ಬ್ರೇಕಿಂಗ್ ನ್ಯೂಸ್
15-10-22 02:14 pm HK News Desk ಕ್ರೈಂ
ಭುವನೇಶ್ವರ್, ಅ.15: ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ 26 ವರ್ಷದ ಯುವತಿಯೊಬ್ಬಳು ಹನಿಟ್ರ್ಯಾಪ್ ದಂಧೆಯನ್ನೇ ಕಸುಬಾಗಿಸ್ಕೊಂಡು ರಾಜಕಾರಣಿಗಳು, ಉದ್ಯಮಿಗಳು, ಚಿತ್ರ ನಿರ್ಮಾಪಕರನ್ನು ಬಲೆಗೆ ಕೆಡವಿ ಕೇವಲ ನಾಲ್ಕು ವರ್ಷಗಳಲ್ಲಿ 30 ಕೋಟಿ ರೂ. ಮಿಕ್ಕಿದ ಆಸ್ತಿ ಸಂಪಾದಿಸಿದ ಪ್ರಕರಣ ಒಡಿಶಾದಲ್ಲಿ ಬೆಳಕಿಗೆ ಬಂದಿದೆ.
ಆಕೆಯ ಹೆಸರು ಅರ್ಚನಾ ನಾಗ್. ನೋಡಲು ಸುರ ಸುಂದರಾಂಗಿ. ತನ್ನ ಸೌಂದರ್ಯವನ್ನೇ ಗುರಾಣಿ ಮಾಡ್ಕೊಂಡು ಆಕೆ ಒಡಿಶಾದ ಪ್ರಮುಖ ರಾಜಕಾರಣಿಗಳನ್ನೇ ಬುಟ್ಟಿಗೆ ಹಾಕ್ಕೊಂಡಿದ್ದಾಳೆ. ವಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಕಾರ, ಆಕೆಯ ಹನಿಟ್ರ್ಯಾಪ್ ದಂಧೆಗೆ ಒಳಗಾದವರಲ್ಲಿ 25ರಷ್ಟು ರಾಜಕಾರಣಿಗಳಿದ್ದಾರಂತೆ. ಅದರಲ್ಲಿ 18 ಮಂದಿ ಆಡಳಿತಾರೂಢ ಬಿಜೆಡಿ ಸರಕಾರದಲ್ಲಿ ಸಚಿವರು ಹಾಗೂ ಶಾಸಕರಾಗಿದ್ದಾರೆ. ಹೀಗಾಗಿ ಅರ್ಚನಾ ಬಾಯಿಬಿಟ್ಟರೆ ಒಡಿಶಾದಲ್ಲಿ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಡಿ ಸರ್ಕಾರ ಪತನಗೊಳ್ಳಲಿದೆ ಎಂದು ವಿಪಕ್ಷ ನಾಯಕರು ಬಾಂಬ್ ಸಿಡಿಸಿದ್ದಾರೆ.
ದಂಧೆ ಹಣದಿಂದಲೇ ಬಂಗಲೆ, ಕಾರು, ಐಷಾರಾಮಿ ಜೀವನ !
ಹನಿಟ್ರ್ಯಾಪ್‌ನಿಂದ ಗಳಿಸಿದ ಕೋಟ್ಯಂತರ ಹಣದಿಂದಲೇ ಭವ್ಯ ಬಂಗಲೆ, ವಿದೇಶಿ ಅಲಂಕಾರಿಕ ವಸ್ತುಗಳು, ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾಳೆ. ಇದಲ್ಲದೆ, 4 ದುಬಾರಿ ನಾಯಿಗಳು ಹಾಗೂ ಒಂದು ಕುದುರೆಯನ್ನೂ ಆಕೆ ಹೊಂದಿದ್ದಾಳೆ. ಇಷ್ಟೆಲ್ಲಾ ಅಕ್ರಮ ಎಸಗಿದ್ದರೂ ಆಕೆಯನ್ನು ಅಲ್ಲಾಡಿಸುವುದಕ್ಕೂ ಆಗಿಲ್ಲ. ಅತಿ ಸಣ್ಣ ಪ್ರಾಯದಲ್ಲಿ ಈಕೆ ಇಷ್ಟೊಂದು ಆಸ್ತಿ ಸಂಪಾದಿಸಿದ್ದು ಪೊಲೀಸರನ್ನೇ ಹುಬ್ಬೇರಿಸಿದೆ. ಇತ್ತೀಚೆಗೆ ದಾಖಲಾದ ಎರಡು ಪ್ರತ್ಯೇಕ ದೂರುಗಳನ್ನು ಆಧರಿಸಿ ಅರ್ಚನಾಳನ್ನು ಪೊಲೀಸರು ಬಂಧಿಸಿದ್ದಾರೆ.
ಆಕೆ ಅತ್ಯಂತ ಹಿಂದುಳಿದ ಪ್ರದೇಶದವಳು !
ಅರ್ಚನಾ, ಒಡಿಶಾದಲ್ಲಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ಕರೆಸಿಕೊಂಡ ಕಲಹಂಡಿ ಜಿಲ್ಲೆಯ ಲಾಜಿಗಢ ಎಂಬ ಊರಿನವಳು. 2015ರಲ್ಲಿ ಭುವನೇಶ್ವರ ನಗರಕ್ಕೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಬಳಿಕ ಬ್ಯೂಟಿ ಪಾರ್ಲರ್ ಒಂದರಲ್ಲಿ ಸೇರಿದ್ದ ಆಕೆಗೆ ಸೆಕ್ಸ್ ದಂಧೆಯ ಪರಿಚಯ ಆಗಿತ್ತು. ಅಲ್ಲಿರುವಾಗಲೇ ಆಕೆಗೆ ಜಗಬಂಧು ಚಂದ್ ಎಂಬಾತನ ಪರಿಚಯವಾಗಿದ್ದು 2018ರಲ್ಲಿ ಆತನನ್ನೇ ಮದುವೆಯಾಗಿದ್ದಳು. ಜಗಬಂಧು ಒಡಿಶಾದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಶೋರೂಂ ನಡೆಸುತ್ತಿದ್ದ. ಅರ್ಚನಾ ಆನಂತರ ಕಾರು ಶೋರೂಮ್ ನಲ್ಲಿಯೇ ಇದ್ದುದರಿಂದ ಪ್ರಭಾವಿ ವ್ಯಕ್ತಿಗಳ ಸ್ನೇಹ ಬೆಳೆಸಿಕೊಂಡಿದ್ದಳು. ಅವರೊಂದಿಗೆ ಸಲುಗೆ ಬೆಳೆಸಿ, ಸಂಗಾತಿ ಬೇಕೆನಿಸಿದಾಗ ತನ್ನ ಒಡನಾಟದ ಹುಡುಗಿಯರನ್ನು ಕಳಿಸಿಕೊಡುತ್ತಿದ್ದಳು. ಇದೇ ಸಂದರ್ಭದಲ್ಲಿ ಖಾಸಗಿ ಕ್ಷಣಗಳ ವಿಡಿಯೋ ಸೆರೆ ಹಿಡಿದು ಪ್ರಭಾವಿ ವ್ಯಕ್ತಿಗಳನ್ನು ಸುಲಿಗೆ ಮಾಡುತ್ತಿದ್ದಳು. ಮೊದಲ ಬಾರಿಗೆ ಪ್ರಾಧ್ಯಾಪಕ ವ್ಯಕ್ತಿಯನ್ನು ಬೋಳಿಸ್ಕೊಂಡು 21 ಲಕ್ಷ ರೂ. ಪೀಕಿಸಿದ್ದಳು.
ಇತ್ತೀಚೆಗೆ ಒಡಿಶಾ ಚಿತ್ರರಂಗದ ಚಿತ್ರ ನಿರ್ಮಾಪಕರೊಬ್ಬರು ತನ್ನನ್ನು ಯುವತಿಯರ ಜೊತೆಗಿದ್ದ ಫೋಟೋ ತೋರಿಸಿ 3 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ಅರ್ಚನಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇನ್ನೊಬ್ಬ ಯುವತಿಯೂ ತನ್ನನ್ನು ಸೆಕ್ಸ್ ದಂಧೆಗೆ ಬಳಸಿಕೊಂಡಿದ್ದಾಗಿ ದೂರು ಹೇಳಿಕೊಂಡಿದ್ದಳು. ಪ್ರಕರಣ ದಾಖಲಿಸಿದ ಪೊಲೀಸರು ಅರ್ಚನಾಳನ್ನು ಬಂಧಿಸಿದ್ದಾರೆ.
A woman from Odisha’s Kalahandi district was arrested on October 6 and charged with extortion. Archana Nag (26) allegedly extorted money from rich and influential people in the state, including politicians, businessmen and film producers, by threatening them that she would release photos and videos of their intimate moments.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 08:13 pm
Mangalore Correspondent
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm