ಬ್ರೇಕಿಂಗ್ ನ್ಯೂಸ್
03-12-20 03:45 pm Source: GIZBOT Mutthuraju H M ಡಿಜಿಟಲ್ ಟೆಕ್
ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಅಮಾಜ್‌ಫಿಟ್ ಕಂಪೆನಿ ತನ್ನದೇ ಆದ ಜನಪ್ರಿಯತೆಯನ್ನ ಪಡೆದುಕೊಂಡಿದೆ. ತನ್ನ ಭಿನ್ನವಾದ ವಿನ್ಯಾಸ ಹಾಗೂ ವಿಶೇಷ ಫೀಚರ್ಸ್ ಸ್ಮಾರ್ಟ್‌ವಾಚ್‌ಗಳ ಮೂಲಕ ಬಳಕೆದಾರರ ಮನಸ್ಸನ್ನು ಗೆದ್ದಿದೆ. ಸದ್ಯ ಇದೀಗ ಹುವಾಮಿ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಮತ್ತು ಅಮಾಜ್‌ಫಿಟ್ ಪಾಪ್ ಪ್ರೊ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಅಮಾಜ್‌ಫಿಟ್ GTS 2 ಮಿನಿ ಮೂಲತಃ ಅಮಾಜ್‌ಫಿಟ್ ಜಿಟಿಎಸ್ 2 ಸ್ಮಾಲ್ ಎಡಿಷನ್ ಆಗಿದೆ.

ಹೌದು, ಅಮಾಜ್ ಫಿಟ್ ಸಂಸ್ಥೆ ಹೊಸ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಮತ್ತು ಅಮಾಜ್‌ಫಿಟ್ ಪಾಪ್ ಪ್ರೊ ಸ್ಮಾರ್ಟ್‌ವಾಚ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಅಮಾಜ್‌ಫಿಟ್ ಜಿಟಿಎಸ್ 2 ಮಿನಿ 1.55-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಮತ್ತು 5 ಎಟಿಎಂ ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಬರುತ್ತದೆ. ಅಮಾಜ್‌ಫಿಟ್ ಪಾಪ್ ಪ್ರೊ ಅಮಾಜ್‌ಫಿಟ್ ಪಾಪ್‌ನ ಜಿಪಿಎಸ್ ಮಾದರಿಯಾಗಿದ್ದು, 1.43-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ.

ಅಮಾಜ್‌ಫಿಟ್ GTS 2 ಮಿನಿ
ಅಮಾಜ್‌ಫಿಟ್ ಜಿಟಿಎಸ್ 2 ಮಿನಿ 354x306 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 1.55-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 301 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದು ಅಲ್ಯೂಮಿನಿಯಂ ಬಾಡಿಯನ್ನು ಹೊಂದಿದ್ದು, ಸ್ಮಾರ್ಟ್ ವಾಚ್ ಅನ್ನು 5ATM ಎಂದು ರೇಟ್ ಮಾಡಲಾಗಿದೆ. ಇದು 50 ಮೀ ವರೆಗೆ ನೀರಿನ ನಿರೋಧಕವಾಗಿದೆ. ಇನ್ನು ಈ ವಾಚ್ ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಹೇಳಲಾಗಿದ್ದು, ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸಲಿದೆ. ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಬಯೋಟ್ರಾಕರ್ ಮತ್ತು 24 ಗಂಟೆಗಳ ಹೃದಯ ಬಡಿತ ಮತ್ತು ಎಸ್‌ಪಿಒ 2 ಮಾನಿಟರಿಂಗ್‌ಗಾಗಿ 2 ಪಿಪಿಜಿ ಫೀಚರ್ಸ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಸ್ಲೀಪ್ ಟ್ರ್ಯಾಕಿಂಗ್, ಚಟುವಟಿಕೆ ಟ್ರ್ಯಾಕಿಂಗ್ ಮತ್ತು 70 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ನೀಡುತ್ತದೆ.
ಅಮಾಜ್‌ಫಿಟ್ ಪಾಪ್ ಪ್ರೊ ಅಮಾಜ್‌ಫಿಟ್ ಪಾಪ್ ಪ್ರೊ ವಾಚ್ 320x302 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 1.43-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಂಟಿ-ಫಿಂಗರ್‌ಪ್ರಿಂಟ್ ಲೇಪನವನ್ನು ಹೊಂದಿದೆ. ಈ ವಾಚ್ ಬ್ಲೂಟೂತ್ ವಿ 5.0 ನೊಂದಿಗೆ ಬರುತ್ತದೆ ಮತ್ತು ಇದು ಆಂಡ್ರಾಯ್ಡ್ 5.0 ಅಥವಾ ಅದಕ್ಕಿಂತ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇನ್ನು ಅಮಾಜ್‌ಫಿಟ್ ಪಾಪ್ ಪ್ರೊ ಜಿಪಿಎಸ್ ಟ್ರ್ಯಾಕಿಂಗ್‌ನೊಂದಿಗೆ ಬರುತ್ತದೆ ಮತ್ತು 60 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ನೀಡುತ್ತದೆ. ಇದು ಆಪ್ಟಿಕಲ್ ಹೃದಯ ಬಡಿತ ಸಂವೇದಕ ಮತ್ತು ಎಸ್‌ಪಿಒ 2 ರಕ್ತ ಆಮ್ಲಜನಕ ಮಾನಿಟರ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಅಮಾಜ್‌ಫಿಟ್ ಜಿಟಿಎಸ್ 2 ಮಿನಿ CNY 699 (ಸುಮಾರು ರೂ. 7,800) ಬೆಲೆಯನ್ನು ಹೊಂದಿದ್ದು, ಅಬ್ಸಿಡಿಯನ್ ಬ್ಲ್ಯಾಕ್, ರೋಸ್ ಪಿಂಕ್ ಮತ್ತು ಡೀಪ್ ಪೈನ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಅಮಾಜ್‌ಫಿಟ್ ಪಾಪ್ ಪ್ರೊ CNY 399 (ಅಂದಾಜು 4,500 ರೂ) ಬೆಲೆಯನ್ನು ಹೊಂದಿದ್ದು, ಕಪ್ಪು, ಗುಲಾಬಿ ಮತ್ತು ಹಸಿರು ಬಣ್ಣಗಳಲ್ಲಿ ಬರುತ್ತದೆ. ಇದು ಭಾರತದಲ್ಲಿ ಅಮಾಜ್‌ಫಿಟ್ ಬಿಪ್ ಯು ಪ್ರೊ ಆಗಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
This News Article is a Copy of GIZBOT
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm