ಬ್ರೇಕಿಂಗ್ ನ್ಯೂಸ್
29-03-25 04:02 pm Mangalore Correspondent ಕ್ರೈಂ
ಮಂಗಳೂರು, ಮಾ.29 : ಅಕ್ರಮ ಗೋಸಾಗಾಟ ಮಾಡುತ್ತಿದ್ದಾರೆಂದು ತಪ್ಪು ಮಾಹಿತಿ ಆಧರಿಸಿ ಕೃಷಿಕನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಮೂಡುಬಿದ್ರೆ ಠಾಣೆ ವ್ಯಾಪ್ತಿಯ ಬೆಳುವಾಯಿ - ಕಾಂತಾವರ ಕ್ರಾಸ್ ನಲ್ಲಿ ನಡೆದಿದೆ. ಪ್ರಕರಣ ಸಂಬಂಧಿಸಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಂಗಬೆಟ್ಟು ನಿವಾಸಿ ಅಬ್ದುಲ್ ರೆಹಮಾನ್ ಮತ್ತು ಮೂಡುಬಿದ್ರೆಯ ಕೂಸ ಪೂಜಾರಿ (56) ಹಲ್ಲೆಗೀಡಾದವರು. ಗಿರ್ ಜಾತಿಯ ಹೋರಿಯನ್ನು ತನ್ನ ಮನೆಯಲ್ಲಿ ಬೇರೊಂದು ದನಕ್ಕೆ ಕ್ರಾಸ್ ಮಾಡುವುದಕ್ಕಾಗಿ ಕಾರ್ಕಳ ಬಳಿಯ ಅಜೆಕಾರಿನ ಪ್ರಕಾಶ್ ಪೂಜಾರಿ ಎಂಬವರಿಂದ ಖರೀದಿಸಿದ್ದ ಮೂಡುಬಿದ್ರೆ ಬಳಿಯ ಕರಿಂಜೆ ನಿವಾಸಿ ಕೂಸ ಪೂಜಾರಿ ತನ್ನ ಮನೆಗೆ ಒಯ್ಯುತ್ತಿದ್ದರು. ಅಬ್ದುಲ್ ರೆಹಮಾನ್ ಅವರ ಪಿಕಪ್ ವಾಹನದಲ್ಲಿ ತರುತ್ತಿದ್ದಾಗ ಕಾರ್ಕಳದ ಹಿಂದು ಸಂಘಟನೆ ಕಾರ್ಯಕರ್ತರಿಂದ ಮಾಹಿತಿ ಪಡೆದು ಕಾಂತಾವರ ಕ್ರಾಸ್ ಬಳಿ ಯುವಕರು ಅಡ್ಡ ಹಾಕಿದ್ದಾರೆ.
ಈ ವೇಳೆ, ಸ್ಥಳೀಯ ಪಂಚಾಯತ್ ಪರವಾನಗಿ ಹೊಂದಿರುವ ಬಗ್ಗೆ ತಿಳಿಸಿದರೂ, ಉದ್ರಿಕ್ತ ಯುವಕರು ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ತಪ್ಪು ಮಾಹಿತಿಯಿಂದಾಗಿ ವಾಹನದ ಮೇಲೆ ಮತ್ತು ಇಬ್ಬರು ವ್ಯಕ್ತಿಗಳ ಮೇಲೆ ದೊಣ್ಣೆಯಿಂದ ದಾಳಿ ನಡೆಸಿದ್ದಾರೆ. ಗಾಯಗೊಂಡ ಕೂಸ ಪೂಜಾರಿ (56) ಮೂಡುಬಿದ್ರೆ ಆಳ್ವಾಸ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಅಬ್ದುಲ್ ರೆಹಮಾನ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೋರಿಯನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆಂದು ತಪ್ಪು ಮಾಹಿತಿ ಮೇರೆಗೆ ಒಂಬತ್ತು ಮಂದಿ ಸಂಘಟನೆ ಯುವಕರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸುರತ್ಕಲ್ ಮೂಲದ ಧನರಾಜ್ ಮತ್ತು ಕಡಂದಲೆಯ ಸುಧೀರ್ ಶೆಟ್ಟಿ ಎಂಬವರನ್ನು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಈ ಘಟನೆ ನಡೆದಿದೆ. ಇದೇ ದಿನ ಬೆಳಗ್ಗೆ ಕೈಕಂಬ ಬಳಿಯ ಸೂರಲ್ಪಾಡಿಯಲ್ಲಿ ಪಿಕಪ್ ಅಡ್ಡಹಾಕಿದ್ದ ಹಿಂದು ಸಂಘಟನೆ ಕಾರ್ಯಕರ್ತರು ಹಿಂಸಾತ್ಮಕ ರೀತಿಯಲ್ಲಿ 20ಕ್ಕು ಹೆಚ್ಚು ಗೋವುಗಳನ್ನು ಕಸಾಯಿಖಾನೆಗೆ ಒಯ್ಯುತ್ತಿರುವುದನ್ನು ರಕ್ಷಣೆ ಮಾಡಿದ್ದಾರೆ. ಅದರಲ್ಲಿದ್ದ ನಾಲ್ವರು ಗೋಕಳ್ಳರು ಪರಾರಿಯಾಗಿದ್ದರು.
False information about cows being taken to slaughterhouse; Hindu pro activists attack farmer in Moodbidri, two youths arrested. The activists acted upon a tip-off and intercepted a pickup vehicle that was transporting the cattle in deplorable conditions. They immediately alerted the police, who have since taken the vehicle and the cattle into custody.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm