ಬ್ರೇಕಿಂಗ್ ನ್ಯೂಸ್
27-07-21 05:19 pm Headline Karnataka News Network ಕ್ರೈಂ
Photo credits : Indiatoday
ಪಾಟ್ನಾ, ಜುಲೈ 27: ತಮ್ಮ ಹುಡುಗಿಯ ಜೊತೆ ಅಫೇರ್ ಇಟ್ಟುಕೊಂಡಿದ್ದಾನೆ ಎಂಬ ಒಂದೇ ಕಾರಣಕ್ಕೆ 17 ವರ್ಷದ ಹುಡುಗನನ್ನು ಕತ್ತಿ , ದೊಣ್ಣೆಯಿಂದ ಹಲ್ಲೆ ಮಾಡಿದ್ದಲ್ಲದೆ, ಆತನ ಜನನಾಂಗವನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದ ಘಟನೆ ಬಿಹಾರದಲ್ಲಿ ನಡೆದಿದೆ.
ಮುಝಫರ್ ಪುರ ಜಿಲ್ಲೆಯ ಕಾಂತಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್ ಪುರ್ಷಾ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಈ ವಿಚಾರ ಹೊರಬರುತ್ತಲೇ ಜಿಲ್ಲೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಅದಲ್ಲದೆ, ಆರೋಪಿ ಕುಟುಂಬಸ್ಥರು ಹುಡುಗನನ್ನು ಕೊಲೆಗೈದ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಈ ಭಾಗದಲ್ಲಿ ಗಲಭೆ ಹೊತ್ತಿಕೊಳ್ಳುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮೃತ ಹುಡುಗನನ್ನು ಸೌರಭ್ ಕುಮಾರ್ (17) ಎಂದು ಗುರುತಿಸಲಾಗಿದೆ. ಸೌರಭ್ ಪಕ್ಕದ ಗ್ರಾಮದ ಯುವತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಇದಕ್ಕೆ ಹುಡುಗಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಹುಡುಗಿ ಹಿಂದೆ ಬರುತ್ತಿದ್ದುದಕ್ಕೆ ಎಚ್ಚರಿಕೆ ನೀಡಿದ್ದಲ್ಲದೆ, ಈ ಹಿಂದೊಮ್ಮೆ ಥಳಿಸಿದ್ದೂ ಆಗಿತ್ತು. ಆನಂತರ ಸೌರಭ್ ತಂದೆಯೇ ಮಗನನ್ನು ಬೇರೆಡೆಗೆ ಕಳುಹಿಸಿದ್ದರು. ಆದರೆ ಇತ್ತೀಚೆಗೆ ಸೋದರಿಯ ಮದುವೆ ಹಿನ್ನೆಲೆಯಲ್ಲಿ ಮರಳಿ ಗ್ರಾಮಕ್ಕೆ ಬಂದಿದ್ದ.
ಈ ವೇಳೆ, ಹುಡುಗಿಯಿದ್ದ ಮನೆಗೆ ತೆರಳಿದ್ದು ವಿಕೋಪಕ್ಕೆ ಕಾರಣವಾಗಿದೆ. ಹುಡುಗಿ ಮನೆಯವರು ಸೇರಿ ಆತನಿಗೆ ದೊಣ್ಣೆಯಲ್ಲಿ ಹೊಡೆದಿದ್ದಲ್ಲದೆ, ಜನನಾಂಗವನ್ನು ಕತ್ತರಿಸಿದ್ದಾರೆ. ಆನಂತರ ಹುಡುಗನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ, ಆತ ಬದುಕದೆ ಸಾವು ಕಂಡಿದ್ದ. ಘಟನೆ ಬಗ್ಗೆ ಕಾಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹುಡುಗನ ಮನೆಯವರು ಆಬಳಿಕ ಆರೋಪಿತರ ಮನೆಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ಅಲ್ಲದೆ, ಹುಡುಗನ ಶವವನ್ನು ಆರೋಪಿ ಮನೆಯೆದುರಲ್ಲೇ ಇಟ್ಟು ಅಂತ್ಯಕ್ರಿಯೆ ನಡೆಸಿದ್ದಾರೆ.
In a shocking incident, a 17-year-old boy was brutally beaten to death and his genitals chopped off in Bihar's Muzzafarpur on Friday by the family of a girl over their alleged love affair. Angered over the incident, the kin of the deceased attacked the house of the suspected accused and cremated the body in front of the accused's house.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 09:42 pm
HK News Desk
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm