ಬ್ರೇಕಿಂಗ್ ನ್ಯೂಸ್
25-08-22 12:49 pm HK News Desk ಕ್ರೈಂ
ಬೆಳಗಾವಿ, ಆಗಸ್ಟ್ 25: ಕೆಪಿಟಿಸಿಎಲ್ ಕಿರಿಯ ಸಹಾಯಕ ಅಭಿಯಂತರ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಬೆಳಗಾವಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹುಕ್ಕೇರಿಯ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ಪರೀಕ್ಷೆ ಬರೆದ ಅಭ್ಯರ್ಥಿಗಳ ಇಬ್ಬರು ಸಂಬಂಧಿಕರನ್ನು ಬಂಧನ ಮಾಡಲಾಗಿದೆ. ಗದಗದಿಂದ ಬಂದಿದ್ದ ಪ್ರಶ್ನೆಪತ್ರಿಕೆಗೆ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಆದೇಶ ನಾಗನೂರಿ ಸ್ವತಃ ಉತ್ತರ ಬಿಡಿಸಿಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಈತ ಹುಕ್ಕೇರಿ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಬೈಲಹೊಂಗಲ ತಾಲೂಕಿನ ನಾವಲಗಟ್ಟಿಯ ಮಡಿವಾಳಪ್ಪ ತೋರಣಗಟ್ಟಿ ಮತ್ತು ಹೊಸಕೋಟಿ ಗ್ರಾಮದ ಶಂಕರ ಉಣಕಲ್ ಎಂಬಿಬ್ಬರನ್ನೂ ಬಂಧಿಸಲಾಗಿದೆ. KPTCL ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಬಂಧಿತ ಅತಿಥಿ ಉಪನ್ಯಾಸಕನ ಬಳಿಯಿಂದಲೇ ಅಭ್ಯರ್ಥಿಗಳ ಸಂಬಂಧಿಕರಾದ ಮಡಿವಾಳಪ್ಪ ತೋರಣಗಟ್ಟಿ ಮತ್ತು ಶಂಕರ ಉಣಕಲ್ ಬ್ಲೂಟೂಥ್ ಡಿವೈಸ್ ಪಡೆದಿದ್ದರು. ಆದ್ರೆ ಡಿವೈಸ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಬಂಧಿತರಿಂದ ಒಂದು ಕಾರು ಮತ್ತು ಉತ್ತರಗಳಿದ್ದ ಎರಡು ಡಿವೈಸ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಕಿಂಗ್ ಪಿನ್ ಸಂಜು ಭಂಡಾರಿ ಬಳಿಯಿಂದ ಡಿವೈಸ್ ಪಡೆದು ಅತಿಥಿ ಉಪನ್ಯಾಸಕನೇ ಪರೀಕ್ಷಾರ್ಥಿಗಳ ಸಂಬಂಧಿಕರಿಗೆ ನೀಡಿದ್ದ. ಆರು ಲಕ್ಷ ರೂಪಾಯಿಗೆ ಡೀಲ್ ಫೈನಲ್ ಮಾಡಿ ಬ್ಲ್ಯೂಟೂಥ್ ಡಿವೈಸ್ ಪಡೆದಿದ್ದರು ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು ತನಿಖೆ ಮುಂದುವರಿದಿದೆ.
The police on Tuesday took three persons into their custody in connection with the alleged malpractice during the recruitment examination held to fill up the posts of junior assistants in KPTCL.
11-06-26 01:53 pm
HK News Staffer
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 04:21 pm
HK News Staffer
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
11-06-26 11:43 am
HK News Staffer
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm