ಬ್ರೇಕಿಂಗ್ ನ್ಯೂಸ್
26-02-22 07:55 pm Mangalore Correspondent ಕರಾವಳಿ
ಮಂಗಳೂರು, ಫೆ.26 : ಸುರತ್ಕಲ್ ಟೋಲ್ ಗೇಟನ್ನು ಮುಚ್ಚುತ್ತೇವೆ, ಈ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಜೊತೆ ಸಭೆ ನಡೆಸಿದ್ದೇನೆ. ಶೀಘ್ರದಲ್ಲೇ ಬಂದ್ ಆಗುತ್ತದೆ ಎಂದು ಕಳೆದ ನಾಲ್ಕು ವರ್ಷಗಳಿಂದ ಹೇಳಿಕೊಂಡು ಬಂದಿದ್ದ ಸಂಸದ ನಳಿನ್ ಕುಮಾರ್ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಆ ರೀತಿ ಹೇಳಿಯೇ ಇಲ್ಲ. ನಾನು ಹೇಳಿರುವ ದಾಖಲೆ ಇದ್ದರೆ ತೋರಿಸಿ ಎಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಯಾವಾಗ ಬಂದ್ ಮಾಡ್ತೀರಿ ಎಂಬ ಪ್ರಶ್ನೆಗೆ ಉತ್ತರ ನೀಡಲಾಗದೆ, ಕೊನೆಗೆ ಸುದ್ದಿಗೋಷ್ಠಿಯಿಂದಲೇ ಎದ್ದು ಹೋಗಿ ಮುಜುಗರಕ್ಕೆ ಒಳಗಾಗಿದ್ದಾರೆ.
ಫೆ.28ರಂದು ಮಂಗಳೂರಿಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಬರುವ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ನಗರದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್- ಗುಂಡ್ಯ- ಪೆರಿಯಶಾಂತಿ ನಡುವಿನ ರಸ್ತೆಗೆ ಶಿಲಾನ್ಯಾಸ, ವಿವಿಧ ಸೇತುವೆಗಳ ಉದ್ಘಾಟನೆ, ಒಟ್ಟು 1500 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲು ಗಡ್ಕರಿ ಬರುತ್ತಿರುವ ಬಗ್ಗೆ ಸಂಸದ ನಳಿನ್ ಕುಮಾರ್ ಮಾಹಿತಿ ನೀಡಿದರು.
ಈ ನಡುವೆ ಪತ್ರಕರ್ತರು ಸುರತ್ಕಲ್ ಟೋಲ್ ಗೇಟ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾನೂನು ವಿಚಾರದಲ್ಲಿ ತೊಡಕಿದೆ, ಅದನ್ನು ನಿವಾರಿಸುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಸಂಸದರು ಪ್ರಸ್ತಾಪಿಸಿದಾಗ, ಈ ಮಾತನ್ನು ನಾಲ್ಕೈದು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದೀರಲ್ಲಾ ಎಂದು ಕೇಳಿದ್ದಕ್ಕೆ, ಕಾನೂನು ಸಮಸ್ಯೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೊಡುತ್ತಾರೆಂದು ಮೈಕನ್ನು ಅವರತ್ತ ತಿರುಗಿಸಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಈ ಬಗ್ಗೆ ಪ್ರತಿಕ್ರಿಯಿಸಿ, ಅಲ್ಲಿ ಪ್ರತ್ಯೇಕ ಎರಡು ಹೆದ್ದಾರಿಗಳಿದ್ದು, ಅದನ್ನು ಬೇರೆ ಬೇರೆ ಕಂಪನಿಗಳು ಮಾಡಿರುವುದರಿಂದ ಪ್ರತ್ಯೇಕವಾಗಿ ಅದರ ಕಲೆಕ್ಷನ್ ಮಾಡಲಾಗುತ್ತಿದೆ. ಬಿ.ಸಿ.ರೋಡ್- ಸುರತ್ಕಲ್ ಹೆದ್ದಾರಿಗೆ 360 ಕೋಟಿ ಖರ್ಚಾಗಿದ್ದು, ಅದರಲ್ಲಿ 250 ಕೋಟಿಯಷ್ಟು ಹಣ ವಸೂಲಾಗಿದೆ. ಇನ್ನೂ 100 ಕೋಟಿ ಬಾಕಿ ಇರುವುದರಿಂದ ಟೋಲ್ ಗೇಟ್ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.
ಆದರೆ, ಈ ಟೋಲ್ ಗೇಟನ್ನು ಸಂಸದರೇ ತಾತ್ಕಾಲಿಕ ಎಂದು ಹೇಳಿಕೊಂಡು ಬಂದಿದ್ದಾರೆ, ಮುಚ್ಚುತ್ತೇವೆ ಎಂದಿದ್ದರು ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು. ಇದರಿಂದ ಸಿಟ್ಟಿಗೆದ್ದ ಸಂಸದ ನಳಿನ್ ಕುಮಾರ್, ನಾನು ಹಾಗೆ ಹೇಳಿಯೇ ಇಲ್ಲ. ಆ ರೀತಿ ಹೇಳಿರುವ ದಾಖಲೆ ಇದ್ದರೆ ತೋರಿಸಿ ಎಂದು ಮರು ಪ್ರಶ್ನೆ ಹಾಕಿದರು. ಸಾಕಷ್ಟು ಬಾರಿ ನೀವು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದೀರಿ ಎಂದರೂ ಕೇಳಲಿಲ್ಲ. ಕೊನೆಗೆ, ಜಿಲ್ಲಾಧಿಕಾರಿಗಳು ಟೋಲ್ ಗೇಟ್ ತಾತ್ಕಾಲಿಕ ಅನ್ನುವ ಬಗ್ಗೆ ಯಾವುದಾದ್ರೂ ದಾಖಲೆ ಇದ್ದರೆ ತೋರಿಸಿ, ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
2018ರಲ್ಲಿ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿದ್ದೇ ಸುರತ್ಕಲ್ ಟೋಲ್ ಗೇಟನ್ನು ಹೆಜಮಾಡಿ ಜೊತೆ ವಿಲೀನ ಮಾಡುವ ಬಗ್ಗೆ ನಿರ್ಧಾರ ಆಗಿತ್ತು ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು. ಅದಕ್ಕೆ ಜಿಲ್ಲಾಧಿಕಾರಿ, ಅದು ಸರಕಾರದಿಂದ ಆದೇಶವಾಗಿ ಬಂದಿಲ್ಲ ಎಂದು ಉತ್ತರಿಸಿ ನುಣುಚಿಕೊಂಡರು. ಅಲ್ಲದೆ, ಕೇಂದ್ರ ಸರಕಾರದ ಹೆದ್ದಾರಿ ಪ್ರಾಧಿಕಾರದ ನಿಯಮ 60 ಕಿಮೀಗೆ ಒಂದು ಟೋಲ್ ಎಂದಿದ್ದರೂ, ಆಯಾ ಭಾಗದ ಹೆದ್ದಾರಿ ಕಾಮಗಾರಿಗಳಿಗೆ ಸಂಬಂಧಪಟ್ಟು ಇದನ್ನು ಸಡಿಲಿಕೆ ಮಾಡಲು ಅವಕಾಶ ಇದೆ ಎಂದು ಹೇಳಿದರು.
ಆದರೆ, ತಲಪಾಡಿಯಿಂದ 40 ಕಿಮೀ ದೂರದ ಪಡುಬಿದ್ರಿಗೆ ಹೋಗುವವರು ಮೂರು ಕಡೆ ಟೋಲ್ ಕಟ್ಟಬೇಕಾದ ಸ್ಥಿತಿ ಇದೆಯಲ್ಲ.. ಈ ರೀತಿಯ ಹೊರೆಯನ್ನು ಜನರ ಮೇಲೆ ಯಾಕೆ ಹೊರಿಸುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ, ಜಿಲ್ಲಾಧಿಕಾರಿಗಳಿಗೂ ಉತ್ತರ ನೀಡಲಾಗಲಿಲ್ಲ. ಸಂಸದ ನಳಿನ್ ಕುಮಾರ್ ಪ್ರಶ್ನೆಗಳ ಸುರಿಮಳೆಗೆ ತತ್ತರಿಸಿ, ಧನ್ಯವಾದ ಎನ್ನುತ್ತಾ ಸುದ್ದಿಗೋಷ್ಠಿಯಿಂದ ಎದ್ದು ನಡೆದರು. ಇದರ ನಡುವೆ, ಸುರತ್ಕಲ್ ಟೋಲ್ ಗೇಟ್ ಬಳಿ ಅಧಿಕೃತ ಎಂದು ದೊಡ್ಡ ಬೋರ್ಡ್ ಹಾಕಿರುವ ಬಗ್ಗೆಯೂ ಜಿಲ್ಲಾಧಿಕಾರಿ ಮತ್ತು ಸಂಸದರ ಗಮನ ಸೆಳೆಯಲಾಯಿತು. ಜಿಲ್ಲಾಧಿಕಾರಿ ಸರಕಾರದ ನಡೆಯನ್ನು ಸಮರ್ಥಿಸಿಕೊಂಡರೆ, ಜನರ ಪರವಾಗಿ ಉತ್ತರ ನೀಡಬೇಕಾದ ಸಂಸದ ಉತ್ತರಿಸಲಾಗದೆ ನುಣುಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತಿತರರು ಇದ್ದರು. (ಸಂಸದ ನಳಿನ್ ಕುಮಾರ್ ವಿವಿಧ ಸಂದರ್ಭಗಳಲ್ಲಿ ಟೋಲ್ ಗೇಟ್ ಮುಚ್ಚುತ್ತೇವೆ ಎಂದು ನೀಡಿದ ಹೇಳಿಕೆ ಪತ್ರಿಕೆಯಲ್ಲಿ ಬಂದಿರುವುದನ್ನು ಇಲ್ಲಿ ಕೊಡಲಾಗಿದೆ. 2017, ಫೆ.16ರ ಉದಯವಾಣಿ ವರದಿ ಮತ್ತು 2021, ಫೆ.12ರ ಹೊಸ ದಿಗಂತ ಪತ್ರಿಕೆಯ ವರದಿಗಳು. ಸಂಸದರು ದಾಖಲೆ ಕೊಡಿ ಎಂದು ಕೇಳಿದ್ದಕ್ಕಾಗಿ ಹಂಚಿಕೊಂಡಿದ್ದೇವೆ).
Mangalore Nalin Kumar Kateel refuses that he stated to close Surathkal toll gate when asked. Says ask DC I never said that I will close the Surathkal Toll. There are legal hurdles. We will look into it. I never said that the Surathkal toll gate is on a temporary basis. We will look to merge the toll gates for which there are legal and technical barriers.”
13-09-25 07:50 pm
Bangalore Correspondent
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm