ಬ್ರೇಕಿಂಗ್ ನ್ಯೂಸ್
30-04-23 03:48 pm Bangalore Correspondent ಕರ್ನಾಟಕ
ಬೆಂಗಳೂರು, ಎ.30 : ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಧನಾತ್ಮಕ ಅಂಶಗಳನ್ನು, ಜನರ ಭಾಗವಹಿಸುವಿಕೆಯನ್ನು, ಜನರ ಸಾಧನೆ, ಸರ್ಕಾರದ ವಿವಿಧ ಯೋಜನೆಗಳು, ಪ್ರಕೃತಿ ರಕ್ಷಣೆ, ಅಮೃತ್ ಸರೋವರ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಹೀಗೆ ಮನ್ ಕೀ ಬಾತ್ ಒಂದು ಜನರ ಆಂದೋಲನ ಆಗಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೂರನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದರು.
ಮನ್ ಕೀ ಬಾತ್ ನನಗೆ ಕಾರ್ಯಕ್ರಮವಲ್ಲ, ಇದು ಈಶ್ವರಿ ಸ್ವರೂಪವಾದ ಜನರ ಪೂಜೆಯಾಗಿದೆ. ನನ್ನ ಆಧ್ಯಾತ್ಮಿಕ ಯಾತ್ರೆಯಾಗಿದೆ. ಈ ದಿನ ನಾವು ನೂರನೇ ಕಾರ್ಯಕ್ರಮ ತಲುಪಿದ್ದೇವೆ. ಈ ಕಾರ್ಯಕ್ರಮದಲ್ಲಿ ನಾನು ಮಾತನಾಡುವಾಗ ಸಾಕಷ್ಟು ಬಾರಿ, ಬಾವುಕನಾಗಿದ್ದೇನೆ. ಸಮಾಜದ ಅನೇಕ ನಿಜವಾದ ನಾಯಕರನ್ನು ನೆನೆಯಲು ಈ ಮನ್ ಕೀ ಬಾತ್ ಉತ್ತಮ ಕಾರ್ಯಕ್ರಮವಾಗಿದೆ.
ಮನ್ ಕೀ ಬಾತ್ ಮೂಲಕ 'ಭೇಟಿ ಬಚಾವೊ, ಭೇಟಿ ಪಡಾವೊ' ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಮ್ಮ ನಾರಿಯರ ಶಕ್ತಿ ಅನಾವರಣವಾಯಿತು ಎಂದರು.
ಆತ್ಮನಿರ್ಭರ ಯೋಜನೆ ಕುರಿತು ದೇಶದ ಯುವಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜನ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ವಿಚಾರ ಮಾಡಲಾಯಿತು. ಉದ್ಯಮಿಗಳಿಗೆ ಉತ್ತೇಜನ ನೀಡಲಾಯಿತು. ಗೊಂಬೆಗಳ ತಯಾರಿಕೆ ಮತ್ತಯ ಆತ್ಮನಿರ್ಭರ ಭಾರತಕ್ಕೆ ಸಾಕಷ್ಟು ಪ್ರಚಾರ ದೊರೆಯಿತು. ಸ್ವಚ್ಛ ಭಾರತಕ್ಕೆ ಈ ಕಾರ್ಯಕ್ರಮ ಹೊಸ ಮೈಲಿಗಲ್ಲು ಎಂದರು.
ಇನ್ನು ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಮಾಜಕ್ಕೆ ಪ್ರೇರಣೆಯಾಗಿದೆ. ವೋಕಲ್ ಫಾರ್ ಲೋಕಲ್ ಮತ್ತಷ್ಟು ಗಟ್ಟಿಯಾಗಿದೆ ಎಂದರು.
ಯುನೆಸ್ಕೋ ಡಿಜಿ, ಮನ್ ಕೀ ಬಾತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಭಾರತದ ಶಿಕ್ಷಣ ಹಾಗೂ ಸಂಸ್ಕೃತಿ ಬಗ್ಗೆ ಅವರು ಮಾತನಾಡಿದ್ದಾರೆ. ಅಲ್ಲದೆ ಜಿ೨೦ ಗೆ ಅಧ್ಯಕ್ಷತೆ ವಹಿಸಿದ್ದು, ಎಲ್ಲರೂ ಒಟ್ಟಾಗಿ ದೇಶದ ಅಭಿವೃದ್ಧಿಯತ್ತ ಸಾಗೋಣ, ನವಭಾರತದ ನಿರ್ಮಾಣ ಮಾಡೋಣ ಎಂದು ದೇಶದ ಜನತೆಗೆ ಕರೆ ನೀಡಿದರು.
ಪ್ರತೀ ತಿಂಗಳು, ಜನರ ಪತ್ರಗಳನ್ನು ಓದುವಾಗ ಭಾವನೆಗೆ ಒಳಗಾಗಿದ್ದೇನೆ. ನಾನು ಸಮಾಧಾನಪಡಿಸಿಕೊಂಡಿದ್ದೇನೆ. ಎಲ್ಲರೂ ಮನ್ ಕೀ ಬಾತ್ ನ ೧೦೦ ನೇ ಕಾರ್ಯಕ್ರಮಕ್ಕೆ ಶುಭಾಶಯ ತಿಳಿಸಿದ್ದೀರಿ ಆದರೆ, ಮನ್ ಕೀ ಬಾತ್ ನಿಜವಾಗಿ, ದೇಶದ ಕೋಟ್ಯಾಂತರ ಜನರಿಗೆ ಈ ಅಭಿನಂದನೆ ಸಲ್ಲಿಸಬೇಕು. 2014 ರಲ್ಲಿ ವಿಜಯದಶಮಿಯಂದು ಮನ್ ಮೀ ಬಾತ್ ಆರಂಭಿಸಲಾಗಿತ್ತು. ಜನರ ಭಾಗವಹಿಸುವಿಕೆಯನ್ನು, ಖುಷಿ ವಿಚಾರಗಳನ್ನು ಸಂಭ್ರಮಿಸಿದ್ದೇವೆ. ಬರಾಕ್ ಒಬಾಮಾ ಜೊತೆ ಮಾತಾಡಿದ ಸಂಚಿಕೆ ಇಡೀ ವಿಶ್ವದಲ್ಲಿ ಸುದ್ದಿಯಾಗಿತ್ತು. ಮನ್ ಕೀ ಜನರಿಂದ ದೂರ ಹೋಗಲು ಬಿಟ್ಟಿಲ್ಲ ಎಂದರು.
Prime Minister Narendra Modi on Sunday addressed the 100th episode of his monthly 'Mann ki Baat' radio programme on Sunday. The address was broadcast live in the United Nations headquarters in New York. It also aired in the UN's Trusteeship Council Chamber.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm