ಬ್ರೇಕಿಂಗ್ ನ್ಯೂಸ್
08-08-23 06:58 pm Source: Gizbot Kannada ಡಿಜಿಟಲ್ ಟೆಕ್
ಭಾರತದ ಸ್ಮಾರ್ಟ್‌ಟಿವಿ ವಲಯದಲ್ಲಿ ಸೋನಿ ಕಂಪೆನಿಯ ಟಿವಿಗಳಿಗೆ ಭಾರಿ ಕ್ರೇಜ್ ಇದೆ. ಗುಣಮಟ್ಟ ಹಾಗೂ ನವೀನ ಮಾದರಿಯ ಟೆಕ್ನಾಲಜಿ ಬಯಸೋರಿಗೆ ಸೋನಿ ಟಿವಿಗಳು ನೆಚ್ಚಿನ ಆಯ್ಕೆಯಾಗಿವೆ. ಅದರಂತೆ ಸೋನಿ ಕಂಪೆನಿ ವಿಭಿನ್ನ ಶ್ರೇಣಿಯಲ್ಲಿ ಅನೇಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸದಾಗಿ 13 ಹೊಸ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ.
ಹೌದು, ಸೋನಿ ಕಂಪೆನಿ BZ40L, BZ35L ಮತ್ತು BZ30L ಸರಣಿಯ 13 ಹೊಸ Bravia 4K HDR ಟಿವಿಗಳನ್ನು ಅನಾವರಣಗೊಳಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ಬ್ಯುಸಿನೆಸ್ ಮತ್ತು ಉತ್ತಮ ಚಿತ್ರ ಗುಣಮಟ್ಟ, ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ. ಈ ಸರಣಿಯಲ್ಲಿ 43 ಇಂಚುಗಳಿಂದ 85 ಇಂಚಿನ ಗಾತ್ರದ ಸ್ಮಾರ್ಟ್‌ಟಿವಿಗಳು ಇದರಲ್ಲಿ ಸೇರಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳು ಯಾವೆಲ್ಲಾ ಫೀಚರ್ಸ್ ಒಳಗೊಂಡಿರಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ 4K HDR ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು?
ಸೋನಿ ಬ್ರಾವಿಯಾ BZ40L, BZ35L ಮತ್ತು BZ30L ಸರಣಿಯಲ್ಲಿ ಈ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದೆ. ಇವುಗಳು ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ವಿವಿಧ ಆವೃತ್ತಿಗಳಲ್ಲಿ ಎಂಟ್ರಿ ನೀಡಿವೆ. ಹೈ ಲೆವೆಲ್ ಮಾತ್ರವಲ್ಲದೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಸ್ಮಾರ್ಟ್‌ಟಿವಿಗಳನ್ನು ಈ ಸರಣಿಯಲ್ಲಿ ಕಾಣಬಹುದಾಗಿದೆ. ಇದರಲ್ಲಿ ಸೋನಿ ಬ್ರಾವಿಯಾ BZ40L ಸರಣಿಯು ಹೈ ಲೆವೆಲ್ ಸ್ಮಾರ್ಟ್‌ಟಿವಿಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಏಕೆಂದರೆ ಈ ಸರಣಿ ಟಿವಿಗಳ ವಿನ್ಯಾಸವು ಸಾಕಷ್ಟು ವಿಭಿನ್ನವಾಗಿದೆ.
ಅಂದರೆ ಸೋನಿ BZ40L ಸ್ಮಾರ್ಟ್‌ಟಿವಿ ಸ್ಕ್ರೀನ್‌ಗಳು ವಿಶೇಷವಾದ ಡೀಪ್ ಬ್ಲ್ಯಾಕ್ ನಾನ್-ಗ್ಲೇರ್ ಲೇಪನವನ್ನು ಹೊಂದಿವೆ. ಈ ಲೇಪನವು ಸ್ಕ್ರೀನ್ ಅನ್ನು ಕಡಿಮೆ ಹೊಳೆಯುವಂತೆ ಮಾಡುತ್ತದೆ. ಆದರಿಂದ ಇದು ಇನ್ನೂ ಡೀಪ್ ಬ್ಲ್ಯಾಕ್ ಕಲರ್‌ಗಳನ್ನು ಮತ್ತು ಹೆಚ್ಚಿನ ಕಾಂಟ್ರಾಸ್ಟ್‌ಗಳನ್ನು ಚೆನ್ನಾಗಿ ತೋರಿಸುತ್ತದೆ. ಇದಲ್ಲದೆ ಸೋನಿ ಪರಿಚಯಿಸಿರುವ 13 ಟಿವಿ ಮಾದರಿಗಳಲ್ಲಿ ಪ್ರತಿಯೊಂದೂ ಕೂಡ ತನ್ನದೇ ಆದ ಸಮರ್ಥನೀಯತೆಯನ್ನು ಉತ್ತೇಜಿಸುವ ಫೀಚರ್ಸ್‌ಗಳನ್ನು ಹೊಂದಿವೆ. ಇನ್ನು ಸ್ಮಾರ್ಟ್‌ಟಿವಿಗಳಲ್ಲಿ ಮರುಬಳಕೆಯ ಪ್ಲಾಸ್ಟಿಕ್ ಅನ್ನು ಬಳಸಲಾಗಿದೆ.

ಅಲ್ಲದೆ ವಿದ್ಯುತ್ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡಲು ECO ಡ್ಯಾಶ್‌ಬೋರ್ಡ್ ಸೇರಿವೆ. ಜೊತೆಗೆ 24/7 ಕಾರ್ಯಾಚರಣೆ, ಸುಲಭ ಸೆಟಪ್, ಸ್ಕ್ರೀನ್ ಮಿರರಿಂಗ್ ನಂತಹ ಬಳಕೆದಾರರ ಸ್ನೇಹಿ ಫೀಚರ್ಸ್‌ಗಳನ್ನು ನೀಡಲಾಗಿದೆ. ಆದರಿಂದ ಈ ಸ್ಮಾರ್ಟ್‌ಟಿವಿಗಳು ಸುಲಭವಾಗಿ ಅನುಸ್ಥಾಪನೆಗೆ ಹೊಂದಿಕೊಳ್ಳುತ್ತವೆ. ಇದರಿಂದ ನೀವು ಮಲ್ಟಿ ಸ್ಕ್ರೀನ್‌ಗಳನ್ನು ಒಂದೇ ಬಾರಿಗೆ ಬಳಸುವುದಕ್ಕೆ ಸಹ ಸಾಧ್ಯವಾಗಲಿದೆ.
ಇನ್ನು BZ40L ಮತ್ತು BZ35L ಸ್ಮಾರ್ಟ್
ಟಿವಿ ಮಾಡೆಲ್‌ಗಳು ಹೆಚ್ಚಿನ ಸ್ಟೋರೇಜ್
ಸ್ಪೇಸ್ ಅನ್ನು ಹೊಂದಿವೆ. ಇದರ ಎಲ್ಲಾ
ಮಾದರಿಗಳು ಕೂಡ ಸುಲಭವಾಗಿ
ಆರೋಹಿಸಲು ಹೊಸ ಕಿಟ್ ಅನ್ನು
ಹೊಂದಿವೆ. ಜೊತೆಗೆ ಒಂದೇ ಮಾದರಿಯ
ಡಿಸೈನ್ ಅನ್ನು ಪಡೆದುಕೊಂಡಿವೆ. ಅಲ್ಲದೆ
ವಿಭಿನ್ನ ಬ್ರೈಟ್‌ನೆಸ್ ಲೆವೆಲ್ ಆಯ್ಕೆಗಳನ್ನು
ಸುಲಭಗೊಳಿಸಲಿದೆ. ಈ ಸ್ಮಾರ್ಟ್‌ಟಿವಿಗಳು
ಚಿತ್ರ ಗುಣಮಟ್ಟ, ಉತ್ತಮ ಹೊಂದಾಣಿಕೆ ಮತ್ತು ಹೆಚ್ಚಿನವುಗಳೊಂದಿಗೆ ವಾಣಿಜ್ಯ ಪರಿಸರದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿವೆ.
ಬೆಲೆ ಮತ್ತು ಲಭ್ಯತೆ
ಸೋನಿ BZ40L, BZ35L, ಮತ್ತು BZ30L ಸರಣಿಗಳು ಇದೇ ಆಗಸ್ಟ್ 25 ರಿಂದ ಭಾರತದಲ್ಲಿ ಅಧಿಕೃತ ಸೋನಿ ಸ್ಟೋರ್ ಮೂಲಕ ಮಾರಾಟಕ್ಕೆ ಬರಲಿದೆ. ಇವುಗಳ ಬೆಲೆ ವಿವರಗಳು ಈ ಕೆಳಗಿನಂತಿವೆ.
FW-85BZ40L ಬೆಲೆ 7,00,000 ರೂ
FW-75BZ40L ಬೆಲೆ 5,00,000 ರೂ
FW-65BZ40L ಬೆಲೆ 3,00,000 ರೂ
FW-55BZ40L ಬೆಲೆ 2,25,000 ರೂ
FW-75BZ35L ಬೆಲೆ 4,50,000 ರೂ
FW-65BZ35L ಬೆಲೆ 2,50,000 ರೂ
FW-55BZ35L ಬೆಲೆ 2,00,000 ರೂ
FW-85BZ30L ಬೆಲೆ 5,00,000 ರೂ
FW-75BZ30L ಬೆಲೆ 3,50,000 ರೂ
FW-65BZ30L ಬೆಲೆ 2,00,000 ರೂ
FW-55BZ30L ಬೆಲೆ 1,50,000 ರೂ
FW-50BZ30L ಬೆಲೆ 1,25,000 ರೂ
FW-43BZ30L ಬೆಲೆ 1,00,000 ರೂ
Sony Introduces 13 New 4k HDR Premium Bravia TVs Price Details.
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm