ಬ್ರೇಕಿಂಗ್ ನ್ಯೂಸ್
23-05-22 07:21 pm HK News Desk ಕರ್ನಾಟಕ
ಶಿವಮೊಗ್ಗ, ಮೇ 23 : ವಿದೇಶದಲ್ಲಿ ಕೆಲವೊಮ್ಮೆ ನಾಲ್ಕು ಮಕ್ಕಳು, ಆರು ಮಕ್ಕಳನ್ನು ಹೆತ್ತಿದ್ದು ಕೇಳಿದ್ದೇವೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾಳೆ.
ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಆರೀಫ್ ಎಂಬವರ ಪತ್ನಿ, 22 ವರ್ಷ ವಯಸ್ಸಿನ ಅಲ್ಮಾಜ್ ಬಾನು ಎಂಬಾಕೆ ಒಂದೇ ಹೆರಿಗೆಯಲ್ಲಿ ನಾಲ್ಕು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಯಲ್ಲಿ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯಾದ ಎರಡು ಗಂಡು ಮತ್ತು 2 ಹೆಣ್ಣು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದ ಪ್ರಕಾರ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡುವ ಪ್ರಕರಣ ವಿರಳ. 5.12 ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿ 4 ಮಕ್ಕಳಿಗೆ ಜನ್ಮ ನೀಡುವುದು ಕಂಡುಬರುತ್ತದೆ ಎನ್ನುವ ಅಂಕಿ ಅಂಶಗಳಿವೆ. ಅವಳಿ - ಜವಳಿ, ತ್ರಿವಳಿ ಹೀಗೆ ಹೆಚ್ಚು ಮಕ್ಕಳಾಗುವುದಕ್ಕೆ ಅನುವಂಶೀಯ ಅಂಶಗಳೇ ಕಾರಣ ಎಂದು ಹೆರಿಗೆ ಮಾಡಿಸಿದ ಹಿರಿಯ ಪ್ರಸೂತಿ ತಜ್ಞೆ ಡಾ. ಚೇತನಾ ಎನ್. ತಿಳಿಸಿದ್ದಾರೆ.
ಅಂದಹಾಗೆ, ಅಲ್ಮಾಬಾನು ಹೊಟ್ಟೆಯಲ್ಲಿ ನಾಲ್ಕು ಮಕ್ಕಳನ್ನು ಹೊಂದಿರುವುದು ಸ್ಕ್ಯಾನಿಂಗ್ ವೇಳೆಯೇ ತಿಳಿದುಬಂದಿತ್ತು. ಹಾಗಾಗಿ ಆಕೆಯನ್ನು ವಿಶೇಷ ನಿಗಾ ವಹಿಸುವಂತೆ ವೈದ್ಯರು ಸೂಚಿಸಿದ್ದರು. ಸಾಮಾನ್ಯವಾಗಿ ಹೆಚ್ಚು ಮಕ್ಕಳಿದ್ದರೆ 28 ವಾರಕ್ಕೆ ಹೆರಿಗೆಯಾಗಿ ಮಕ್ಕಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಈಕೆ ಪೂರ್ತಿ 32 ವಾರಗಳ ಕಾಲ ಆರೋಗ್ಯವಾಗಿದ್ದು ಇಂದು ಬೆಳಗ್ಗೆ ಹೆರಿಗೆ ನೋವು ಬಂದು ನೇರವಾಗಿ ಆಸ್ಪತ್ರೆಗೆ ಬಂದಿದ್ದರು. ನಾರ್ಮಲ್ ಹೆರಿಗೆಯಲ್ಲೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಿಂದಾಗಿ ಮಕ್ಕಳು ಕೂಡ ಆರೋಗ್ಯದಲ್ಲಿದ್ದಾರೆ ಎಂದು ಹೆರಿಗೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಆರೋಗ್ಯಪೂರ್ಣ ಹೆರಿಗೆಯ ಕಾರಣಕ್ಕೆ ಸರ್ಜಿ ಆಸ್ಪತ್ರೆಯ ವೈದ್ಯರ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Arif's wife, 22-year-old Almaj Banu, from Tadasa village in Bhadravathi taluk, has given birth to 4 children. Four children have been born at the Sarji hospital in Shimoga town at 7.30 am on Monday . The hospital staff said that the mother and mother of 2 children and 2 girls were in good health.According to the medical field, giving birth to 4 children together is very rare. Only one in 5.12 lakh people is expected to give birth to 4 children.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm