ಬ್ರೇಕಿಂಗ್ ನ್ಯೂಸ್
05-04-23 06:46 pm Bangalore Correspondent ಕ್ರೈಂ
ಬೆಂಗಳೂರು, ಎ.5: ಇದ್ರೀಷ್ ಪಾಷಾ ಹತ್ಯೆ ಪ್ರಕರಣದ ಆರೋಪಿಗಳಾದ ಪುನೀತ್ ಕೆರೆಹಳ್ಳಿ ಹಾಗೂ ಆತನ ನಾಲ್ವರು ಸಹಚರರನ್ನು ರಾಮನಗರ ಪೊಲೀಸರು ರಾಜಸ್ಥಾನದಲ್ಲಿ ಬುಧವಾರ ಬಂಧಿಸಿದ್ದಾರೆ.
ಇತ್ತೀಚೆಗೆ ಕನಪುರದ ಸಾತನೂರು ಬಳಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನವಾಗಿದೆ.

ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರರನ್ನು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಸಾತನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣ ದಾಖಲಾಗುತ್ತಲೇ ಆರೋಪಿಗಳು ಕರ್ನಾಟಕದಿಂದ ಪರಾರಿ ಆಗಿದ್ದರು. ಒಟ್ಟು ನಾಲ್ಕು ಪೊಲೀಸ್ ತಂಡ ರಚಿಸಲಾಗಿದ್ದು ಆರೋಪಿಗಳನ್ನು ರಾಜಸ್ಥಾನದಿಂದ ಕರ್ನಾಟಕಕ್ಕೆ ಕರ ತರಲಾಗುತ್ತಿದೆ.

ಮಾರ್ಚ್ 31ರಂದು ಕನಕಪುರದ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಹಾಗೂ ತಂಡ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಆದರೆ, ಮರುದಿನ ಅಂದರೆ ಏಪ್ರಿಲ್ 1 ರಂದು ಕ್ಯಾಂಟರ್‌ನಲ್ಲಿದ್ದ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದ್ರೀಷ್ ಪಾಷಾ ಅವರ ಮೃತದೇಹ ಸಾತನೂರು ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದರು.
ಈ ಹಿನ್ನೆಲೆ ಮೃತನ ಸಹೋದರ ಯೂನುಸ್ ಪಾಷಾ ಸಾತನೂರು ಪೊಲೀಸ್ ಠಾಣೆಗೆ ಪುನೀತ್ ಕೆರೆಹಳ್ಳಿ ಸೇರಿ ಇತರರರ ವಿರುದ್ಧ ದೂರು ಸಲ್ಲಿಸಿದ್ದರು. ಮೃತನ ಸಹೋದರನ ದೂರಿನಂತೆ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಮತ್ತು ಅವರ ತಂಡ ತಲೆಮರೆಸಿಕೊಂಡಿತ್ತು. ಈಗ ಪುನೀತ್ ಕೆರೆಹಳ್ಳಿ ಮತ್ತು ಟೀಂ ಅನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದು, ರಾಜಸ್ಥಾನದಿಂದ ಅವರನ್ನು ಕರೆದುಕೊಂಡು ಬರುತ್ತಿದ್ದಾರೆ.
ಆರೋಪಿಗಳನ್ನು ಬಂಧಿಸಲು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರು ನಾಲ್ಕು ತಂಡಗಳನ್ನು ರಚಿಸಿದ್ದರು. ಈ ಬಗ್ಗೆ ಮಂಗಳವಾರ ಮಾತನಾಡಿದ್ದ ಎಸ್‌ಪಿ ಕಾರ್ತಿಕ್ ರೆಡ್ಡಿ, ಇದ್ರೀಷ್ ಪಾಷ ಸಾವಿಗೆ ನಿಖರ ಕಾರಣ ಏನೆಂಬುದು ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ. ಕನಕಪುರ ವೈದ್ಯರ ತಂಡವು ಇದ್ರೀಷ್ ಪಾಷಾ ಅವರ ಮರಣೋತ್ತರ ಪರೀಕ್ಷೆ ನಡೆಸಿದೆ. ಅವರಿಂದ ಎಫ್‌ಎಸ್‌ಎಲ್ ವರದಿ ಪಡೆಯಲಾಗುತ್ತದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದರು.
ನಿಗೂಢ ಸ್ಥಳದಿಂದ ವಿಡಿಯೋ!
ಪ್ರಕರಣದ ಬೆನ್ನಲ್ಲಿಯೇ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ನಿಗೂಢ ಸ್ಥಳದಿಂದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದರು. ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸುತ್ತೇನೆ. ಪ್ರಕರಣದ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಪುನೀತ್ ಕೆರೆಹಳ್ಳಿ ತನ್ನ ವಿಡಿಯೋದಲ್ಲಿ ಹೇಳಿದ್ದರು.
ನಾನೂ ಎಲ್ಲೂ ಕಾನೂನನ್ನು ಮೀರಿಲ್ಲ, ಯಾರಿಗೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ದುಡ್ಡು ಮಾಡಲು ನಾನು ಈ ಹೋರಾಟಕ್ಕೆ ಬಂದಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಯಾರೇ ನನ್ನ ವಿರುದ್ಧ ನಿಂತರೂ ಹೋರಾಟ ಬಿಡುವುದಿಲ್ಲ ಎಂದಿದ್ದ ಪುನೀತ್ ಕೆರೆಹಳ್ಳಿ, ಮಂಡ್ಯದಿಂದ ಹಲಗೂರು, ಸಾತನೂರು ಮಾರ್ಗವಾಗಿ ನಿರಂತರವಾಗಿ ಜಾನುವಾರು ಸಾಗಣೆಯಾಗುತ್ತಿದ್ದು, ಇದಕ್ಕೆ ರಾಜಕಾರಣಿಗಳ ಕೃಪಾಕಟಾಕ್ಷವಿದೆ ಎಂದು ಆರೋಪಿಸಿದ್ದರು.
ಜಾನುವಾರು ಸಾಗಾಟದ ತಂಡಕ್ಕೆ ಹಲ್ಲೆ, ವ್ಯಕ್ತಿ ಸಾವು ; ಗೋರಕ್ಷಣೆ ನೆಪದಲ್ಲಿ ಪುನೀತ್ ಕೆರೆಹಳ್ಳಿ ಕೃತ್ಯ, ಬಂಧನ
Ramanagara police arrested cow vigilante Puneeth Kerehalli, who was on the run after allegedly killing Idrees Pasha during an alleged cow rescue operation on April 1. Police arrested Puneeth Kerehalli in Rajasthan on April 5. The murder had led to criticism of the BJP government in Karnataka even as the ruling party prepares for the Assembly elections on May 10.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
03-02-26 11:31 am
Mangalore Correspondent
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm