ಬ್ರೇಕಿಂಗ್ ನ್ಯೂಸ್
06-07-22 02:23 pm Mangalore Correspondent ಕ್ರೈಂ
ಮಂಗಳೂರು, ಜುಲೈ 6: ಮಂಗಳೂರು ವಿವಿಯ ಉಪ ಕುಲಪತಿ ಪಿ.ಎಸ್. ಯಡಪಡಿತ್ತಾಯ ಅವರ ಫೋಟೋವನ್ನು ಬಳಸ್ಕೊಂಡು ನಕಲಿ ವಾಟ್ಸಪ್ ಸೃಷ್ಟಿಸಿ, ವಿವಿ ವ್ಯಾಪ್ತಿಯ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರಿಗೆ ವಾಟ್ಸಪ್ ಮೆಸೇಜ್ ಮಾಡಿ ಅಮೆಝಾನ್ ಗಿಫ್ಟ್ ಕಾರ್ಡ್ ಪಡೆಯುವಂತೆ ಒತ್ತಡ ಹೇರಿದ ಪ್ರಸಂಗ ನಡೆದಿದ್ದು, ಈ ಬಗ್ಗೆ ಪಿ.ಎಸ್.ಎಡಪಡಿತ್ತಾಯ ಮಂಗಳೂರಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಕುಳಿತ ಸೈಬರ್ ಕಳ್ಳರು ಈ ರೀತಿಯ ಕೆಲಸ ಮಾಡಿದ್ದಾರೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎಡಪಡಿತ್ತಾಯ ಅವರಿಗೆ ಎರಡು ದಿನಗಳ ಹಿಂದೆ ಈ ರೀತಿಯ ಮೋಸ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. 153 ಸಂಖ್ಯೆಯಿಂದ ಕೊನೆಯಾಗುವ ಮೊಬೈಲ್ ನಂಬರಿನಿಂದ ವಾಟ್ಸಪ್ ಖಾತೆ ಸೃಷ್ಟಿಸಿದ್ದಲ್ಲದೆ, ಅದರಲ್ಲಿ ಎಡಪಡಿತ್ತಾಯ ಅವರ ಫೋಟೊವನ್ನು ಡಿಪಿ ಆಗಿ ತೋರಿಸಲಾಗಿತ್ತು. ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಇತರೇ ಪ್ರಾಧ್ಯಾಪಕರು ಮತ್ತು ಸಹೋದ್ಯೋಗಿಗಳಿಗೆ ಇದೇ ಸಂಖ್ಯೆಯಿಂದ ಮೆಸೇಜ್ ಹೋಗಿದ್ದು, ಅಮೆಝಾನ್ ಗಿಫ್ಟ್ ಕಾರ್ಡ್ ಪಡೆಯುವಂತೆ ಅದರಲ್ಲಿ ಸೂಚಿಸಲಾಗಿತ್ತು.
ಈ ರೀತಿಯ ಮೆಸೇಜ್ ಸ್ವೀಕರಿಸಿದ ಕಾಲೇಜೊಂದರ ಪ್ರಾಂಶುಪಾಲರು, ಅದರಲ್ಲಿ ಎಡಪಡಿತ್ತಾಯ ಅವರ ಫೋಟೋ ಇದ್ದರೂ ಏನೋ ಸಂಶಯ ಬಂದು ಅವರದೇ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಲರ್ಟ್ ಆದ ಎಡಪಡಿತ್ತಾಯರು ಆ ರೀತಿಯ ಯಾವುದೇ ನಂಬರ್ ತನ್ನಲ್ಲಿ ಇಲ್ಲವೆಂದು ಸಹೋದ್ಯೋಗಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಎಡಪಡಿತ್ತಾಯ ಹೆಸರಲ್ಲಿ ಹಲವರಿಗೆ ಇದೇ ರೀತಿಯ ಮೆಸೇಜ್ ಹೋಗಿರುವುದು ಕಂಡುಬಂದಿದೆ.
ವಿಶ್ವವಿದ್ಯಾನಿಲಯದ ವೆಬ್ ಸೈಟ್ ನಲ್ಲಿ ಎಡಪಡಿತ್ತಾಯ ಫೋಟೋ ಮತ್ತು ಅವರ ಸಹೋದ್ಯೋಗಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರ ಖಾಸಗಿ ನಂಬರ್ ಗಳನ್ನು ಪಡೆದು ಈ ರೀತಿ ಮೋಸಕ್ಕೆ ಯತ್ನಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ. ಈ ರೀತಿಯ ಮೋಸ ಬಹಳಷ್ಟು ನಗರಗಳಲ್ಲಿ ನಡೆಯುತ್ತದೆ ಎನ್ನುತ್ತಾರೆ ಸೈಬರ್ ಪೊಲೀಸರು. ಕಂಪನಿ ಮುಖ್ಯಸ್ಥರು, ಸಿಇಓ ರೀತಿಯ ಪ್ರಮುಖ ಹುದ್ದೆಗಳಲ್ಲಿರುವ ವ್ಯಕ್ತಿಗಳ ಫೋಟೋ ಬಳಸ್ಕೊಂಡು ಅವರ ಸ್ನೇಹಿತರು, ಸಹೋದ್ಯೋಗಿಗಳ ನಂಬರ್ ಪಡೆದು ವಂಚಿಸುವುದು, ಹಣ ಕೇಳುವುದು ಇತ್ಯಾದಿ ನಡೆಯುತ್ತವೆ. ಅದೇ ರೀತಿಯ ಮೋಸದಾಟವನ್ನು ಇಲ್ಲಿಯೂ ಬಳಸಲಾಗಿದೆ.
ಮೊದಲಿಗೆ ಗಿಫ್ಟ್ ಕಾರ್ಡ್ ಪಡೆಯಲು ಒತ್ತಡ ಹೇರುತ್ತಾರೆ. ಸಾಮಾನ್ಯವಾಗಿ ಹಣ ಇದ್ದವರು ಗಿಫ್ಟ್ ಕಾರ್ಡ್ ಪಡೆದಲ್ಲಿ ಆನಂತರ ಕಾರ್ಡ್ ಬಳಸಿ ಆನ್ಲೈನಲ್ಲಿ ಖರೀದಿಗೆ ಸೂಚಿಸುತ್ತಾರೆ. ಗಿಫ್ಟ್ ಕಾರ್ಡ್ ಅಥವಾ ಅದರ ಕೋಡ್ ನಂಬರನ್ನು ಅವರಿಗೆ ನೀಡಿದಲ್ಲಿ ಸೈಬರ್ ಕಳ್ಳರು ಅಲ್ಲಿಂದಲೇ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ಪಡೆಯುತ್ತಾರೆ. ಆನಂತರ ಓಟಿಪಿ ವಂಚಿಸಿ ಖಾತೆಯಿಂದ ಹಣ ಪೀಕಿಸಲು ಪ್ರಯತ್ನ ಪಡುತ್ತಾರೆ. ಸೈಬರ್ ಮೋಸಗಾರಿಕೆಯಲ್ಲಿ ಇದೂ ಒಂದು ಶೈಲಿಯಾಗಿದ್ದು, ಈ ಬಗ್ಗೆ ಜಾಗ್ರತೆ ಇರಬೇಕೆಂದು ಹೇಳುತ್ತಾರೆ, ಸೈಬರ್ ತಜ್ಞ ಅನಂತ ಪ್ರಭು.
Cyber scamsters created a fake WhatsApp profile with a picture of Mangalore University vice-chancellor P S Yadapadithaya, attempting to con his contacts, urging them to purchase Amazon gift cards. Yadapadithaya has filed a complaint with the cyber police. Fraudsters created WhatsApp profile using his picture, and was sending messages to principals and other colleagues.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm