ಬ್ರೇಕಿಂಗ್ ನ್ಯೂಸ್
30-08-23 07:43 pm Source: Gizbot Kannada ಡಿಜಿಟಲ್ ಟೆಕ್
ಹುವಾವೇ ಕಂಪೆನಿ ಸ್ಮಾರ್ಟ್‌ಫೋನ್‌ಗಳೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕುತೂಹಲ ಇದ್ದೆ ಇರುತ್ತದೆ. ತನ್ನ ಗುಣಮಟ್ಟ ಹಾಗೂ ತಾಂತ್ರಿಕ ನೈಪುಣ್ಯತೆಯಿಂದ ಹುವಾವೇ ಬ್ರ್ಯಾಂಡ್ ಫೋನ್‌ಗಳಿಗೆ ಭಾರಿ ಕ್ರೇಜ್ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಂಕಾಗಿರುವ ಹುವಾವೇ ಸೈಲೆಂಟ್ ಆಗಿ ತನ್ನ ಹೊಸ ಹುವಾವೇ ಮೇಟ್60 ಫೋನ್ ಪರಿಚಯಿಸಿದೆ.
ಹೌದು, ಹುವಾವೇ ಮೇಟ್ 60 ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಬಿಡುಗಡೆ ಆಗಿದೆ. ಯುಎಸ್ ನಿರ್ಬಂಧಗಳ ನಂತರ, 5G ಸಂಪರ್ಕದೊಂದಿಗೆ ಬಂದ ಮೊದಲ ಹುವಾವೇ ಫೋನ್ ಇದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ಮೇಟ್ 60 ಡಿಸ್‌ಪ್ಲೇ
ಹುವಾವೇ ಮೇಟ್ 60 ಸ್ಮಾರ್ಟ್‌ಫೋನ್ 6.69 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 2688 x 1216 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ 10-ಬಿಟ್ ಕಲರ್ಸ್ ಮತ್ತು 1440Hz PWM ಡಿಮ್ಮಿಂಗ್ ಅನ್ನು ನೀಡಲಿದೆ.
ಹುವಾವೇ ಮೇಟ್ 60 ಪ್ರೊಸೆಸರ್
ಹುವಾವೇ ಮೇಟ್ 60 ಸ್ಮಾರ್ಟ್‌ಫೋನ್ ಪ್ರೊಸೆಸರ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಫೋನ್ ಹಾರ್ಮನಿ ಓಎಸ್ 4.0 ನೊಂದಿಗೆ ಪ್ರಿ ಲೋಡ್ ಆಗಿದೆ. ಹಾಗೆಯೇ 12 GB RAM ಮತ್ತು 1TB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದು ಮೆಮೊರಿ ಕಾರ್ಡ್ ಅನ್ನು ಬೆಂಬಲಿಸಲಿದೆಯಾ ಅನ್ನೊದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಹುವಾವೇ ಮೇಟ್ 60 ಕ್ಯಾಮೆರಾ ಸೆಟ್‌ಅಪ್
ಹುವಾವೇ ಮೇಟ್ 60 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇನ್ನು ಕ್ಯಾಮೆರಾ 5x ಆಪ್ಟಿಕಲ್ ಜೂಮ್ ಮತ್ತು 50x ಡಿಜಿಟಲ್ ಜೂಮ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.
ಹುವಾವೇ ಮೇಟ್ 60 ಬ್ಯಾಟರಿ ಮತ್ತು ಇತರೆ
ಹುವಾವೇ ಮೇಟ್ 60 ಸ್ಮಾರ್ಟ್‌ಫೋನ್ 4,750mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಲ್ಲದೆ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಹಿಂಭಾಗದಲ್ಲಿ ಎರಡನೇ ತಲೆಮಾರಿನ ಕುನ್ಲುನ್ ಗ್ಲಾಸ್ ಅನ್ನು ಒಳಗೊಂಡಿರುವ IP68-ರೇಟೆಡ್ ಡಿವೈಸ್ ಆಗಿದೆ.

ಹುವಾವೇ ಮೇಟ್ 60 ಬೆಲೆ ಮತ್ತು ಲಭ್ಯತೆ
ಹುವಾವೇ ಮೇಟ್ 60 ಸ್ಮಾರ್ಟ್‌ಫೋನ್ 12 GB RAM + 256 GB ಸ್ಟೊರೇಜ್ ಆಯ್ಕೆಗೆ 5,499 ಯುವಾನ್ (ಅಂದಾಜು 63,456ರೂ)ಬೆಲೆಯನ್ನು ಹೊಂದಿದೆ. ಇದರ 12 GB RAM + 512 GB ಸ್ಟೋರೇಜ್ ಆಯ್ಕೆಯು 5,999 ಯುವಾನ್ (ಅಂದಾಜು 68,099ರೂ) ಮತ್ತು 12 GB RAM + 1 TB ಸ್ಟೊರೇಜ್ 6,999 ಯುವಾನ್ (ಅಂದಾಜು 80,776ರೂ)ಬೆಲೆಯನ್ನು ಹೊಂದಿದೆ. ಇದು ಚೀನಾದಲ್ಲಿ ಸೆಪ್ಟೆಂಬರ್ 10 ರೊಳಗೆ ಖರೀದಿಗೆ ಲಭ್ಯವಿರುತ್ತದೆ. ಖರೀದಿದಾರರು ಯಾದನ್ ಬ್ಲಾಕ್, ವೈಟ್ ಸ್ಯಾಂಡ್ ಸಿಲ್ವರ್, ಸೌತ್ ವ್ಯಾಕ್ಸಿ ಪರ್ಪಲ್ ಮತ್ತು ಯಾ ಚುವಾನ್ ಕ್ವಿಂಗ್ (ಹಸಿರು) ನಂತಹ ಬಣ್ಣ ಆಯ್ಕೆಗಳಿಂದ ಖರೀದಿಸಬಹುದಾಗಿದೆ.
Huawei Mate 60 with 6 69 Inch Oled 120hz Display Launched.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm