ಬ್ರೇಕಿಂಗ್ ನ್ಯೂಸ್
01-12-22 12:24 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.1 : ತನ್ನ ವಿರುದ್ಧ ಟೀಕೆ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಯತ್ನಾಳ್ ಹೆಸರೆತ್ತದೆ ವ್ಯಂಗ್ಯವಾಗಿ ಚುಚ್ಚಿದ್ದಾರೆ.
ಜೋಕರ್ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಜೋಕರ್ ಮಾತನ್ನು ಜೋಕ್ ಆಗಿಯೇ ತೆಗೆದುಕೊಳ್ಳಬೇಕು. ಪ್ರತಿನಿತ್ಯ ಒಂದೇ ಜೋಕ್ ಹೇಳಿದರೆ ಜನರು ನಗಲ್ಲ. ಹೊಸ ಹೊಸ ಜೋಕ್ ಹೇಳಿದರೆ ಆ ಜೋಕರ್ಗೆ ಉದ್ಯೋಗ ಸಿಗುತ್ತೆ. ಇಲ್ಲವಾದ್ರೆ ಅವರನ್ನು ಜನ ಉದಾಸೀನ ಮಾಡ್ತಾರೆ. ಅದೇ ರೀತಿ ಅ ಜೋಕರ್ಗಳನ್ನು ಉದಾಸೀನ ಮಾಡಬೇಕು ಎಂದು ಹೇಳುವ ಮೂಲಕ ಯತ್ನಾಳ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಜೋಕರ್ಗಳನ್ನು ಜೋಕ್ ಮಾಡಲು ಬಿಟ್ಟು ನಾವು ಮೀಸಲಾತಿ ಕಡೆ ಗಟ್ಟಿಯಾಗಿ ನಿಲ್ಲಬೇಕಿದೆ. ಕೆಲವರಿಗೆ ಮತ್ತೊಬ್ಬರನ್ನು ಬೈಯುವ ಚಟ ಇರುತ್ತದೆ. ಮತ್ತೊಬ್ಬರನ್ನು ತೆಗಳುವುದರಲ್ಲಿ ಸಂತೋಷ ಪಡೆದುಕೊಳ್ಳುತ್ತಾರೆ. ಹತಾಶ ಮನೋಭಾವದಿಂದ ಈ ರೀತಿ ಮಾತನಾಡುತ್ತಾರೆ ಎಂದು ವಚನಾನಂದ ಸ್ವಾಮೀಜಿ ವ್ಯಂಗ್ಯ ಮಾಡಿದರು.
ಹಗುರವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ಮಾತನಾಡುವುದಿಲ್ಲ. ಪ್ರತಿಯೊಬ್ಬರಿಗೆ ಅವರದ್ದೇ ಅದ ವಾಕ್ ಸ್ವಾತಂತ್ರ್ಯ ಇರುತ್ತದೆ. 2ಎ ಮೀಸಲಾತಿ ಬಗ್ಗೆ ಕಾನೂನು ತೊಡಕುಗಳು ಇಲ್ಲದೇ ನಮ್ಮ ಜನರಿಗೆ ಮೀಸಲಾತಿ ಕೊಡಿಸುವುದೇ ನಮ್ಮ ಉದ್ದೇಶ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಹಗುರವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ನಾವು ಮಾತನಾಡಿದ್ರೆ ಅದು ಹಗುರತನ ಆಗುತ್ತದೆ. ನಾವು ಪೀಠದ ಘನತೆ ಮತ್ತು ಗೌರವವನ್ನು ಹೆಚ್ಚು ಮಾಡಬೇಕೇ ವಿನಃ ಕಡಿಮೆ ಮಾಡುವ ಕೆಲಸಕ್ಕೆ ನಾವ್ಯಾರು ಮುಂದಾಗಬಾರದು. ಸಮಾಜ ಇವರೆಲ್ಲರನ್ನು ಗಮನಿಸುತ್ತಿದೆ ಎಂದರು.
Jokers should be taken as a joke. Mr. Vachanananda Swamiji of Panchamasali Harihara Peetha indirectly gave a tong to MLA Basanagowda Yatnal, saying that he should not worry about the jokers. Without mentioning the name of MLA Basanagowda Yatnal, who is constantly attacking Sri Vachanananda Swamiji, he attacked, people will not laugh if he tells the same joke every day, if he tells a new joke, that joker will get a job. Otherwise people will ignore them. Similarly, he said that we should also ignore those jokers.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm