ಬ್ರೇಕಿಂಗ್ ನ್ಯೂಸ್
17-10-22 01:23 pm Bangalore Correspondent ಕರ್ನಾಟಕ
ಬೆಂಗಳೂರು, ಅ.17 : ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬಂದಿ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ದೂರು ಸಲ್ಲಿಸಿದ್ದಾರೆ.
ಕಚೇರಿಯ 25ಕ್ಕೂ ಹೆಚ್ಚು ಎಫ್ ಡಿಎ, ಎಸ್ಡಿಎಗಳಿಂದ ಎಡಿಜಿಪಿಗೆ ದೂರು ನೀಡಲಾಗಿದೆ. ಸೆಪ್ಟೆಂಬರ್ 3ರಂದು ಈ ಬಗ್ಗೆ ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯ ವಿಷಯಗಳನ್ನ ದೊಡ್ಡದು ಮಾಡಿ ಶಿಸ್ತುಕ್ರಮಕ್ಕೆ ಮುಂದಾಗುತ್ತಾರೆ. ಉದ್ದೇಶಪೂರ್ವಕ ಸಿಬ್ಬಂದಿಗಳನ್ನ ತಡರಾತ್ರಿ ವರೆಗೂ ಕಚೇರಿಯಲ್ಲಿ ಉಳಿಸಿಕೊಳ್ಳುತ್ತಾರೆ. ನಿಶಾ ಜೇಮ್ಸ್ ಸಂಜೆ 6ರ ನಂತರ ಕೆಲಸ ಶುರುಮಾಡಿ ರಾತ್ರಿ 3ಕ್ಕೆ ಮುಗಿಸ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜೊತೆ ಸಮಯ ಕಳೆಯಲು ಆಗ್ತಿಲ್ಲ. ನಿಶಾ ಜೇಮ್ಸ್ ಕಿರುಕುಳದಿಂದಾಗಿ ನಮಗೆ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ರಾಹೀನತೆಯಿಂದ ಕಾಯಿಲೆ ಎದುರಾಗುತ್ತಿವೆ ಎಂದು ಸಿಬ್ಬಂದಿ ನೀಡಿದ್ದ ದೂರಿನ ಪ್ರತಿ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಬ್ಬಂದಿಯನ್ನು ತುಚ್ಛವಾಗಿ ಕಾಣ್ತಾರೆ ನಿಶಾ ಜೇಮ್ಸ್ !
ನಿಶಾ ಜೇಮ್ಸ್ ಅವರ ನಡೆಯಿಂದ ಕಿರುಕುಳಕ್ಕೊಳಗಾದ 25 ಸಿಬ್ಬಂದಿಗೆ ವೇತನ ಬಡ್ತಿಯನ್ನ ತಡೆ ಹಿಡಿಯಲಾಗಿದೆ. ನಿಶಾ ಅವರು ಕಡತಗಳನ್ನ ಸಮಯಕ್ಕೆ ಸರಿಯಾಗಿ ನೋಡದೆ, ತಿಂಗಳ ಕಾಲ ಸಹಿ ಮಾಡದೇ ಪೆಂಡಿಂಗ್ ಇಡ್ತಾರೆ. ಇದರಿಂದ ಕಡತ ವಿಲೇವಾರಿ ತಡವಾಗ್ತಿದೆ. ನಿಶಾ ಜೇಮ್ಸ್ ಕಚೇರಿಯಲ್ಲಿ ಹಿಂದೂ ದೇವರ ಫೋಟೋ ಇಡಲಿಕ್ಕೆ ಅವಕಾಶ ನೀಡುವುದಿಲ್ಲ. ಕನ್ನಡದಲ್ಲಿ ವ್ಯವಹರಿಸುವುದಿಲ್ಲ, ಕನ್ನಡ ಮಾತಾಡುವ ಸಿಬ್ಬಂದಿಯನ್ನ ತುಚ್ಛವಾಗಿ ಕಾಣ್ತಾರೆ. ಕಚೇರಿಯಲ್ಲಿ ತೊಂದರೆ ಕಷ್ಟಗಳನ್ನ ಹೇಳಲಿಕ್ಕೆ ಸಿಬ್ಬಂದಿ ಬಂದ್ರೆ ಭಿಕ್ಷುಕರಂತೆ ಕಾಣ್ತಾರೆ. ಮಹಿಳಾ ಟೈಪಿಸ್ಟ್ ತಾನು ಗರ್ಭಿಣಿ ಎಂದು ತಿಳಿಸಿದ್ರು ಕಚೇರಿಯಲ್ಲಿ 9 ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದರು. ಇದರಿಂದ ಗರ್ಭಿಣಿ ಟೈಪಿಸ್ಟ್ ಸಿಬ್ಬಂದಿಗೆ ಮಾನಸಿಕ ಹಿಂಸೆಯಾಗಿ ಗರ್ಭಪಾತವಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.
Bangalore DCP Nisha James is alleged of giving Mental torture to police staffs, a complaint has been filed to the Bangalore Commissioner of Police.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am