ಬ್ರೇಕಿಂಗ್ ನ್ಯೂಸ್
12-04-22 10:45 pm Udupi Correspondent ಕರಾವಳಿ
ಉಡುಪಿ, ಎ.12: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರ ರಾಜ್ಯದಲ್ಲಿ ಸಂಚಲನ ಎಬ್ಬಿಸಿದೆ. ಸಚಿವ ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದು ವಾಟ್ಸಪ್ ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹರಿಯಬಿಟ್ಟು ಸಾವಿಗೆ ಶರಣಾಗಿದ್ದರಿಂದ ಆತ್ಮಹತ್ಯೆ ಪ್ರಕರಣ ಸಚಿವರ ಕೊರಳು ಸುತ್ತಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.
ಇದೇ ವೇಳೆ, ಮೃತನ ಸೋದರ ತಾನು ಉಡುಪಿಗೆ ಬರದೆ ಮೃತದೇಹವನ್ನು ಮುಟ್ಟುವಂತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಲಾಡ್ಜ್ ನಲ್ಲಿ ಹೆಣ ಕಾಯುವ ಸ್ಥಿತಿ ಎದುರಾಗಿದ್ದು ಬೆಂಗಳೂರಿನಲ್ಲಿರುವ ಸೋದರ ರಾತ್ರಿ ಹತ್ತು ಗಂಟೆ ವರೆಗೂ ಉಡುಪಿಗೆ ತಲುಪಿಲ್ಲ. ಇದೇ ಮಾತನ್ನು ಮೃತ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಅವರೂ ಬೆಳಗಾವಿಯಲ್ಲಿ ಹೇಳಿದ್ದಾರೆ.
ಮೃತದೇಹವನ್ನು ಲಾಡ್ಜ್ ನಿಂದ ಹೊರಕ್ಕೆ ಸಾಗಿಸಿ, ಪೋಸ್ಟ್ ಮಾರ್ಟಂ ನಡೆಸುವುದಕ್ಕೂ ಪೊಲೀಸರು ಕುಟುಂಬಸ್ಥರ ಅನುಮತಿ ಪಡೆಯಬೇಕಾಗಿದ್ದು ಅದಕ್ಕಾಗಿ ಕಾಯುತ್ತಿದ್ದಾರೆ. ಸ್ಥಳ ಮಹಜರು ನಡೆಸುವುದಕ್ಕೂ, ಅಲ್ಲಿ ಇತರೇ ಡೆತ್ ನೋಟ್ ಇದೆಯಾ ಎಂದು ಪರೀಕ್ಷೆ ನಡೆಸುವುದಕ್ಕೂ ಕುಟುಂಬಸ್ಥರು ಸ್ಥಳಕ್ಕೆ ಬರಬೇಕಾಗಿದೆ. ಬೆಳಗಾವಿಯಿಂದ ಪತ್ನಿ ಮತ್ತು ಬೆಂಗಳೂರಿನಲ್ಲಿರುವ ಮೃತನ ಸೋದರ ಉಡುಪಿಗೆ ಬಂದಿಲ್ಲ. ರಾತ್ರಿ ವೇಳೆಗೆ ಉಡುಪಿ ತಲುಪಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.
ಇದರ ನಡುವೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದು ಮೃತ ವ್ಯಕ್ತಿ ಯಾಕಾಗಿ ಸತ್ತಿದ್ದಾನೆ, ಹೇಗೆ ಸತ್ತಿದ್ದಾನೆಂದು ಗೊತ್ತಿಲ್ಲ. ಎಲ್ಲವನ್ನೂ ತನಿಖೆ ನಡೆಸಬೇಕಾಗಿದೆ. ತನಿಖೆಯ ಬಳಿಕವೇ ನಿಜ ವಿಚಾರ ತಿಳಿಯಲಿದೆ ಎಂದಿದ್ದಾರೆ. ಆದರೆ ಲಾಡ್ಜ್ ಸಿಬಂದಿ ಮತ್ತು ಇತರ ಪೊಲೀಸರ ಮಾಹಿತಿ ಪ್ರಕಾರ, ಸಂತೋಷ್ ಪಾಟೀಲ್ ಜ್ಯೂಸ್ ಜೊತೆಗೆ ವಿಷ ಬೆರೆಸಿ ಕುಡಿದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸಂತೋಷ್ ಪಾಟೀಲ್ ಜೊತೆಗೆ ಇತರ ಇಬ್ಬರು ಸ್ನೇಹಿತರು ಕೂಡ ಬಂದಿದ್ದು ಅಕ್ಕ ಪಕ್ಕದಲ್ಲಿ ಪ್ರತ್ಯೇಕ ರೂಮ್ ಮಾಡಿದ್ದರು. ಸೋಮವಾರ ಸಂಜೆ ಜ್ಯೂಸ್ ತಂದು ಕುಡಿದಿದ್ದಾರೆ. ಅದರ ಜೊತೆಗೆ ಪ್ರತ್ಯೇಕ ಬಾಟಲಿಯನ್ನು ಸಂತೋಷ್ ತೆಗೆದಿಟ್ಟಿದ್ದ ಎನ್ನಲಾಗಿದೆ.
ಸಂತೋಷ್ ಕೊಠಡಿಯೊಳಗೆ ಜ್ಯೂಸ್ ಬಾಟಲಿ ಮತ್ತು ವಿಷದ ಬಾಟಲಿಯೂ ಪತ್ತೆಯಾಗಿದೆ ಎನ್ನುವ ಮಾಹಿತಿಗಳಿವೆ. ಬೆಳಗ್ಗೆ 12 ಗಂಟೆ ವೇಳೆಗೆ ಲಾಡ್ಜ್ ಸಿಬಂದಿ ಬಾಗಿಲು ಒಡೆದು ನೋಡಿದಾಗಲೇ ಸಂತೋಷ್ ಪಾಟೀಲ್ ಮೃತಪಟ್ಟಿದ್ದು ಕಂಡುಬಂದಿತ್ತು. ಆದರೆ ಜೊತೆಗೆ ಬಂದಿದ್ದ ಇತರ ಇಬ್ಬರು ಸ್ನೇಹಿತರು ಯಾಕೆ ಅಷ್ಟು ಸಮಯದ ವರೆಗೂ ಸಂತೋಷ್ ಪಾಟೀಲನ್ನು ಕರೆದಿಲ್ಲ. ಪಕ್ಕದ ರೂಮ್ ಹೋಗಿ ನೋಡಿಯೂ ಇಲ್ಲ ಯಾಕೆ ಎನ್ನುವ ಬಗ್ಗೆ ಅನುಮಾನಗಳಿವೆ. ಇವೆಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದು ಅವರಿಬ್ಬರನ್ನು ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಆದರೆ ಅವರಿಬ್ಬರು ತಮಗೆ ಯಾವುದೇ ಮಾಹಿತಿ ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ.
Udupi Contractor ends life in Udupi lodge, police suspect of drinking poison mixed with juice. A contractor and BJP worker, who had accused Rural Development & Panchayat Raj (RDPR) Minister K.S. Eshwarappa of corruption, was found dead in a lodge in Udupi on April 12. According to the local police, the contractor Santosh Patil arrived in Udupi along with a couple of his friends Santosh and Prashant on April 11 night. They took two rooms in Shambhavi lodge. While his friends were in one room, Santosh Patil was in the other. Santosh Patil had kept his luggage in the room of his friends.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm