವೆ ಮಾಧ್ಯಮಗಳ ಜತೆಗೆ ಮಾತನಾಡಿರುವ ಯುವತಿ ತನಗೆ ರಂಗನಾಥ್ ಬೇಕೇಬೇಕು ಎಂದು ಹಠ ಹಿಡಿದಿದ್ದಾಳೆ. ರಂಗನಾಥ್ ನನ್ನು ನನ್ನ ಮುಂದೆ ತಂದು ನಿಲ್ಲಿಸಿ ಎಂದು ಗೋಗರೆದಿದ್ದಾಳೆ. ಜತೆಗೆ ಮೈಸೂರಿನಲ್ಲಿರುವ ಮನೆಗೆ ಹೋಗುವುದಾಗಿ ಹೇಳಿದ್ದಾಳೆ. ಅತ್ತ ರಂಗನಾಥ್ ಈ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾರೆ.
ಮೊದಲ ಭೇಟಿಯಲ್ಲೇ ಸಂಬಂಧದ ಮಾತು ಶುರುವಾಗಿತ್ತು!
2022ರಲ್ಲಿ ಮೈಸೂರಿನಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಮ್ಮ ಭೇಟಿ ಆಗಿತ್ತು. ಆಗ ನನ್ನನ್ನು ಮಾತನಾಡಿಸಿದ ಅವರು ನನಗಿನ್ನೂ ಮಗು ಆಗಿಲ್ಲ, ಯಾರಿಗೂ ಗೊತ್ತಾಗದಂತೆ ಮೆಂಟೇನ್ ಮಾಡೋಣ. ಬಳಿಕ ಮೈಸೂರಿನ ಹೋಟೆಲ್‌ನಲ್ಲಿ ಒಂದು ರಾತ್ರಿ ಸ್ಟೇ ಆದಾಗ ಪರಸ್ಪರ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ರಂಗನಾಥ್ ಮದುವೆ ಆಗಿದ್ದು ಮೊದಲು ಗೊತ್ತಿರಲಿಲ್ಲ ;
ರಂಗನಾಥ್‌ಗೆ ಮದುವೆ ಆಗಿದ್ದು ನನಗೆ ಮೊದಲು ಗೊತ್ತಿರಲಿಲ್ಲ. ಒಂದು ತಿಂಗಳ ನಂತರ ಸಂಶಯ ಬರಲು ಶುರುವಾಯಿತು. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡಿದ್ದಾರೆ. ನಾನು ಅವರನ್ನು ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಯುವತಿ ಹೇಳಿದ್ದಾರೆ.
ನನ್ನ ಬಳಿ ರಂಗನಾಥ್ ಹೆಂಡ್ತಿ ನಂಬರೂ ಇಲ್ಲ, ನಾನು ಜಾತಿ ಹೆಸರಲ್ಲಿ ಬೈದಿಲ್ಲ ;
ನನಗೆ ಮಗು ಇಲ್ಲ, ಕಾನ್ಫಿಡೆನ್ಶಿಯಲ್ಲಾಗಿ ಇರೋಣ ಎಂದು ಹೇಳಿ ನಂಬಿಸಿ ನನ್ನ ಜತೆ ಸಂಪರ್ಕ ಬೆಳೆಸಿದ್ದಾರೆ. ಇದೇ ವೇಳೆ ರಂಗನಾಥ್ ಜತೆಗಿರುವ ಚಿತ್ರಗಳನ್ನು ಪತ್ನಿಗೆ ಕಳುಹಿಸಿಕೊಟ್ಟಿರುವ ಆಪಾದನೆಯನ್ನು ತಳ್ಳಿ ಹಾಕಿದ್ದಾರೆ. ತಾನು ಆ ರೀತಿ ಮಾಡಿಲ್ಲ. ರಂಗನಾಥ್ ಹೆಂಡ್ತಿಯ ಫೋನ್ ನಂಬರ್ ಕೂಡಾ ಇಲ್ಲ ಎಂದಿದ್ದಾರೆ.
ಮೋಸ ಮಾಡಲು ಯತ್ನಿಸುತ್ತಿರುವ ರಂಗನಾಥ್‌ಗೆ ಬಾಯಿಗೆ ಬಂದಂತೆ ಬೈದಿದ್ದು ನಿಜ. ಆದರೆ, ಎಲ್ಲೂ ಜಾತಿಯ ಹೆಸರಿನಲ್ಲಿ ಬೈದಿಲ್ಲ. ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.
ನನ್ನನ್ನು ಹೆಂಡತಿಯಾಗಿ ಸ್ವೀಕರಿಸಲೇಬೇಕು, ಅದೊಂದೇ ಬೇಡಿಕೆ ;
ಅವನಿಗೆ ಒಂದು ಮಗು ಕೊಡಿಸಬೇಕು ಎಂಬ ಸೆಂಟಿಮೆಂಟ್ ಆಧಾರದಲ್ಲಿ ನಾನು ಅವನ ಜತೆ ಸೇರಿದೆ. ಆದರೆ, ಅವನು ಅವಾಯ್ಡ್ ಮಾಡಲು ಶುರು ಮಾಡಿದ. ಕೊನೆಗೆ ನನ್ನನ್ನು ದೂರ ಮಾಡಲು ಮುಂದಾದ. ಮದುವೆ ಮಾಡಿಕೊಳ್ಳಿ ಎಂದು ಕಾಲಿಗೆ ಬಿದ್ದಾಗಲೂ ತಿರಸ್ಕರಿಸಿದ. ಹಣ ಕೊಟ್ಟು ನನ್ನನ್ನು ದೂರ ಮಾಡಲು ಅವನ ಸ್ನೇಹಿತರು ಮುಂದಾದರು. ಆದರೆ, ನಾನು ಹಣಕ್ಕಾಗಿ ಏನನ್ನೂ ಮಾಡಿಲ್ಲ. ಹೀಗಾಗಿ ತಿರಸ್ಕರಿಸಿದೆ. ರಂಗನಾಥ್ ಅಪ್ಪನಿಗೂ ವಿಷಯ ತಲುಪಿಸಿದ್ದೇನೆ. ಅವರು ಕಾನೂನು ಪ್ರಕಾರ ಕೈಗೊಳ್ಳಬಹುದು ಎಂದು ಹೇಳಿದ್ದಾರೆ. ಈಗಲೂ ನನ್ನ ಬೇಡಿಕೆ ಒಂದೇ. ನನ್ನನ್ನು ಹೆಂಡತಿಯಾಗಿ ಸ್ವೀಕರಿಸಲೇಬೇಕು ಎಂದು ಯುವತಿ ಹೇಳಿದ್ದಾಳೆ.
ಮಗನನ್ನು ನನ್ನ ಮುಂದೆ ಕರೆಸಿ ಎಂದು ದೇವೇಂದ್ರಪ್ಪಗೆ ಫೋನ್ ;
ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮುಂದೆ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಯುವತಿ ಅಲ್ಲಿಂದಲೇ ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರಿಗೆ ಕರೆ ಮಾಡಿ ನಿಮ್ಮ ಮಗನನ್ನು ನನ್ನ ಮುಂದೆ ಕಳುಹಿಸಿ ಎಂದು ಆಗ್ರಹಿಸಿದರು. ಜತೆಗೆ ಸಂಸದರನ್ನೂ ತರಾಟೆಗೆ ತೆಗೆದುಕೊಂಡರು.
Ballari BJP MP Devendrappa son love and sex case, Woman wants to be his second wife atleast, makes call to MP. A woman has filed a case of cheating and criminal intimidation against the son of Bellary MP Y Devendrappa, Ranganath, with a police station in Bengaluru over a false marriage promise.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 10:54 pm
Mangalore Correspondent
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm