ಬ್ರೇಕಿಂಗ್ ನ್ಯೂಸ್
13-11-22 08:58 pm HK News Desk ಕ್ರೈಂ
ಒಡಿಶಾ, ನ.13: ಹನಿಟ್ರ್ಯಾಪ್ ಮೂಲಕ ಉದ್ಯಮಿಗಳನ್ನು ವಂಚಿಸುತ್ತಿದ್ದ ಕರ್ನಾಟಕ ಮೂಲದ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ.
ರಾಜಸ್ಥಾನದ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಹಣ ಲೂಟಿ ಮಾಡಿದ್ದ ಪ್ರಕರಣದ ತನಿಖೆಯಲ್ಲಿ ಹನಿಟ್ರ್ಯಾಪ್ ವಿಷಯ ಬಹಿರಂಗವಾಗಿದೆ. ಈಕೆಯ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ.
ಪ್ರೀತಿ ದೇಸಾಯಿ(42) ಬಂಧಿತ ಆರೋಪಿ. ಎಂಜಿನಿಯರ್ ಎಂದು ಹೇಳಿಕೊಂಡು ಒಡಿಶಾದ ಭುವನೇಶ್ವರದಲ್ಲಿ ನೆಲೆಸಿದ್ದ ಈಕೆ ಕರ್ನಾಟಕ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಉದ್ಯಮಿಗಳನ್ನು ವಂಚಿಸಿದ ಆರೋಪ ಕೇಳಿಬಂದಿದೆ. ಈಕೆಯ ಬಲೆಗೆ ಬಿದ್ದ ಉದ್ಯಮಿಗಳು ಮೋಸ ಹೋಗಿದ್ದು ತನಿಖೆಯಲ್ಲಿ ಬಯಲಾಗಿದೆ.

ಸೋಷಿಯಲ್ ಮೀಡಿಯಾ ಮೂಲಕ ವಂಚನೆ:
ಹನಿಟ್ರ್ಯಾಪರ್ ಪ್ರೀತಿ ದೇಸಾಯಿ ಸಾಮಾಜಿಕ ಮಾಧ್ಯಮಗಳ ಮೂಲಕ ದೊಡ್ಡ ಕುಳಗಳನ್ನು ಪರಿಚಯ ಮಾಡಿಕೊಂಡು ಬಳಿಕ ಅವರನ್ನು ಪ್ರೀತಿಯ ಬಲೆಗೆ ಬೀಳಿಸುತ್ತಿದ್ದರು. ಸ್ನೇಹ ಬೆಳೆಸಿದವರ ಜೊತೆ ಸಲುಗೆಯಿಂದ ಇರುತ್ತಿದ್ದ ಈಕೆ ಆತ್ಮೀಯ ಕ್ಷಣಗಳ ಚಿತ್ರಗಳನ್ನು ಕ್ಲಿಕ್ಕಿಸಿ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು.

ರಾಜಸ್ಥಾನಿಗನ ವಿವಾಹವಾಗಿ ಯಾಮಾರಿಸಿದ ಪ್ರೀತಿ;
ರಾಜಸ್ಥಾನದ ಉದ್ಯಮಿಯೊಬ್ಬನನ್ನು ಈಚೆಗೆ ವಿವಾಹವಾಗಿದ್ದ ಪ್ರೀತಿ ದೇಸಾಯಿ, ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಲಕ್ಷಾಂತರ ರೂಪಾಯಿ ಹಣವನ್ನು ಆತನಿಂದ ಪೀಕಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ. ಈ ಬಗ್ಗೆ ಮೋಸ ಹೋದ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿತ್ತು.

ವಂಚಕಿ ಪ್ರೀತಿ ಬೆನ್ನುಬಿದ್ದ ಪೊಲೀಸರು, ಆಕೆಯನ್ನು ಒಡಿಶಾದ ಭುವನೇಶ್ವರದಲ್ಲಿ ಇರುವುದು ಪತ್ತೆ ಮಾಡಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಈಕೆಯನ್ನು ಬಂಧನಕ್ಕೆ ರಾಜಸ್ಥಾನ ಪೊಲೀಸರು, ಸ್ಥಳೀಯ ಸಿಬ್ಬಂದಿ ನೆರವಿನ ಜೊತೆ ದಾಳಿ ಮಾಡಿ ಬಂಧಿಸಿದ್ದಾರೆ. ಈಕೆಯಿಂದ ಒಂದು ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.
ಒಡಿಶಾದಲ್ಲೂ ಮೋಸಗಾತಿಯ ಆಟ:
ರಾಜಸ್ಥಾನದಲ್ಲಿ ಉದ್ಯಮಿಯನ್ನು ವಿವಾಹವಾದ ನಾಟಕವಾಡಿ ಹಣ ಪೀಕಿ ಪರಾರಿಯಾಗಿದ್ದ ವಂಚಕಿ, ಒಡಿಶಾದಲ್ಲೂ ತನ್ನ ಜಾಲ ಬೀಸಿದ್ದಾಳೆ. ಭುವನೇಶ್ವರದಲ್ಲೂ ಐವರಿಗೆ ಮಕ್ಮಲ್ ಟೋಪಿ ಹಾಕಿ ಹಣ ಪೀಕಿದ ಆರೋಪವಿದೆ. ತಾನಿದ್ದ ಅಪಾರ್ಟ್ಮೆಂಟ್ ಕೂಡ ಮೋಸದಿಂದಲೇ ಪಡೆದಿದ್ದು ಎಂದು ದೂರಿನಲ್ಲಿದೆ.
ಕರ್ನಾಟಕದಲ್ಲೂ ಉದ್ಯಮಿಗಳ ಟ್ರ್ಯಾಪ್ :
ಕರ್ನಾಟಕದಲ್ಲಿ ಈ ಮೊದಲು ಜವಳಿ ವ್ಯಾಪಾರಿಯನ್ನು ಯಾಮಾರಿಸಿ ಹಣ ಲೂಟಿ ಮಾಡಿ ರಾಜಸ್ಥಾನಕ್ಕೆ ಪಲಾಯನ ಮಾಡಿದ್ದಳು. ಈ ಬಗ್ಗೆ ರಾಜ್ಯದಲ್ಲೂ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಯ ಜಾಲ ಬೀಸಿ ಉದ್ಯಮಿಗಳನ್ನು ಪ್ರೀತಿಯ ಖೆಡ್ಡಾಕ್ಕೆ ಕೆಡವುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Amid looming controversy over a ‘sextortion racket’ run by Archana Nag, another woman blackmailer was arrested by the Rajasthan Police in Odisha capital on Saturday for allegedly tricking businessmen into marriage and looting money from them.The fraudster has been identified as Preeti Desai (42) of Karnataka. She was residing in Bhubaneswar by introducing herself as an IT professional.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am