ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲೇ ವಂಚನೆ ; ಮಲ್ಪೆ ಎಸ್ ಬಿಐ ಬ್ಯಾಂಕಿನಿಂದ ಐವರ ಖಾತೆಗಳಿಗೆ 73 ಲಕ್ಷ ರೂ. ವರ್ಗಾಯಿಸಿ ದೋಖಾ, ಮ್ಯಾನೇಜರ್ ಸೇರಿ ಹಲವರ ವಿರುದ್ಧ ಕೇಸು 

01-09-25 03:07 pm       Udupi Correspondent   ಕ್ರೈಂ

ಎಸ್ ಬಿಐ ಮಲ್ಪೆ ಶಾಖೆಯಲ್ಲಿ ಮ್ಯಾನೇಜರ್ ಮತ್ತು ಬ್ಯಾಂಕ್ ಸಿಬಂದಿಯೇ ನಕಲಿ ದಾಖಲೆ ಸೃಷ್ಟಿಸಿ 73 ಲಕ್ಷ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.‌

ಉಡುಪಿ, ಸೆ.1 : ಎಸ್ ಬಿಐ ಮಲ್ಪೆ ಶಾಖೆಯಲ್ಲಿ ಮ್ಯಾನೇಜರ್ ಮತ್ತು ಬ್ಯಾಂಕ್ ಸಿಬಂದಿಯೇ ನಕಲಿ ದಾಖಲೆ ಸೃಷ್ಟಿಸಿ 73 ಲಕ್ಷ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.‌

ಹೌಸಿಂಗ್ ಫೈನಾನ್ಸ್ ಕಂಪನಿಯಿಂದ ಇ-ಮೇಲ್ ಸಂದೇಶ ಬಂದಿದೆ ಎಂದು ಬ್ಯಾಂಕಿನ ಮಲ್ಪೆ ಶಾಖೆಯಿಂದ ಅದರಲ್ಲಿ ಸೂಚಿಸಿದ ನಾಲ್ವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಸಮುದಾ ಸುವರ್ಣ ನಂತೂರು, ಶರ್ಮಿಳಾ ಎಸ್.ಮುಳೂರು, ಸುಶಾಂತ್ ತಿಂಗಳಾಯ ಕೋಡಿ, ಎಂ.ರಮಾನಾಥ ಬೊಂದೆಲ್ ಮಂಗಳೂರು, ಸದಾನಂದ ಜಿ.ರಾವ್ ಕುಂಜಾಲು ಎಂಬವರ ಹೆಸರಿನ ಐವರು ಖಾತೆದಾರರಿಗೆ ಒಟ್ಟು 73 ಲಕ್ಷ ರೂ. ವರ್ಗಾವಣೆ ಮಾಡಲಾಗಿತ್ತು. 

ಈ ಬಗ್ಗೆ ಆ.25ರಂದು ಮಲ್ಪೆ ಶಾಖೆಯ ಪ್ರಸ್ತುತ ಮ್ಯಾನೇಜರ್ ರಾಜೇಶ್ ಗಣಪತಿ ಅವರಿಗೆ ಎಸ್‌ಬಿಐ ಮುಂಬೈ ಶಾಖೆಯಿಂದ ವಿವರಣೆ ಕೇಳಲಾಗಿತ್ತು. ಮಲ್ಪೆ ಎಸ್‌ಬಿಐ ಶಾಖೆಯಿಂದ ಮಾಡಲಾಗಿದ್ದ ಹಣ ವರ್ಗಾವಣೆಗೆ ಸಂಬಂಧಿಸಿ ದಾಖಲೆಗಳನ್ನು ಆ.26ರಂದು ಮುಂಬೈ ಮುಖ್ಯ ಕಚೇರಿಗೆ ಮ್ಯಾನೇಜ‌ರ್ ಸಲ್ಲಿಸಿದ್ದರು. 

ಆದರೆ ಈ ಬಗ್ಗೆ ಫೈನಾನ್ಸ್ ಕಂಪನಿಯಲ್ಲಿ ವ್ಯವಹರಿಸಿದಾಗ, ನಾವು ಯಾವುದೇ ಇ-ಮೇಲ್ ಸಂದೇಶ ಕಳುಹಿಸಿಲ್ಲ ಎಂದು ಉತ್ತರ ಬಂದಿತ್ತು. ಕಂಪನಿಯಿಂದ ಹಣ ವರ್ಗಾವಣೆಗೆ ಸಂಬಂಧಿಸಿ ಮಲ್ಪೆ ಎಸ್‌ಬಿಐ ಶಾಖೆಗೆ ಯಾವುದೇ ಮನವಿ ಕಳುಹಿಸಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಎಸ್ ಬಿಐ ಶಾಖೆಯ ಮ್ಯಾನೇಜರ್ ತ‌ನಿಖೆ ನಡೆಸಿದಾಗ ಅವ್ಯವಹಾರ ಪತ್ತೆಯಾಗಿದೆ. 

ಮಲ್ಪೆ ಶಾಖೆಯ ಈ ಹಿಂದೆ ಮ್ಯಾನೇಜ‌ರ್ ಆಗಿದ್ದ ಮೀರಾ ಪಲ್ಲವಿ ಟಿ.ಎಚ್. ಎಂಬವರು ಹಾಗೂ ಇತರರೊಂದಿಗೆ ಸೇರಿ ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದೆ. ಆ.11ರಿಂದ 22ರ ಅವಧಿಯಲ್ಲಿ ಒಟ್ಟು 73 ಲಕ್ಷ ರೂ. ಹಣ ವರ್ಗಾಯಿಸಿ ಸ್ವಂತಕ್ಕೆ ಬಳಸಿಕೊಂಡಿರುವುದು ಪತ್ತೆಯಾಗಿದೆ. ಆಮೂಲಕ ಬ್ಯಾಂಕಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿದ ಆರೋಪದಲ್ಲಿ ಹಿಂದಿನ ಮ್ಯಾನೇಜರ್ ಪಲ್ಲವಿ ಮತ್ತು ಖಾತೆದಾರರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A major financial fraud has come to light at the State Bank of India (SBI) Malpe branch, where the bank’s own staff, including the former branch manager, are accused of forging documents and fraudulently transferring ₹73 lakh to multiple personal accounts under the pretext of a housing finance transaction.