ಬ್ರೇಕಿಂಗ್ ನ್ಯೂಸ್
15-06-23 07:23 pm Source: Gizbot ಡಿಜಿಟಲ್ ಟೆಕ್
ಸ್ಮಾರ್ಟ್ ವೆರಿಯಬೆಲ್ಸ್ ಮಾರುಕಟ್ಟೆಯಲ್ಲಿ ಬೋಟ್ ಸಂಸ್ಥೆಯ ಡಿವೈಸ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದಕ್ಕೆ ಅನುಗುಣವಾಗಿ ಬೋಟ್ ಕಂಪೆನಿ ಸಹ ಭಿನ್ನ ಮಾದರಿಯ ಸ್ಮಾರ್ಟ್ ವೆರಿಯೆಬಲ್ಸ್‌ಗಳನ್ನು ಪರಿಚಯಿಸುತ್ತಾ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ವಾಚ್‌ಗಳು ಗಮನ ಸೆಳೆದಿವೆ. ಇದೀಗ ಬೋಟ್ ಕಂಪೆನಿ ಭಾರತದಲ್ಲಿ ಬ್ಲೂಟೂತ್ ಕಾಲಿಂಗ್ ಬೆಂಬಲಿಸುವ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.
ಹೌದು, ಬೋಟ್ ಕಂಪೆನಿ ಭಾರತದಲ್ಲಿ ಹೊಸ 'ಬೋಟ್ ಅಲ್ಟಿಮಾ ಕಾಲ್' (boAt Ultima Call) ಸ್ಮಾರ್ಟ್‌ವಾಚ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ವಾಚ್ ಕಾಂಟ್ಯಾಕ್ಟ್ ಸ್ಟೋರೇಜ್ ಹಾಗೂ ಡಯಲ್ ಪ್ಯಾಡ್ ಸೌಲಭ್ಯ ಪಡೆದಿದ್ದು, ಇದು ಇತರೆ ಡಿವೈಸ್‌ಗಳಿಗೆ ಪೈಪೋಟಿ ನೀಡುವಂತಹ ಫೀಚರ್ಸ್ ಆಗಿವೆ. ಹಾಗೆಯೇ ಸುಮಾರು 700 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದೆ.
ಈ ಸ್ಮಾರ್ಟ್ ವಾಚ್ ಕ್ಯಾಮೆರಾ ಕಂಟ್ರೋಲ್, ಲೈವ್ ಕ್ರಿಕೆಟ್ ಸ್ಕೋರ್‌ಗಳು, ಮ್ಯೂಸಿಕ್ ಕಂಟ್ರೋಲ್, ಹವಾಮಾನ ವರದಿ, ಅಲಾರ್ಮ್, ಕೌಂಟ್‌ಡೌನ್, ಸ್ಟಾಪ್‌ವಾಚ್, DND ಮತ್ತು ಫೈಂಡ್ ಮೈ ಫೋನ್‌ಗೆ ಬೆಂಬಲವನ್ನು ಪಡೆದಿದೆ. ಸಂಸ್ಥೆಯು ಬ್ಯಾಟರಿ ಪವರ್ ಬಗ್ಗೆ ಮಾಹಿತಿ ಹೊರಹಾಕಿಲ್ಲ. ಆದರೆ ಈ ವಾಚ್ ಸಾಮಾನ್ಯ ಬಳಕೆಯಲ್ಲಿ ಸುಮಾರು ಏಳು ದಿನಗಳವರೆಗೆ ಬ್ಯಾಕ್‌ಅಪ್ ನೀಡುತ್ತದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.
ಬೋಟ್ ಅಲ್ಟಿಮಾ ಕಾಲ್‌ನ ಡಿಸ್‌ಪ್ಲೇ ರಚನೆ ಮಾಹಿತಿ : ಬೋಟ್ ಅಲ್ಟಿಮಾ ಕಾಲ್ ಸ್ಮಾರ್ಟ್‌ವಾಚ್ 240 x 284 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯದ ಹೊಂದಿದ್ದು, 1.83 ಇಂಚಿನ ಡಿಸ್‌ಪ್ಲೇ ಪಡೆದುಕೊಂಡಿದೆ. ವಾಚ್‌ನ ಡಿಸ್‌ಪ್ಲೇಯು 2.5D ಕರ್ವ್ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇಯು 700 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಅನ್ನು ಹೊಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.
ಬೋಟ್ ಅಲ್ಟಿಮಾ ಕಾಲ್‌ನ ಪ್ರಮುಖ ಫೀಚರ್ಸ್ : ಬೋಟ್ ಸಂಸ್ಥಯ ಈ ವಾಚ್‌ನ ಪ್ರಮುಖ ಅಂಶವೆಂದರೆ ಬ್ಲೂಟೂತ್ ಕರೆಗೆ ಬೆಂಬಲವನ್ನು ಪಡೆದಿದೆ. ಕಂಪನಿಯು ಉತ್ತಮ ಗುಣಮಟ್ಟದ ಮೈಕ್ರೊಫೋನ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್ ಡಯಲ್ ಪ್ಯಾಡ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ 10 ಕಾಂಟ್ಯಾಕ್ಟ್‌ಗಳನ್ನು ಸೇವ್ ಮಾಡಿಕೊಳ್ಳುವ ಆಯ್ಕೆ ಅನ್ನು ಒಳಗೊಂಡಿದೆ. ಸಂಸ್ಥೆಯ ಈ ಡಯಲ್ ಪ್ಯಾಡ್ ಮತ್ತು ಕಾಂಟ್ಯಾಕ್ಟ್ ಸ್ಟೋರೇಜ್ ಆಯ್ಕೆಗಳು ಈ ವಾಚ್‌ನ ಪ್ರತಿಸ್ಪರ್ಧಿಗಳಿಗಿಂತ ದೊಡ್ಡ ಪ್ರಯೋಜನವಾಗಿದೆ.
ಬೋಟ್ ಅಲ್ಟಿಮಾ ಕಾಲ್‌ನ ಇತರೆ ಆಯ್ಕೆಗಳು : ಬೋಟ್ ವಾಚ್ ಕ್ರೆಸ್ಟ್ ಪ್ಲಸ್ OS ನೊಂದಿಗೆ ಹೊಂದಿದ್ದು, ಜೊತೆಗೆ ವಿವಿಧ ಆರೋಗ್ಯ ಮೇಲ್ವಿಚಾರಣಾ ಆಯ್ಕೆಗಳನ್ನು ಸಹ ಪಡೆದಿದೆ. ಮುಖ್ಯವಾಗಿ ಹೃದಯ ಬಡಿತ ಟ್ರ್ಯಾಕಿಂಗ್, SpO2, ದೈನಂದಿನ ಚಟುವಟಿಕೆ ಟ್ರ್ಯಾಕರ್ ಮತ್ತು ಇತರೆ ಪ್ರಮುಖ ಆಯ್ಕೆಗಳು ಸೇರಿವೆ. ಅಲ್ಲದೇ ವಾಚ್ 700 ಪ್ಲಸ್ ಸ್ಪೋರ್ಟ್ಸ್ ಮೋಡ್‌ಗಳನ್ನು ಟ್ರ್ಯಾಕ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಬೋಟ್ ಅಲ್ಟಿಮಾ ಕಾಲ್‌ನ ವಾಚ್‌ಫೇಸ್ ಆಯ್ಕೆ: ಇನ್ನು ಈ ಬೋಟ್ ವಾಚ್ IP68 ರೇಟಿಂಗ್ ಪಡೆದಿದ್ದು, ಇದು ಬಳಕೆದಾರರಿಗೆ ಹೊರಾಂಗಣ ಚಟುವಟಿಕೆಗಳಿಗೆ ವಾಚ್ ಬಳಸಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಈ ವಾಚ್ 100+ ಕಸ್ಟ್‌ಮೈಸ್ ಮಾಡಬಹುದಾದ ವಾಚ್ ಫೇಸ್‌ಗಳನ್ನು ಸಪೋರ್ಟ್ ಪಡೆದಿದೆ ಎಂದು ಕಂಪನಿಯು ಬಹಿರಂಗಪಡಿಸುತ್ತದೆ.
ಬೋಟ್ ಅಲ್ಟಿಮಾ ಕಾಲ್‌ನ ಬೆಲೆ ಮತ್ತು ಲಭ್ಯತೆ : ಬೋಟ್ ಅಲ್ಟಿಮಾ ಕಾಲ್ ಸ್ಮಾರ್ಟ್‌ವಾಚ್ ಪರಿಚಯಾತ್ಮಕ ಬೆಲೆಯು 1,699ರೂ. ಆಗಿದೆ. ಸಂಸ್ಥೆಯು ಈ ಸ್ಮಾರ್ಟ್‌ವಾಚ್ ಅನ್ನು ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದ್ದು, ಅವುಗಳೆಂದರೆ ಕಪ್ಪು, ಗುಲಾಬಿ, ನೀಲಿ ಮತ್ತು ಬೆಳ್ಳಿ ಆಗಿದೆ. ಅಂದಹಾಗೆ ಈ ವಾಚ್ ಮಾರಾಟವು ಅಮೆಜಾನ್‌ನಲ್ಲಿ ಪ್ರತ್ಯೇಕವಾಗಿ ಜೂನ್ 19 ರಿಂದ ಮಧ್ಯಾಹ್ನ ಪ್ರಾರಂಭವಾಗುತ್ತದೆ ಎಂದು ಕಂಪನಿಯು ಬಹಿರಂಗಪಡಿಸಿದೆ.
ಬೋಟ್ ವೇವ್ ಅಲ್ಟಿಮಾ ಸ್ಮಾರ್ಟ್‌ವಾಚ್ ಫೀಚರ್ಸ್ : ಬೋಟ್ ಸಂಸ್ಥೆಯು ಈ ವಾಚ್ 1.8 ಇಂಚಿನ ಬಾಗಿದ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್ ಒಳಗೊಂಡಿದೆ. ಇದು ಎಡ್ಜ್-ಟು-ಎಡ್ಜ್ ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಹೊಂದಿದೆ. ಈ ಸ್ಮಾರ್ಟ್‌ವಾಚ್ ಇನ್‌ಬಿಲ್ಟ್ HD ಸ್ಪೀಕರ್ ಅನ್ನು ಹೊಂದಿದ್ದು, ಇದು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ವಾಚ್ IP68 ಧೂಳು, ಬೆವರು ಮತ್ತು ಸ್ಪ್ಲಾಶ್ ಪ್ರೂಫ್ ಅನ್ನು ಹೊಂದಿದೆ.
boat ultima call with bluetooth calling launched price in india.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 01:58 pm
Mangalore Correspondent
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm