ಬ್ರೇಕಿಂಗ್ ನ್ಯೂಸ್
01-09-25 01:25 pm Bangalore Correspondent ಕರ್ನಾಟಕ
ಬೆಂಗಳೂರು, ಸೆ 01 : ಎಸ್‌ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ನನ್ನ ಅಧ್ಯಾಯ ಮುಗಿದಿದ್ದು ನಾನು ಇನ್ನು ಯಾವುದಕ್ಕೂ ಮುಂದೆ ಹೋಗುವುದಿಲ್ಲ. ಏನೋ ತಪ್ಪು ಆಗಿದೆ, ತಪ್ಪು ಸರಿಪಡಿಸಿಕೊಳ್ಳುತ್ತೇನೆ ಎಂದು ಧರ್ಮಸ್ಥಳದಲ್ಲಿ ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದ ಸುಜಾತ ಭಟ್ ಹೇಳಿದ್ದಾರೆ.
ಮಾಧ್ಯಮ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಫೋನ್ ಎಸ್‌ಐಟಿಯಲ್ಲಿದೆ. ಅವರು ನನ್ನ ಕಾಲ್ ರೆಕಾರ್ಡ್ ಎಲ್ಲವನ್ನೂ ಈಗ ನೋಡುತ್ತಿರಬಹುದು. 15 ದಿನ ಬಿಟ್ಟು ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ನಾನು ತಪ್ಪು ಮಾಡಿದ್ದೇನೆ. ಆದರೆ ಯಾರೂ ಬೇಕು ಎಂದು ತಪ್ಪು ಮಾಡುವುದಿಲ್ಲ. ಹಣೆ ಬರಹ ಹಾಳಾದಾಗ ಹೀಗೆ ಆಗುತ್ತದೆ.
ಚಿನ್ನಯ್ಯನನ್ನು ಬಾಡಿಗಾರ್ಡ್ ಎಂದು ಹೇಳಿ ಪರಿಚಯಿಸಿದ್ದರು. ನನ್ನನ್ನು ಅವರು ದೆಹಲಿಗೆ ಕರೆದುಕೊಂಡು ಹೋಗಿದ್ದರು. ದೆಹಲಿಯಲ್ಲಿ ನಾನು ವಕೀಲರ ಬಳಿ ಮಾತನಾಡಿಲ್ಲ. ಆದರೆ ಒಂದು ಕಡೆ ಕಾರಿನಲ್ಲಿ ಕೂರಿಸುತ್ತಿದ್ದರು. ಯಾರ ಜೊತೆಗೆ, ಅವರು ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ನಡೆದ ಎಲ್ಲಾ ವಿಚಾರವನ್ನು ವಿವರವಾಗಿ ತಿಳಿಸಿದ್ದೇನೆ. ಈ ಹೋರಾಟಕ್ಕೆ ನಾನು ಯಾರನ್ನೂ ಸಂಪರ್ಕ ಮಾಡಿರಲಿಲ್ಲ. ಆದರೆ ಅವರೇ ನನ್ನ ಮನೆಗೆ ಬಂದು ಸಂಪರ್ಕ ಮಾಡಿದ್ದರು.
ನನ್ನ ಬಳಿ ಯಾವುದನ್ನೂ ಕೂಲಂಕಷವಾಗಿ ಹೇಳಿಲ್ಲ. ನಾನು ಬೇರೆ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೆ. ಆದರೆ ನನ್ನನ್ನು ಅವರು ಬಳಸಿಕೊಂಡಿದ್ದಾರೆ ಎಂಬ ನೋವು ನನಗೆ ಇದೆ. ಮುಂದೆ ವೃದ್ದಾಶ್ರಮನೋ ಏನೋ ನೋಡಬೇಕು. ನನಗೆ ಇದರಿಂದ ಹೊರಗೆ ಬರಲು ಕಾಲಾವಕಾಶ ಬೇಕು.
ಆಸ್ತಿ ಗಲಾಟೆ ವಿವರ, ನನ್ನ ಬದುಕಿನ ಎಲ್ಲಾ ವಿವರವನ್ನು ಕೇಳಿದ್ದಾರೆ. ವಾಸಂತಿ ಬದುಕಿದ್ದಾಳೆ, ಸತ್ತಿಲ್ಲ. ಅವಳ ಸಾವಿನ ಬಗ್ಗೆ ಅನುಮಾನ ಇದೆ ಎಂದಿದ್ದೇನೆ ಎಂದು ಹೇಳಿದರು.
ವಿಚಾರಣೆಯಿಂದ ನನಗೆ ಮುಕ್ತಿ ಕೊಡಿ ಎಂದು ಕೇಳಿದ್ದೇನೆ. ಎಸ್‌ಐಟಿ ಅವರು ಬಹಳ ಚೆನ್ನಾಗಿ ನಡೆಸಿಕೊಂಡಿದ್ದಾರೆ. ಬಸ್ ಟಿಕೇಟ್ ಕೂಡ ಅವರೇ ಬುಕ್ ಮಾಡಿ ನೀಡಿದ್ದಾರೆ. ನೀಡಿರುವ ದೂರನ್ನು ನಾನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Sujata Bhatt, the woman who had filed a complaint in the Dharmasthala missing persons case claiming her daughter had gone missing, has now made a stunning revelation. Speaking to a media outlet, she admitted to making mistakes and revealed that she has given a full statement to the Special Investigation Team (SIT).
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am