ಬ್ರೇಕಿಂಗ್ ನ್ಯೂಸ್
15-09-22 12:08 pm HK Desk ಕ್ರೈಂ
ಲಕ್ನೋ, ಸೆ.15: ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರನ್ನು ಅತ್ಯಾಚಾರಗೈದು ಕತ್ತು ಹಿಸುಕಿ ಕೊಲೆಗೈದಿದ್ದಲ್ಲದೆ, ಶವಗಳನ್ನು ಮರಕ್ಕೆ ನೇತು ಹಾಕಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆ ಮತ್ತೆ ದೇಶದ ಗಮನ ಸೆಳೆದಿದೆ.
ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳೀಯರು ಮತ್ತು ಸಂತ್ರಸ್ತರ ಸಂಬಂಧಿಕರು ಶವ ಮುಂದಿಟ್ಟು ರಸ್ತೆ ತಡೆದು ತನಿಖೆಗೆ ಒತ್ತಾಯಿಸಿದ್ದಾರೆ. 17 ಮತ್ತು 15 ವರ್ಷದ ಇಬ್ಬರು ದಲಿತ ಸಹೋದರಿಯರ ಶವ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯರ ಕತ್ತು ಹಿಸುಕಿ ನಾಲ್ವರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಸುಹೇಲ್, ಜುನೈದ್, ಹಫೀಜುಲ್ ರೆಹಮಾನ್, ಕರಿಮುದ್ದೀನ್ ಮತ್ತು ಆರಿಫ್ ಎಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿಗಳಿಗೆ ಬಾಲಕಿಯರನ್ನು ಪರಿಚಯಿಸಿದ ಆರನೇ ವ್ಯಕ್ತಿ ಚೋಟು ಎಂಬಾತನನ್ನೂ ಬಂಧಿಸಲಾಗಿದೆ.
ಬಾಲಕಿಯರನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಸುಹೇಲ್, ಜುನೈದ್ ಮತ್ತು ಹಫೀಜುಲ್ ರೆಹಮಾನ್ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ಬಾಲಕಿಯರು ತಮ್ಮನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದಾರೆ. ಅದಕ್ಕೊಪ್ಪದೆ, ಕತ್ತು ಹಿಸುಕಿ ಸಾಯಿಸಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಬಂಧಿತರು ಬಾಲಕಿಯರಿಗೆ ಪರಿಚಿತರೇ ಆಗಿದ್ದಾರೆ. ಆರೋಪಿಗಳ ಬೈಕ್ನಲ್ಲಿಯೇ ಬಾಲಕಿಯರು ತೆರಳಿದ್ದಾರೆ. ಆರೋಪಿಗಳಿಗೆ ಮದುವೆಯಾಗುವಂತೆ ಒತ್ತಾಯಿಸಿದಾಗ ಆರೋಪಿಗಳು ಕತ್ತುಹಿಸುಕಿ ಕೊಲೆಗೈದಿದ್ದಾರೆ.

ಅವರು ಧರಿಸಿದ್ದ ದುಪಟ್ಟಾದಿಂದಲೇ ಕತ್ತು ಹಿಸುಕಿ ಕೊಲ್ಲಲಾಗಿದೆ. ನಂತರ ಕರೀಮುದ್ದೀನ್ ಮತ್ತು ಆರೀಫ್ ಶವಗಳನ್ನು ಮುಚ್ಚಿಡಲು ಸಹಾಯ ಮಾಡಿದ್ದಾರೆ. ಬಳಿಕ ಆತ್ಮಹತ್ಯೆ ಎಂದು ತೋರಿಸಲು ಶವಗಳನ್ನು ಮರಕ್ಕೆ ನೇಣು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
In yet another nerve-racking incident from Uttar Pradesh’s Lakhimpur Kheri, two Dalit teenage sisters were found hanging from a tree in a sugarcane field in Lalpur Majra Tamoli Purva village under the Nighasan police station on Wednesday evening, police said. So far, four accused in the matter have been arrested and investigation is underway, added police.
11-06-26 01:53 pm
HK News Staffer
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 02:47 pm
HK News Staffer
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
11-06-26 11:43 am
HK News Staffer
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm