ಬ್ರೇಕಿಂಗ್ ನ್ಯೂಸ್
22-02-25 10:36 pm Bangalore Correspondent ಕ್ರೈಂ
ಬೆಂಗಳೂರು, ಫೆ.22 : ವಿದೇಶಿ ವರ್ಕಿಂಗ್ ವೀಸಾ ಕೊಡಿಸುವುದಾಗಿ ಹೇಳಿ 51 ಜನರಿಂದ ಎರಡೂವರೆ ಕೋಟಿ ಪಡೆದು ವಂಚಿಸಿದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತಿಲಕನಗರ ನಿವಾಸಿ ಸಕ್ಲೇನ್ ಸುಲ್ತಾನ್ (34) ಮತ್ತು ಈತನ ಪತ್ನಿ ನಿಖಿತಾ ಸುಲ್ತಾನ್ (28) ಬಂಧಿತರು. ಆರೋಪಿಗಳಿಂದ ಎರಡು ಐಷಾರಾಮಿ ಕಾರು, ಎರಡು ದ್ವಿಚಕ್ರ ವಾಹನ, 66 ಲಕ್ಷ ನಗದು, 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ರಾಜಸ್ಥಾನ ಮೂಲದ ಮಗ್ ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿ ಸಕ್ಲೇನ್ ಸುಲ್ತಾನ್ ಈ ಹಿಂದೆ ನಗರದ ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುವಾಗ ವಿದೇಶಿ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ವಿದೇಶದಲ್ಲಿ ಹಾರ್ಸ್ ಜಾಕಿ ಸೇರಿ ಬೇರೆ ಕೆಲಸ ಮಾಡಲು ಆಸಕ್ತರಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ ರೂ.50 ಸಾವಿರ ಕಮಿಷನ್ ನೀಡುವುದಾಗಿ ಆತ ಹೇಳಿದ್ದ. ಅದರಂತೆ ಆರೋಪಿಗಳು ಆರಂಭದಲ್ಲಿ ಇಬ್ಬರಿಗೆ ಈ ವಿದೇಶಿ ಜಾಕಿ ಮುಖಾಂತರ ವೀಸಾ ಮಾಡಿಸಿ ರೂ.1 ಲಕ್ಷ ಕಮಿಷನ್ ಪಡೆದಿದ್ದಾರೆ.
ಇದರ ಬಗ್ಗೆ ಇವರು ಜಾಹೀರಾತು ನೀಡಿದ್ದು ರಾಜಸ್ಥಾನ ಮೂಲದ ಮಗ್ ಸಿಂಗ್ ಇದನ್ನು ಗಮನಿಸಿದ್ದರು. ಮಗ್ ಸಿಂಗ್ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದರು. ತಮ್ಮ ಕಂಪನಿ ಬೆಂಗಳೂರಿನಲ್ಲಿದ್ದು, ವಿದೇಶಗಳಲ್ಲಿ ಕೆಲಸ ಮಾಡಲು ವರ್ಕಿಂಗ್ ವೀಸಾ ಮಾಡಿಸಿಕೊಡುವುದಾಗಿ ಹೇಳಿದ್ದರು.
ಅಲ್ಲದೆ, ವೀಸಾ ಕೊಡಿಸಬೇಕಿದ್ದರೆ ತಲಾ ರೂ.8 ಲಕ್ಷ ನೀಡಬೇಕೆಂದು ತಿಳಿಸಿದ್ದಾರೆ. ದಾಖಲೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವಂತೆ ಹೇಳಿದ್ದು ಇಬ್ಬರಿಂದ ರೂ.16 ಲಕ್ಷ ಪಡೆದು ಜಪಾನ್ ಮತ್ತು ನ್ಯೂಜಿಲ್ಯಾಂಡ್ ವೀಸಾ ಮಾಡಿಸಿಕೊಟ್ಟಿದ್ದರು. ಇದರಿಂದಾಗಿ ಆರೋಪಿಗಳನ್ನು ನಂಬಿದ್ದ ಮಗ್ ಸಿಂಗ್ ಮತ್ತೆ ಮೂವರು ಸ್ನೇಹಿತರಿಗೆ ವೀಸಾ ಮಾಡಿಸುವಂತೆ ರೂ.8 ಲಕ್ಷದಂತೆ ಒಟ್ಟು 24 ಲಕ್ಷ ನೀಡಿದ್ದಾರೆ. ಆದರೆ, ತಿಂಗಳು ಕಳೆದರೂ ವೀಸಾ ಮಾಡಿಸಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಎಂಬೆಸ್ಸಿಯಲ್ಲಿ ಬಾಕಿಯಿದ್ದು, ಕೆಲವೇ ದಿನಗಳಲ್ಲಿ ವೀಸಾ ಬರಲಿದೆ ಎಂದು ಹೇಳಿದ್ದಾರೆ.
ಕೆಲವು ಸಮಯದ ಬಳಿಕ ವೀಸಾ ನೀಡಿದ್ದು ಪರಿಶೀಲಿಸಿದಾಗ ನಕಲಿ ಎಂಬುದು ತಿಳಿದಿದೆ. ಈ ಬಗ್ಗೆ ಪ್ರಶ್ನಿಸಲು ಕರೆ ಮಾಡಿದರೆ, ಆರೋಪಿಗಳು ಕರೆ ಸ್ವೀಕರಿಸಿಲ್ಲ. ಬಳಿಕ ಬೆಂಗಳೂರಿಗೆ ಬಂದು ಅವರು ನೀಡಿದ್ದ ವಿಳಾಸಕ್ಕೆ ತೆರಳಿದಾಗ ನಕಲಿ ವಿಳಾಸ ಎಂದು ತಿಳಿದುಬಂದಿತ್ತು. ಹೀಗಾಗಿ ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ವಂಚನೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 51 ಮಂದಿಗೆ ವಂಚನೆ ಮಾಡಿದ್ದಲ್ಲದೆ, 2.64 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ.
The City police have arrested a couple, residents of Tilak Nagar, for cheating over 50 people promising to get them work visas in various countries for a price. Police have recovered ₹80 lakh worth valuables including ₹66 lakh cash from the accused.
21-10-26 10:31 pm
HK News Desk
ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,10...
20-10-26 06:06 pm
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
22-10-26 09:37 pm
HK News Desk
ರೆಸ್ಲರ್ ‘ಗ್ರೇಟ್ ಖಲಿ’ ನೋಡಲು ಹುಚ್ಚೆದ್ದು ಸೇರಿದ ಅ...
21-10-26 09:20 pm
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
Mangalore Accident, Ullal: ಓವರ್ ಟೇಕ್ ಧಾವಂತದಲ್...
19-10-26 08:41 pm
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
22-10-26 03:21 pm
HK News Staffer
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm
Boliyaru Murder Case, Dakshina Kannada Crime...
22-10-26 10:32 am
ಬೋಳಿಯಾರಿನಲ್ಲಿ ಸ್ಕೂಟರ್ ಸವಾರರ ಸಾವು ಪ್ರಕರಣ ; ಅಪಘ...
20-10-26 05:06 pm