ಬ್ರೇಕಿಂಗ್ ನ್ಯೂಸ್
11-08-23 06:50 pm Source: Gizbot Kannada ಡಿಜಿಟಲ್ ಟೆಕ್
ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್‌ಟ್ಯಾಬ್‌ಗಳಿಗೂ ಕೂಡ ಪ್ರಸಿದ್ಧಿ ಪಡೆದಿದೆ. ತನ್ನ ಭಿನ್ನ ಮಾದರಿಯ ಟ್ಯಾಬ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಹೊಸ ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಅನ್ನು ಪರಿಚಯಿಸಲು ತಯಾರಿ ನಡೆಸಿದೆ. ಈ ಟ್ಯಾಬ್ ಇದೇ ಆಗಸ್ಟ್ 14 ರಂದು ಬಿಡುಗಡೆ ಆಗೋದು ಪಕ್ಕಾ ಆಗಿದೆ.
ಹೌದು, ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಟ್ಯಾಬ್ ಸದ್ಯದಲ್ಲೇ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಇನ್ನು ಈ ಟ್ಯಾಬ್ಲೆಟ್ ಶಿಯೋಮಿ ಬ್ರ್ಯಾಂಡ್‌ನ ಅತಿದೊಡ್ಡ ಮತ್ತು ಪವರ್‌ಫುಲ್ ಟ್ಯಾಬ್ಲೆಟ್ ಎಂದು ಹೇಳಲಾಗಿದೆ. ಇದಲ್ಲದೆ ಈ ಟ್ಯಾಬ್ 10,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಟ್ಯಾಬ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿರಬಹುದು ಎಂಬ ನಿರೀಕ್ಷೆಯಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಫೀಚರ್ಸ್ ನಿರೀಕ್ಷೆ?
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ 14 ಇಂಚಿನ ಡಿಸ್‌ಪ್ಲೇಯೊಂದಿಗೆ ಬರಲಿದೆ. ಈ ಡಿಸ್‌ಪ್ಲೇ 1848 x 2960 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಪ್ರೊಸೆಸರ್ ಯಾವುದು?
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಪ್ಯಾಡ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ ಎನ್ನಲಾಗಿದೆ.

ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಕ್ಯಾಮೆರಾ ಸೆಟ್‌ಅಪ್
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದು ಕ್ಯಾಮರಾ + 3D ToF ಸಂವೇದಕ ಸೆಟಪ್ ಆಗಿರಬಹುದು ಎನ್ನಲಾಗಿದೆ. ಈ ಟ್ಯಾಬ್ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ ಎಂದು ಅಂದಾಜಿಸಲಾಗಿದೆ.
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಬ್ಯಾಟರಿ ಬ್ಯಾಕ್‌ಅಪ್
ಶಿಯೋಮಿ ಪ್ಯಾಡ್ 6 ಸ್ಮಾರ್ಟ್ ಟ್ಯಾಬ್ 10,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ ಎಂದು ಶಿಯೋಮಿ ಕಂಪೆನಿ ದೃಢಪಡಿಸಿದೆ. ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಟ್ಯಾಬ್ ಟಾಪ್-ಎಂಡ್ ಟ್ಯಾಬ್ಲೆಟ್ ವೇಗದ ಚಾರ್ಜ್ ಹೊಂದಾಣಿಕೆಯ ಡಿವೈಸ್‌ಗಳಿಗೆ 33W ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ ಎಂದು ಅಂದಾಜಿಸಲಾಗಿದೆ.

ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಇತರೆ ಫೀಚರ್ಸ್
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಗೇಮಿಂಗ್ ಮತ್ತು ಸ್ಟ್ರೀಮಿಂಗ್ ಸೆಷನ್‌ಗಳಲ್ಲಿ ಶಕ್ತಿಯುತ ಆಡಿಯೊ ಔಟ್‌ಪುಟ್‌ಗಾಗಿ ಎಂಟು-ಸ್ಪೀಕರ್ ಸಿಸ್ಟಮ್ ಹೊಂದಿರಲಿದೆ. ಇದಲ್ಲದೆ ನಾಲ್ಕು-ವಿಂಡೋ ಸ್ಪ್ಲಿಟ್ ಸ್ಕ್ರೀನ್ ಮತ್ತು ಕಂಪ್ಯೂಟರ್ ತರಹದ ಕಚೇರಿ ಕಾರ್ಯಕ್ಷಮತೆಗಾಗಿ WPS ಆಫೀಸ್ ಪಿಸಿಯಂತಹ ಫಂಕ್ಷನ್‌ಗಳನ್ನು ದೃಢಪಡಿಸಿದೆ.
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಬೆಲೆ ಮತ್ತು ಲಭ್ಯತೆ
ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಇದೇ ಆಗಸ್ಟ್ 14 ಬಿಡುಗಡೆ ಆಗುವುದರಿಂದ ಇದರ ಬೆಲೆ ವಿವರಗಳು ಸದ್ಯದಲ್ಲೇ ಬಹಿರಂಗವಾಗುವ ಸಾದ್ಯತೆಯಿದೆ. ಇದರ ಕಲರ್ ಆಯ್ಕೆಗಳ ವಿವರಗಳನ್ನು ಇನ್ನಷ್ಟು ಬಹಿರಂಗವಾಗಬೇಕಿದೆ.
Xiaomi Pad 6 Max officially Confirmed to Feature a 14 Inch Display Expected Details.
16-04-26 10:30 pm
HK News Staffer
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
ಆದಿಚುಂಚನಗಿರಿಯಲ್ಲಿ 80 ಕೋಟಿ ವೆಚ್ಚದ ಮಂದಿರ ಉದ್ಘಾಟ...
15-04-26 07:05 pm
ಸಿಎಂ ಕಾರ್ಯದರ್ಶಿ ನಸೀರ್ ಅಹ್ಮದ್ ವಜಾ ಬೆನ್ನಲ್ಲೇ ಪರ...
15-04-26 03:15 pm
16-04-26 01:09 pm
HK News Staffer
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
16-04-26 10:36 pm
HK News Staffer
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am
ಯೋಗೀಶಗೌಡ ಕೊಲೆ ಕೇಸಲ್ಲಿ ಕಾಂಗ್ರೆಸ್ ಶಾಸಕ ಅಪರಾಧಿ ;...
15-04-26 11:40 pm