ಬ್ರೇಕಿಂಗ್ ನ್ಯೂಸ್
18-11-22 07:29 pm Mangalore Correspondent ಕ್ರೈಂ
ಮಂಗಳೂರು, ನ.18: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಿಂದ ಕರ್ನಾಟಕದ ಕರಾವಳಿಗೆ ಭಾರೀ ಪ್ರಮಾಣದ ಗಾಂಜಾ ಪೂರೈಸಲು ತರುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಮಹೀಂದ್ರ ಎಕ್ಸ್ ಯುವಿ ಕಾರಿನಲ್ಲಿ ತರಲಾಗುತ್ತಿದ್ದ 132 ಕೇಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಕೇರಳ ಗಡಿಭಾಗದ ತೌಡುಗೋಳಿ ಕ್ರಾಸ್ ನರಿಂಗಾನ ನಿವಾಸಿ ರಮೀಝ್ ರಾಝ್ (30) ಮತ್ತು ಮಂಜೇಶ್ವರ ಮೀಯಪದವು ಬಳಿಯ ಮದಂಗಲ್ಲು ಕಟ್ಟೆ ನಿವಾಸಿ ಅಬ್ದುಲ್ ಖಾದರ್ ಹ್ಯಾರಿಸ್(31) ಬಂಧಿತರು. ಇವರು ಕಾರಿನಲ್ಲಿ ಕೋಣಾಜೆ ಬಳಿಯ ಮುಡಿಪು ಕುರ್ನಾಡು ಬಳಿಯ ಕಾಯರ್ ಗೋಳಿ ಎಂಬಲ್ಲಿ ಕಾರಿನಲ್ಲಿ ಬರುತ್ತಿದ್ದಾಗ ಮಂಗಳೂರಿನ ಸಿಸಿಬಿ ಪೊಲೀಸರು ಅಡ್ಡಗಟ್ಟಿ ವಶಕ್ಕೆ ಪಡೆದಿದ್ದಾರೆ.
ಕಾರಿನ ಹಿಂಬದಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ 132 ಕೇಜಿ ಗಾಂಜಾವನ್ನು ಇಡಲಾಗಿತ್ತು. ಮಹೀಂದ್ರಾ ಕಾರು, ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್, ಮೂರು ತಲವಾರುಗಳನ್ನು ವಶಕ್ಕೆ ಪಡೆಯಲಾಗಿದ್ದು ಒಟ್ಟು ಸೊತ್ತಿನ ಮೌಲ್ಯ 39.15 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಗಾಂಜಾವನ್ನು ಬೆಂಗಳೂರು ಮೂಲಕ ಮಂಗಳೂರಿಗೆ ತರುತ್ತಿದ್ದರು. ಕರಾವಳಿಯ ಮಂಗಳೂರು, ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ಕಡೆಗಳಿಗೆ ಪೂರೈಸಲು ಗಾಂಜಾ ತರುತ್ತಿದ್ದರು ಅನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗಾಂಜಾ ಸಾಗಾಟದ ವೇಳೆ ಪೊಲೀಸರು ಅಥವಾ ಸಾರ್ವಜನಿಕರು ಅಡ್ಡಗಟ್ಟಿದಲ್ಲಿ ದಾಳಿ ನಡೆಸುವ ಉದ್ದೇಶದಿಂದ ತಲವಾರು ಇಟ್ಟುಕೊಂಡಿದ್ದರು.
ಆರೋಪಿ ರಮೀಜ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಾಗಾಟ, ಹಲ್ಲೆ ಸೇರಿದಂತೆ ಮೂರು ಪ್ರಕರಣ ದಾಖಲಾಗಿದೆ. ಉಳ್ಳಾಲದಲ್ಲಿ ಗಾಂಜಾ, ಕೊಲೆಯತ್ನ ಪ್ರಕರಣ ದಾಖಲಾಗಿದೆ. ಅಬ್ದುಲ್ ಹ್ಯಾರಿಸ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣ ಹಾಗೂ ಮಂಜೇಶ್ವರ ಠಾಣೆಯಲ್ಲಿ ಎರಡು ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳನ್ನು ಕಮಿಷನರ್ ಕಚೇರಿ ಮುಂದೆ ಮಾಧ್ಯಮಗಳ ಮುಂದೆ ಹಾಜರುಪಡಿಸಿ, ಭಾರೀ ಸಮಯದ ಬಳಿಕ ದೊಡ್ಡ ಪ್ರಮಾಣದ ಗಾಂಜಾ ಪ್ರಕರಣವನ್ನು ಭೇದಿಸಿದ್ದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
Central Crime Branch personnel claimed to have intercepted a major consignment of ganja worth about ₹39 lakh which was being brought from Visakhapatnam in Andhra Pradesh to Mangaluru for onward shipment to Kerala, Bengaluru and other places.Besides seizing 132 kg of cannabis, lethal weapons and the sports utility vehicle using to transport the contraband, police arrested two persons.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 10:54 pm
Mangalore Correspondent
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm