ಬ್ರೇಕಿಂಗ್ ನ್ಯೂಸ್
09-08-23 07:51 pm Source: Gizbot Kannada ಡಿಜಿಟಲ್ ಟೆಕ್
JBL ಸಂಸ್ಥೆಯ ಸೌಂಡ್‌ಬಾರ್‌ಗಳಿಗೆ ಯುವಜನತೆ ಸಾಕಷ್ಟು ಫಿದಾ ಆಗಿದ್ದಾರೆ. ವಿವಿಧ ಶೈಲಿಯ ಸೌಂಡ್‌ಬಾರ್‌ಗಳಿಂದ ಗಮನಸೆಳೆದಿರುವ JBL ಇದೀಗ ಹೊಸ ಸೌಂಡ್ ಬಾರ್ ಪರಿಚಯಿಸಿದೆ. ಇದನ್ನು JBL ಬಾರ್ 1300 ಎಂದು ಹೆಸರಿಸಲಾಗಿದೆ. ಈ ಸೌಂಡ್‌ಬಾರ್ ಆರು ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಪ್ರೀಮಿಯಂ ಸೌಂಡ್‌ಬಾರ್ ಎನಿಸಿಕೊಂಡಿದೆ.
ಹೌದು, JBL ಬಾರ್ 1300 ಭಾರತದ ಮಾರುಕಟ್ಟೆಯಲ್ಲಿ ಅಧಿಕೃತವಾಗಿದೆ. ಇದು 10 ಇಂಚಿನ ವಾಯರ್‌ಲೆಸ್ ಸಬ್‌ವೂಫರ್ ಅನ್ನು ಕೂಡ ಪಡೆದುಕೊಂಡಿದೆ. ಈ ಸೌಂಡ್‌ಬಾರ್ ಜೊತೆಗೆ ಡಿಟ್ಯಾಚೇಬಲ್ ಸ್ಪೀಕರ್ ವಾಯರ್‌ಲೆಸ್ ಸರೌಂಡ್ ಸ್ಪೀಕರ್‌ಗಳನ್ನು ಕೂಡ ನೀಡಲಾಗುತ್ತದೆ. ಹಾಗಾದ್ರೆ JBL ಬಾರ್ 1300 ವಿಶೇಷತೆ ಏನು? ಇದರ ಡಿಸೈನ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ
JBL ಬಾರ್ 1300 ಫೀಚರ್ಸ್ ಹೇಗಿದೆ? JBL ಬಾರ್ 1300 ಸೌಂಡ್‌ಬಾರ್ ಪ್ರೀಮಿಯಂ ಸೌಂಡ್‌ಬಾರ್ ಆಗಿದೆ. ಇದು ಆರು ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, 11.1.4 ಚಾನೆಲ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಹೊಸ ಸೌಂಡ್‌ಬಾರ್ ನೊಂದಿಗೆ ಖರೀದಿದಾರರು ಡಿಟ್ಯಾಚೇಬಲ್ ಸ್ಪೀಕರ್ ವೈರ್‌ಲೆಸ್ ಸರೌಂಡ್ ಸ್ಪೀಕರ್‌ಗಳನ್ನು ಬಳಸಬಹುದಾಗಿದೆ. ಅಲ್ಲದೆ 10 ಇಂಚಿನ ವಾಯರ್‌ಲೆಸ್ ಸಬ್ ವೂಫರ್ ಅನ್ನು ಸಹ ಪಡೆದುಕೊಳ್ಳಲಿದ್ದಾರೆ. ಜೊತೆಗೆ ಈ ಹೊಸ ಸ್ಪೀಕರ್‌ಗಳ ಒಟ್ಟು ಔಟ್‌ಪುಟ್ 1,170W ಆಗಿದೆ ಎಂದು ಹೇಳಲಾಗಿದೆ.
ಇನ್ನು JBL ಬಾರ್ 1300 ಸೌಂಡ್‌ಬಾರ್ ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸಲಿದೆ. ಅಲ್ಲದೆ DTS:X 3D ಸರೌಂಡ್ ಸೌಂಡ್ ಅನ್ನು ಸಹ ಬೆಂಬಲಿಸುತ್ತದೆ ಎನ್ನಲಾಗಿದೆ. ಇದಲ್ಲದೆ ಈ ಹೊಸ ಸೌಂಡ್‌ಬಾರ್ ಕೆಲವು ನಿಫ್ಟಿ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಅದರಂತೆ ಈ ಸೌಂಡ್‌ಬಾರ್‌ನಲ್ಲಿ ಮಲ್ಟಿಬೇರ್ ಟೆಕ್ನಾಲಜಿಯನ್ನು ಕಾಣಬಹುದಾಗಿದೆ. ಇದು ಬಳಕೆದಾರರಿಗೆ ತಲ್ಲೀನಗೊಳಿಸುವ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ಇದು ಪ್ಯೂರ್‌ವಾಯ್ಸ್ ಟೆಕ್ನಾಲಜಿಯನ್ನು ನೀಡಲಿದ್ದು, ಸೌಂಡ್ ಎಫೆಕ್ಟ್‌ಗಳು ಹೆಚ್ಚಾದಾಗ ಸ್ಪಷ್ಟವಾದ ಸೌಂಡ್ ಅನ್ನು ನೀಡಲಿದೆ.
ಇದೆಲ್ಲವನ್ನೂ ಹೊರತುಪಡಿಸಿ, ಬಾರ್ 1300 ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಹೊಂದಿದೆ. ಇನ್ನು ಸೌಂಡ್‌ಬಾರ್ ಸಿರಿ, ಗೂಗಲ್ ಅಸಿಸ್ಟೆಂಟ್ ಅಥವಾ ಅಲೆಕ್ಸಾದಂತಹ ವಾಯ್ಸ್ ಅಸಿಸ್ಟೆಂಟ್‌ಗಳನ್ನು ಸಹ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 802.11 a/b/g/n/ac/ax, Bluetooth 5.0, ಮತ್ತು EQ ಕಸ್ಟಮೈಸೇಶನ್‌ಗಾಗಿ JBL One ಅಪ್ಲಿಕೇಶನ್ ಬೆಂಬಲವನ್ನು ಸಹ ಒಳಗೊಂಡಿದೆ.
JBL ಬಾರ್ 1300 ಬೆಲೆ ಮತ್ತು ಲಭ್ಯತೆ
JBL ಬಾರ್ 1300 ಸೌಂಡ್‌ಬಾರ್
ಭಾರತದಲ್ಲಿ 1,49,999ರೂ. ಬೆಲೆಯನ್ನು
ಹೊಂದಿದೆ. ಇದು ಲಾಂಚ್ ಪ್ರೈಸ್ ಆಗಿದ್ದು,
ಇದರ MRP ಬೆಲೆ 1,59,999 ರೂ.ಆಗಿದೆ
ಎನ್ನಲಾಗಿದೆ. ಇನ್ನು ಈ ಸೌಂಡ್‌ಬಾರ್ ಅನ್ನು
ಜೆಬಿಎಲ್ ಕಂಪೆನಿಯ ಅಧಿಕೃತ
ವೆಬ್‌ಸೈಟ್‌ನಿಂದ ಖರೀದಿಸಬಹುದು. ಇದು
ಕಪ್ಪು ಬಣ್ಣದ ಆಯ್ಕೆಯಲ್ಲಿ ಮಾತ್ರ
ಲಭ್ಯವಾಗಲಿದೆ ಎಂದು ಜೆಬಿಎಲ್ ಕಂಪೆನಿ ಹೇಳಿದೆ.
ಸೌಂಡ್ ಬಾರ್ ಎನ್ನುವುದು ಆಲ್-ಇನ್-ಒನ್ ಸ್ಪೀಕರ್ ಸಿಸ್ಟಮ್ ಆಗಿದ್ದು, ಈ ಡಿವೈಸ್‌ಗಳು ವಿಶಾಲವಾದ ವ್ಯಾಪ್ತಿಯಲ್ಲಿ ಆಡಿಯೊವನ್ನು ಪ್ರಸರಣ ಮಾಡುತ್ತವೆ. ಇಂದಿನ ಬಹುತೇಕ ಸೌಂಡ್‌ಬಾರ್‌ಗಳು ಬ್ಲೂಟೂತ್ ಸೇರಿದಂತೆ ಇತರೆ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿವೆ. ಹಾಗೆಯೇ ಅನುಕೂಲಕರ ಕಂಪ್ಯಾಕ್ಟ್ ಮಾದರಿಯ ರಚನೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಇಂದಿನ ಯುವಜನರ ಹಾಟ್‌ಫೇವರಿಟ್ ಸ್ಪೀಕರ್‌ಗಳ ಸಾಲಿನಲ್ಲಿ ಸೌಂಡ್‌ಬಾರ್‌ಗಳಿಗೆ ಮೊದಲನೇ ಸ್ಥಾನವಿದೆ. ಮನೆಗಳಲ್ಲಿ ಪಾರ್ಟಿ ಮಾಡೋರಿಗೆ ಈ ಸೌಂಡ್‌ಬಾರ್ ಸಿಸ್ಟಂಗಳು ಬೆಸ್ಟ್ ಎನಿಸಿಕೊಂಡಿವೆ.
JBL has officially Announced a New Premium Soundbar in India.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 11:27 am
Mangalore Correspondent
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm