ಬ್ರೇಕಿಂಗ್ ನ್ಯೂಸ್
08-07-23 07:44 pm Source: Gizbot Kannada ಡಿಜಿಟಲ್ ಟೆಕ್
ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವುದು ಹಿಂದೆಂದಿಗಿಂತಲೂ ಈಗ ಸುಲಭ. ಯಾಕೆಂದರೆ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಆಫರ್ ರೂಪದಲ್ಲಿ ಲಭ್ಯ ಆಗುತ್ತಿವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯಾದ ವಿವೋದ ಈ ವಿಶೇಷ ಫೋನ್ ಸಹ ಅಗ್ಗದ ಬೆಲೆಗೆ ಲಭ್ಯ ಆಗುತ್ತಿದೆ.
ಹೌದು, ವಿವೋದ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಸ್ಟೋರೇಜ್, ಕ್ಯಾಮೆರಾ ಹಾಗೂ ಕಾರ್ಯಕ್ಷಮತೆಯಲ್ಲಿ ಉತ್ತಮ ಅನುಭವ ನೀಡುತ್ತವೆ. ಇದರ ಭಾಗವಾಗಿಯೇ ಈಗ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ 12GB RAM ಆಯ್ಕೆಯ ವಿವೋ V23 5G(Vivo V23 5G) ಫೋನ್‌ಗೆ ಭರ್ಜರಿ ಆಫರ್ ನೀಡಲಾಗಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 920 MT6877T CPUನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ, ಬನ್ನಿ ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಗಮನಿಸೋಣ.

ವಿವೋ V23 5G ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳನ್ನು ತಿಳಿಯೋಣ. ಈ ಫೋನ್ 6.44 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 20:9 ಆಕಾರ ಅನುಪಾತ ಪಡೆದಿದೆ. ಅದರಂತೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ನಂದಿಗೆ 409 ppi ಪಿಕ್ಸೆಲ್ ಸಾಂದ್ರತೆ ಒಳಗೊಂಡಿದ್ದು, 90Hz ರಿಫ್ರೆಶ್ ರೇಟ್ ಆಯ್ಕೆ ಹೊಂದಿದೆ.
ವಿವೋ V23 5G ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 MT6877T CPU ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಆಯ್ಕೆಯನ್ನು ಹೊಂದಿದೆ. ಈ ಮೂಲಕ ಗ್ರಾಹಕರು ಯಾವುದೇ ಸಮಸ್ಯೆ ಇಲ್ಲದೆ ಫೋನ್ ಅನ್ನು ಬಳಕೆ ಮಾಡಬಹುದಾಗಿದೆ. ಜೊತೆಗೆ ಮಾಲಿ-G68 MC4 GPU ಬಲ ಇದ್ದು, ಇದು ಗೇಮರ್‌ಗಳಿಗಂತೂ ಬಹಳ ಅನುಕೂಲ ಹಾಗೆಯೇ ಈ ಮೊಬೈಲ್ ಫೋನ್ 2.5GHz ಗರಿಷ್ಠ ಆಪರೇಟಿಂಗ್ ಆವರ್ತನವನ್ನು ಹೊಂದಿದೆ.
ವಿವೋ V23 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಅದರಲ್ಲಿ 2MP ಮ್ಯಾಕ್ರೋ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, ಮತ್ತು f/1.89 ಅಪರ್ಚರ್ ಹೊಂದಿರುವ 64MP ಮುಖ್ಯ ಕ್ಯಾಮೆರಾ ಆಯ್ಕೆ ಇದೆ. ಇದರೊಂದಿಗೆ ಮುಂಭಾಗದಲ್ಲಿ ವಿವೋ ಅವಳಿ-ಕ್ಯಾಮೆರಾ ರಚನೆ ಪಡೆದಿದೆ. ಅದರಲ್ಲಿ ಐ ಎಎಫ್ ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ ಮತ್ತು 8 MP ಅಲ್ಟ್ರಾ-ವೈಡ್ ಆಂಗಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ವಿವೋ V23 5G ಬ್ಯಾಟರಿ ಹಾಗೂ ಇತರೆ: ಇನ್ನುಳಿದಂತೆ ಈ ಫೋನ್ 4200mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 44W ಫ್ಲ್ಯಾಶ್ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ. ಇದರೊಂದಿಗೆ ಬ್ಲೂಟೂತ್, ವೈ-ಫೈ ಆಡಿಯೋ ಜ್ಯಾಕ್ 3.5 ಎಂಎಂ ನೊಂದಿಗೆ ವಿವಿಧ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದ್ದು, ಬಳಕೆದಾರರು ಈ ಮೂಲಕ ಅಗತ್ಯ ಸೌಕರ್ಯ ಪಡೆದುಕೊಳ್ಳಬಹುದು.
ವಿವೋ V23 5G ಬೆಲೆ ಹಾಗೂ ಆಫರ್ ವಿವರ: ಈ ಫೋನ್‌ನ ಪ್ರಮುಖ ವಿಚಾರಕ್ಕೆ ಬರುವುದಾದರೆ ಇದು 37,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು ಕೇವಲ 28,289ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಈ ಫೋನ್‌ಗೆ 26% ಡಿಸ್ಕೌಂಟ್ ಘೋಷಣೆ ಮಾಡಿದೆ. ಇಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್ ಗಳ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ ಇನ್ನೂ ಕಡಿಮೆ ಬೆಲೆಯಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದು.
Vivo V23 5G Smartphone get Big Discount in Amazon Details.
29-07-26 09:54 pm
HK News Staffer
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
29-07-26 10:45 pm
HK News Desk
ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್...
29-07-26 09:43 pm
Mangalore crime: ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸ...
29-07-26 06:51 pm
ಒಮಾನ್ನಲ್ಲಿ ಕೆಲಸದ ವೇಳೆ ದುರಂತ; ವಾಹನದ ಅಡಿಗೆ ಸಿಲ...
29-07-26 05:27 pm
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ, ನೀಟ್ ಪ್...
29-07-26 01:53 pm