ಬ್ರೇಕಿಂಗ್ ನ್ಯೂಸ್
16-09-22 03:27 pm HK News Desk ಕ್ರೈಂ
ಕಲಬುರಗಿ,ಸೆ.16: ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಭ್ರೂಣಲಿಂಗ ಪತ್ತೆಗೆ ನಿಷೇಧ ಹೇರಿದೆ. ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡ ಅಕ್ರಮಕೋರರು ಮಹಾರಾಷ್ಟ್ರದ ಗರ್ಭಿಣಿಯರನ್ನು ಕರ್ನಾಟಕಕ್ಕೆ ಕರೆಸಿ ಭ್ರೂಣಲಿಂಗ ಪತ್ತೆ ಮಾಡುವ ಅಕ್ರಮ ದಂದೆಯಲ್ಲಿ ತೊಡಗಿದ್ದಾರೆ. ಇದೀಗ ಮಹಾರಾಷ್ಟ್ರ ಮತ್ತು ಕರ್ನಾಟಕ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಿನಿಮೀಯ ರೀತಿಯ ಕಾರ್ಯಚರಣೆ ನಡೆಸಿ ಅಕ್ರಮ ದಂಧೆ ಬಯಲಿಗೆಳೆದಿದ್ದಾರೆ.
ಮಹಾರಾಷ್ಟ್ರ ಗಡಿಭಾಗವಾಗಿರುವ ಕಲಬುರಗಿಯ ಸಂತ್ತಸವಾಡಿಯ ಮನೆಯೊಂದರಲ್ಲಿ ಇಂತಹದೊಂದು ಅಕ್ರಮ ದಂಧೆ ನಡೆದಿರುವದನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಆಯುಷ್ಯ ವೈದ್ಯ ಡಾ. ಗುರುರಾಜ ಕುಲ್ಕರ್ಣಿ ಎಂಬಾತ ಅಕ್ರಮವಾಗಿ ಭ್ರೂಣ ಲಿಂಗಪತ್ತೆ ಮಾಡುತ್ತಿದ್ದನೆಂದು ಹೇಳಲಾಗಿದೆ. ಏಜೆಂಟ್‌ಗಳ ಮುಖಾಂತರ ಮಹಾರಾಷ್ಟ್ರ ಮೂಲದ ಗರ್ಭಿಣಿಯರನ್ನು ಕಲಬುರಗಿಗೆ ಕರೆಸಿ ಸ್ಕ್ಯಾನಿಂಗ್ ಮಾಡಿ ಮಗುವಿನ ಲಿಂಗ ಹೇಳಿ ಹಣ ಪಡೆಯುತ್ತಿದ್ದ. ಆಳಂದ ತಾಲೂಕಿನ ಸುರೇಶ್ ತಡೋಳ ಎಂಬಾತ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ, ಸ್ಕ್ಯಾನಿಂಗ್ ಮಾಡಿದ ಬಳಿಕ ಗರ್ಭದಲ್ಲಿ ಗಂಡು-ಹೆಣ್ಣು ಮಗು ಇರೋದನ್ನು ತಿಳಿದುಕೊಂಡು ಹೆಣ್ಣುಮಗು ಇದ್ರೆ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯರು ಮುಂದಾಗುತ್ತಿದ್ದರು ಎಂದು ಆರೋಪಿಸಲಾಗಿದೆ.
ಕಲಬುರಗಿಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಬಗ್ಗೆ ಮಾಹಿತಿ ಅರಿತ ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರೌರುತ್ತರಾಗಿ ಕಲಬುರಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎರಡು ರಾಜ್ಯದ ಅಧಿಕಾರಿಗಳು ಜಂಟಿಯಾಗಿ ಸಿನಿಮಿಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮಹಾರಾಷ್ಟ್ರದ ಗರ್ಭಿಣಿ ಮಹಿಳೆಯೊಬ್ಬರ ಮುಖಾಂತರ ಮಧ್ಯವರ್ತಿ ಸುರೇಶ್ ತಡೋಳನನ್ನು ಸಂಪರ್ಕ ಮಾಡಿದ್ದಾರೆ. ಪ್ಲ್ಯಾನ್ ಪ್ರಕಾರ ಮಹಿಳೆಯನ್ನು ಮುಂದೆಬಿಟ್ಟು ಪೊಲೀಸ್ ಸಿಬ್ಬಂದಿ ಜೊತೆಗೆ ಅಧಿಕಾರಿಗಳು ಹಿಂಬಾಲಿಸಿದ್ದರು. ಬೆಳಗ್ಗೆ 10 ಗಂಟೆಗೆ ಕಲಬುರಗಿಯ ಎಸ್ ಟಿ ಬಿಟಿ ಬಳಿ ಬರುವಂತೆ ಮಧ್ಯವರ್ತಿ ಹೇಳಿದ್ದಾನೆ. ಅಲ್ಲಿಗೆ ಮಹಿಳೆ ಬಂದಾಗ ಡಾ.ಗುರುರಾಜ ಕುಲ್ಕರ್ಣಿ ತಾನು ಹೊರಗೆ ಬಂದಿದ್ದು, ಮಧ್ಯಾಹ್ನ 2 ಗಂಟೆಗೆ ಬನ್ನಿ ಅಂತ ಹೇಳಿದ್ದಾನೆ. 2 ಗಂಟೆವರೆಗೆ ಕಾಯ್ದ ಅಧಿಕಾರಿಗಳು, ಮಧ್ಯಾಹ್ನ ವೈದ್ಯ ಆಗಮಿಸಿ ಸ್ಕ್ಯಾನಿಂಗ್ ಗೆ ಒಳಗಾಗಿದ್ದಾಗ ಅಧಿಕಾರಿಗಳು ದಾಳಿ ಮಾಡಿದ್ದು, ತಾನು ಅಕ್ರಮ ಎಸಗಿರುವದನ್ನು ಡಾ. ಗುರುರಾಜ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಇನ್ನು ದಾಳಿ ವೇಳೆ ಟೆಸ್ಟ್ ಒಂದು ಮೊಬೈಲ್ ಸ್ಕ್ಯಾನಿಂಗ್ ಮಷಿನ್ ಸೇರಿ ಭ್ರೂಣ ಪತ್ತೆಗೆ ಬಳಸುವ ಸಾಧನಗಳು ದೊರತ್ತಿವೆ. 2014 ರಲ್ಲಿ ಮೊಬೈಲ್ ಸ್ಕ್ಯಾನಿಂಗ್ ಮಷಿನ್ ಲೈಸೆನ್ಸ್ ಪಡೆದು ಪೇಷಂಟ್ ಬಳಿ ಹೋಗಿ ಟೆಸ್ಟ್ ಮಾಡುತ್ತಿದ್ದ. ಸದ್ಯ ಇದು ಬ್ಯಾನ್ ಆಗಿದೆ. ಹೀಗಾಗಿ ಮಧ್ಯವರ್ತಿ ಸುರೇಶ್ ಜೊತೆ ಸೇರಿ ಅಕ್ರಮ ದಂಧೆಯಲ್ಲಿ ತೊಡಗಿದ್ದ. ಒಂದು ಟೆಸ್ಟ್ ಗೆ 5 ರಿಂದ 10 ಸಾವಿರ ರೂ. ಹಣ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯದ ಮಟ್ಟಿಗೆ, ಆರೋಗ್ಯ ಅಧಿಕಾರಿಗಳು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಪಂಚನಾಮೆ ನಡೆಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿ ನಂತರ ನ್ಯಾಯಧೀಶರು ಸಂಬಂಧಿತ ಬ್ರಹ್ಮಪುರ ಠಾಣೆಗೆ ಪ್ರಕರಣ ವರ್ಗಾಯಿಸಿ ಹೆಚ್ಚಿನ ತನಿಖೆಗೆ ಸೂಚಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಜಶೇಖರ ಮಾಲಿ ತಿಳಿಸಿದ್ದಾರೆ.
The state Health Department busted an illegal sex determination centre in Kalaburgi. The doctor has been arrested and has been identified as Dr Gururaj Kulkurni.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm