ಬ್ರೇಕಿಂಗ್ ನ್ಯೂಸ್
06-07-23 11:01 pm Source: Gizbot ಡಿಜಿಟಲ್ ಟೆಕ್
ಮಳೆ ಮತ್ತು ಸಂಗೀತ ಇವೆರಡೂ ಒಂದಕ್ಕೊಂದು ವಿಶೇಷ ಸಂಬಂಧ ಹೊಂದಿರುತ್ತವೆ. ಮಳೆ ವೇಳೆ ಹೆಡ್‌ಫೋನ್ ಅನ್ನು ಹಾಕಿಕೊಂಡು ಇಷ್ಟದ ಹಾಡುಗಳನ್ನು ಕೇಳುತ್ತಿದ್ದರೆ ಬೇರೆಯದೇ ಲೋಕಕ್ಕೆ ಹೋದಂತೆ ಅನುಭವ ಆಗುತ್ತದೆ. ಆದರೆ, ಎಲ್ಲರೂ ಸಹ ಉತ್ತಮ ಹೆಡ್‌ಫೋನ್ ಖರೀದಿ ಮಾಡುವುದು ಅಸಾಧ್ಯ. ಆದರೆ, ಈಗ ಈ ಹೆಡ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಭಾರಿ ರಿಯಾಯಿತಿ ನೀಡಲಾಗಿದೆ.
ಹೌದು, ಧರಿಸಬಹುದಾದ ಸ್ಮಾರ್ಟ್‌ಡಿವೈಸ್‌ಗಳನ್ನು ತಯಾರು ಮಾಡುವ ಮೂಲಕ ಸ್ಮಾರ್ಟ್ ಗ್ಯಾಜೆಟ್ ತಯಾರಿಕಾ ಸಂಸ್ಥೆಗಳಲ್ಲಿ ಪ್ರಮುಖ ಎನಿಸಿಕೊಂಡಿರುವ ನಾಯ್ಸ್ ನ ನಾಯ್ಸ್ ಟು ವಾಯರ್‌ಲೆಸ್ ಹೆಡ್‌ಫೋನ್ (Noise Two Wireless On-Ear Headphones) ಮೇಲೆ 70% ರಿಯಾಯಿತಿ ನೀಡಲಾಗಿದೆ. ಈ ಹೆಡ್‌ಫೋನ್ ಬರೋಬ್ಬರಿ 50 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುತ್ತವೆ. ಹಾಗಿದ್ರೆ, ಬನ್ನಿ ಈ ಹೆಡ್‌ಫೋನ್‌ನ ಫೀಚರ್ಸ್ ಏನು?, ಆಫರ್ ಬೆಲೆ ಎಷ್ಟು ಎಂಬಿತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿ ನೋಡೋಣ.
ನಾಯ್ಸ್ ಟು ವಾಯರ್‌ಲೆಸ್ ಹೆಡ್‌ಫೋನ್ ವಿನ್ಯಾಸ: ನಾಯ್ಸ್ ಟು ವಾಯರ್‌ಲೆಸ್ ಹೆಡ್‌ಫೋನ್ ಓವರ್ ಇಯರ್ ವಿನ್ಯಾಸ ಹೊಂದಿದ್ದು, ಮ್ಯೂಸಿಕ್ ಪ್ಲೇ ಮಾಡಲು ಹಾಗೂ ವಾಲ್ಯೂಮ್ ಅನ್ನು ಕಂಟ್ರೋಲ್ ಮಾಡಲು ಮತ್ತು ಡಿವೈಸ್ ಅನ್ನು ಆಫ್ ಹಾಗೂ ಆನ್ ಮಾಡಲು ಆಕರ್ಷಕ ಬಟನ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಬಳಕೆದಾರರ ತಲೆಗೆ ಸೆಟ್ ಆಗುವ ರೀತಿ ಹಾಗೂ ನಯವಾಗಿ ಕೂರುವ ಹಾಗೆ ಇದನ್ನು ಪ್ಲಾಸ್ಟಿಕ್‌ನಿಂದ ನಿರ್ಮಾಣ ಮಾಡಲಾಗಿದೆ.
ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸುವುದಾದರೆ ಇದು ಕಡಿಮೆ ಸುಪ್ತತೆ ಹೊಂದಿದ್ದು, ಅಂದರೆ 40ms ವರೆಗೆ ಸುಪ್ತತೆ ಆಯ್ಕೆ ಪಡೆದಿದ್ದು, ಗೇಮಿಂಗ್ ಮತ್ತು ಸ್ಟ್ರೀಮಿಂಗ್ ಮಾಡುವಾಗ ಎಲ್ಲೂ ಸಹ ಆಡಿಯೊ ಲ್ಯಾಗ್ ಆಗುವುದಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಅತ್ಯುತ್ತಮವಾದ ಬೇಸ್ ಅನ್ನು ನೀಡುವ ಸಾಮರ್ಥ್ಯವನ್ನು ಈ ಹೆಡ್‌ಫೋನ್ ಹೊಂದಿದೆ. ಇದರಿಂದಾಗಿ ಆಡಿಯೋದ ಪ್ರತಿ ಬೀಟ್ ಅನ್ನು ನೀವು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು.
40 ಎಂಎಂ ಡ್ರೈವ್ ಆಯ್ಕೆ ಹೊಂದಿರುವ ಈ ಹೆಡ್‌ಫೋನ್ ನಿಮ್ಮ ಮೆಚ್ಚಿನ ಶೋಗಳು, ಮ್ಯೂಸಿಕ್ ಮತ್ತು ಪಾಡ್‌ಕಾಸ್ಟ್‌ಗಳನ್ನು ಆಲಿಸುವಾಗ ಅತ್ಯುತ್ತಮ ಅನುಭವ ನೀಡಲಿದೆ. ಅದರಲ್ಲೂ ಡ್ಯುಯಲ್ ಪೇರಿಂಗ್ ಸೌಲಭ್ಯ ಇದ್ದು, ಬಳಕೆದಾರರು ಅನುಕೂಲಕ್ಕೆ ತಕ್ಕಂತೆ ಪ್ಲೇ ಮಾಡಬಹುದು. ಅಂದರೆ ಹೆಡ್‌ಫೋನ್‌ಗಳನ್ನು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗೆ ಒಂದೇ ಸಮಯದಲ್ಲಿ ಕನೆಕ್ಟ್ ಮಾಡಿಕೊಳ್ಳಬಹುದು. ಈ ಉತ್ತಮ ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಬ್ಲೂಟೂತ್ ಆವೃತ್ತಿ 5.3 ಹೊಂದಿದೆ.
ಇನ್ನುಳಿದಂತೆ 50 ಗಂಟೆಗಳ ಗೇಮಿಂಗ್ ಪ್ಲೇ ಬ್ಯಾಕಪ್ ನೀಡಲಿರುವ ಈ ಹೆಡ್‌ಫೋನ್ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಟೈಪ್-ಸಿ ಚಾರ್ಜಿಂಗ್ ಕನೆಕ್ಟರ್ ಬೆಂಬಲ ಪಡೆಯುತ್ತದೆ. ಇನ್ನು IPX5 ರೇಟಿಂಗ್ ಹೊಂದಿರುವುದರಿಂದ ಮಳೆ ಬಿಸಿಲೆನ್ನದೆ ಎಲ್ಲಾ ಸಮಯದಲ್ಲೂ ಇದನ್ನು ಬಳಕೆ ಮಾಡಬಹುದು. ಇದರಿಂದ ಹೆಡ್‌ಫೋನ್‌ಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹಾಗೆಯೇ ನಾಲ್ಕು ವಿಭಿನ್ನ ಪ್ಲೇ ಮೋಡ್‌ಗಳನ್ನು ಹೊಂದಿದ್ದು, ಅದರಲ್ಲಿ ಬ್ಲೂಟೂತ್, AUX, ಎಸ್‌ಡಿ ಕಾರ್ಡ್ ಮತ್ತು ಎಫ್ ಆಯ್ಕೆ ವಿಶೇಷ ಎನಿಸಿದೆ.
ನಾಯ್ಸ್‌ಟು ವಾಯರ್‌ಲೆಸ್ ಹೆಡ್‌ಫೋನ್ ಬೆಲೆ ಹಾಗೂ ಆಫರ್ ವಿವರ: ಈ ಹೆಡ್‌ಫೋನ್ 4,999ರೂ.ಗಳ ಮೂಲ ಬೆಲೆಯನ್ನು ಹೊಂದಿದೆ. ಆದರೆ, ನೀವು ಇದನ್ನು ಕೇವಲ 1,499ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಅಮೆಜಾನ್ ಈ ಡಿವೈಸ್‌ಗೆ ಬರೋಬ್ಬರಿ 70% ಡಿಸ್ಕೌಂಟ್ ನೀಡಿದೆ. ಇಷ್ಟು ಮಾತ್ರವಲ್ಲದೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯಲು ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಬಹುದು.
Noise Two Wireless on Ear Headphones get Big Discounts Amazon.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm