ಬ್ರೇಕಿಂಗ್ ನ್ಯೂಸ್
31-08-25 01:32 pm HK News Desk ದೇಶ - ವಿದೇಶ
ಟೋಕಿಯೊ, ಆ.31 : ರಕ್ಷಣಾ ವಲಯ, ಭದ್ರತಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ಜಂಟಿ ಘೋಷಣೆ, ಆರ್ಥಿಕ ಅಭಿವೃದ್ಧಿ ವಿಚಾರದಲ್ಲಿ 13 ಒಪ್ಪಂದಗಳಿಗೆ ಸಹಿ, ವಿವಿಧ ಕ್ಷೇತ್ರಗಳಲ್ಲಿ ಒಟ್ಟು 6 ಲಕ್ಷ ಕೋಟಿ ಹೂಡಿಕೆ ಒಪ್ಪಂದಗಳನ್ನು ಪ್ರಧಾನಿ ಮೋದಿ ಅವರು ಜಪಾನ್ ಭೇಟಿಯಲ್ಲಿ ಅಂತಿಮಗೊಳಿಸಿದ್ದಾರೆ. ಎರಡು ದಿನಗಳ ಜಪಾನ್ ಪ್ರವಾಸ ಪೂರ್ಣಗೊಳಿಸಿ ಮೋದಿ ಚೀನಾಗೆ ತೆರಳಿದ್ದಾರೆ.
ಜಪಾನ್ ಪ್ರಧಾನಿ ಶಿಗೆರು ಇಶಿಬಾ ಮತ್ತು ಅಲ್ಲಿನ ಹಲವು ಉದ್ಯಮಿಗಳ ಜತೆ ಮಹತ್ವದ ಮಾತುಕತೆ ನಡೆಸಿದ ಮೋದಿ, ಮುಂದಿನ ಒಂದು ದಶಕದಲ್ಲಿ ಉಭಯ ದೇಶಗಳ ಆರ್ಥಿಕ ಬಲವರ್ಧನೆಗಾಗಿ ಹಲವು ಯೋಜನೆಗಳನ್ನು ಜಂಟಿಯಾಗಿ ಘೋಷಣೆ ಮಾಡಿದ್ದಾರೆ. ಆರ್ಥಿಕ ಭದ್ರತೆ, ಸೆಮಿಕಂಡಕ್ಟರ್ ವಲಯ, ಶುದ್ಧ ಇಂಧನ ಉತ್ಪಾದನೆ, ಟೆಲಿಕಾಂ, ಫಾರ್ಮಾಸ್ಯುಟಿಕಲ್, ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಸಹಕಾರ, ಸೂಕ್ಷ್ಮ ಖನಿಜಗಳ ಪರಸ್ಪರ ಪೂರೈಕೆ ಕುರಿತಂತೆ ಉಭಯ ದೇಶಗಳ ನಡುವಿನ ತಿಳುವಳಿಕೆ ಒಪ್ಪಂದಗಳಿಗೆ ಮೋದಿ ಹಾಗೂ ಇಶಿಬಾ ಸಹಿ ಹಾಕಿದ್ದಾರೆ.




ಬುಲೆಟ್ ರೈಲು ಪ್ರಯಾಣ
ಪ್ರವಾಸದ ಎರಡನೇ ದಿನವಾದ ಶನಿವಾರ ಮೋದಿ ಅವರು ಇಶಿಬಾ ಅವರೊಂದಿಗೆ ಬುಲೆಟ್ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಮಿಯಾಗಿ ಪ್ರಾಂತ್ಯದ ಸೆಂಡೈನ ಸೆಮಿ ಕಂಡಕ್ಟರ್ ಘಟಕಕ್ಕೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ಸೆಮಿ ಕಂಡಕ್ಟರ್ ವಲಯದಲ್ಲಿ ಜಪಾನ್ ದೇಶದ ಪ್ರಮುಖ ಕಂಪನಿಯಾದ ಟೋಕಿಯೋ ಇಲೆಕ್ಟ್ರಾನಿಕ್ಸ್ ಫ್ಯಾಕ್ಟರಿಯನ್ನು ವೀಕ್ಷಿಸಿದರು. ಭಾರತ ಸಹಯೋಗದಲ್ಲಿ ಟಿಇಎಲ್ ಹೊಂದಿರುವ ಹಲವು ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಪಾನ್ ಪೂರ್ವ ರೈಲ್ವೆಯಲ್ಲಿ ತರಬೇತಿಯಲ್ಲಿರುವ ಭಾರತೀಯ ಲೋಕೊ ಪೈಲಟ್ ಗಳ ಜತೆಗೂ ಮೋದಿ ಸಮಾಲೋಚಿಸಿದರು.
Prime Minister Narendra Modi on Saturday (August 30, 2025) left for China to attend the SCO summit after wrapping up a two-day visit to Japan. During his visit, India and Japan firmed up 13 key agreements and declarations and announced the launch of several key initiatives.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm