ಬ್ರೇಕಿಂಗ್ ನ್ಯೂಸ್
13-02-22 10:19 pm Giridhar S, Mangaluru ಕರಾವಳಿ
ಮಂಗಳೂರು, ಫೆ.13 : ಹಿಜಾಬ್ ವಿವಾದ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಪ್ರಬಲ ವಾದ ಮಂಡಿಸಿ ಗಮನ ಸೆಳೆದ ದೇವದತ್ ಕಾಮತ್ ಬಗ್ಗೆ ಸಮುದಾಯ ಸದಸ್ಯರಿಂದ ಭಾರೀ ಟೀಕೆ ಕೇಳಿಬಂದಿದೆ. ಕರಾವಳಿಯ ಪ್ರಬಲ ಗೌಡ ಸಾರಸ್ವತ ಸಮುದಾಯಕ್ಕೆ ಸೇರಿದ ದೇವದತ್ತ ಕಾಮತ್, ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ವಾದ ಮಂಡಿಸುತ್ತಿರುವುದಕ್ಕೆ ಸಮುದಾಯದ ಒಳಗಿನಿಂದಲೇ ಭಾರೀ ಆಕ್ಷೇಪ ಕೇಳಿಬಂದಿದೆ. ಮುಸ್ಲಿಂ ಪರವಾಗಿ ವಾದಿಸುತ್ತಿರುವ ದೇವದತ್ತ ಕಾಮತ್ ಅವರನ್ನು ಅಲ್ಲಿಂದ ಹಿಂದೆ ಸರಿಯುವಂತೆ ಮಾಡಬೇಕು, ಸಮುದಾಯದಿಂದ ಬಹಿಷ್ಕಾರ ಹಾಕಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಿದ್ದಾರೆ.
ಆದರೆ ಉತ್ತರ ಕನ್ನಡ ಜಿಲ್ಲೆಯವರಾಗಿರುವ ಕಾಮತ್ ಪರವಾಗಿ ಕಾರವಾರದ ರಾಮಕೃಷ್ಣ ಮಠದ ಭಾವೇಶಾನಂದ ಸ್ವಾಮೀಜಿ, ಸಮರ್ಥನೆ ಮಾಡಿ ಹೇಳಿಕೆ ನೀಡಿದ್ದಾರೆ. ವಕೀಲರಾಗಿ ಕಾಮತ್ ತಮ್ಮ ವೃತ್ತಿಧರ್ಮವನ್ನು ಮಾಡಿದ್ದಾರೆ. ಅವರ ವಿರುದ್ಧ ಬಹಿಷ್ಕಾರ ಹಾಕಬೇಕೆಂಬ ಒತ್ತಾಯ ಅರ್ಥವಿಲ್ಲದ್ದು ಎಂದು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸ್ವಾಮೀಜಿ, ಸುಪ್ರೀಂ ಕೋರ್ಟಿನಲ್ಲಿ ವಿದ್ಯಾರ್ಥಿನಿಯರ ಪರವಾಗಿ ಹಾಜರಾಗಿದ್ದಾರೆ ಎಂಬ ಕಾರಣಕ್ಕೆ ಹಿರಿಯ ವಕೀಲ ದೇವದತ್ತ ಕಾಮತ್ ಬಗ್ಗೆ ಕ್ಷುಲ್ಲಕವಾಗಿ ಟೀಕೆ ಮಾಡುತ್ತಿರುವುದನ್ನು ಕೇಳಿ ತುಂಬ ನೋವಾಗಿದೆ. ಕೆಲವರು ಅವರನ್ನು ಹಿಂದು ವಿರೋಧಿಯೆಂದು ಬಿಂಬಿಸುತ್ತಿದ್ದಾರೆ. ಈ ರೀತಿ ಟೀಕಿಸುತ್ತಿರುವುದು ಶುದ್ಧ ತಪ್ಪು ಮತ್ತು ಅಸಂಬದ್ಧ. ಒಬ್ಬ ವಕೀಲ ಕೋರ್ಟಿನಲ್ಲಿ ತಮ್ಮ ಕಕ್ಷಿದಾರನ ಪರವಾಗಿ ವಾದಿಸುವುದು, ಕಕ್ಷಿದಾರನ ಪರ ನ್ಯಾಯ ಕೇಳುವುದು ವೃತ್ತಿ ಧರ್ಮ. ಅದು ವಕೀಲನಾಗಿ ಆತನ ಜವಾಬ್ದಾರಿ. ಅಷ್ಟಕ್ಕೇ ಹಿಂದು ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದೇವದತ್ತ ಕಾಮತ್ ವಿರುದ್ಧ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ. ಈ ರೀತಿಯ ಟೀಕೆ, ಟಿಪ್ಪಣಿಗಳು ಸಮಾಜದ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ನೀಡುವಂಥದ್ದು ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ. ದೇವದತ್ತ ಕಾಮತರು ಶ್ರೀ ರಾಮಕೃಷ್ಣ, ವಿವೇಕಾನಂದರ ತತ್ವ, ಸಿದ್ಧಾಂತಗಳಲ್ಲಿ ಒಲವುಳ್ಳವರಾಗಿದ್ದು, ಬಾಲ್ಯದಿಂದಲೂ ರಾಮಕೃಷ್ಣ ಮಠದ ಭಕ್ತರೂ ಆಗಿದ್ದಾರೆ. ಭಕ್ತಿ ಸಿದ್ಧಾಂತ, ಹಿಂದು ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಇರುವ ವ್ಯಕ್ತಿ. ಅವರ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ಹೆಮ್ಮೆ ಹೊಂದಿದ್ದಾರೆ. ಅಲ್ಲದೆ, ಅವರ ಬೆಂಬಲಕ್ಕೂ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಕೀಲ ದೇವದತ್ತ ಕಾಮತ್ ಬಳಿ ಮಾಧ್ಯಮ ಸಂಸ್ಥೆಯೊಂದು ಅಭಿಪ್ರಾಯ ಕೇಳಿದಾಗ, ಉತ್ತರ ಕೊಡಲು ನಿರಾಕರಿಸಿದ್ದಾರೆ. ನಾನು ವಕೀಲನಾಗಿ ನನ್ನ ವೃತ್ತಿ ಧರ್ಮವನ್ನು ಮಾಡುತ್ತಿದ್ದೇನೆ. ನನ್ನ ಸಾಮರ್ಥ್ಯಕ್ಕೆ ಸಾಧ್ಯವಾದಷ್ಟು ಕಕ್ಷಿದಾರನಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಇದರ ಹೊರತಾಗಿ ನಾನೇನು ಹೇಳುವುದಿಲ್ಲ ಎಂದಿದ್ದಾರೆ.
ಜಿಎಸ್ ಬಿ ಸಮುದಾಯದ ಮುಖಂಡರು ಹಿಂದು ಧಾರ್ಮಿಕ ಮುಖಂಡರಿಗೆ ಈ ಬಗ್ಗೆ ಪತ್ರ ಬರೆದಿದ್ದು, ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ವಾದಿಸುತ್ತಿರುವ ದೇವದತ್ತ ಕಾಮತ್ ಅವರನ್ನು ಹಿಂದೆ ಸರಿಯುವಂತೆ ಒತ್ತಡ ಹೇರಲು ಮತ್ತು ಇಲ್ಲದಿದ್ದರೆ ಸಮುದಾಯದಿಂದ ಬಹಿಷ್ಕಾರ ಹಾಕಲು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಕಾಮತ್ ತಮ್ಮ ವಾದದ ವೇಳೆ ಖುರಾನ್ ಪುಸ್ತಕದ ಸಾಲುಗಳನ್ನು ಉಲ್ಲೇಖ ಮಾಡಿರುವುದು ಸಮುದಾಯದ ಕೆಲವು ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ. ಕರ್ನಾಟಕದ ಕರಾವಳಿ, ಗೋವಾ ಮತ್ತು ಕೇರಳದಲ್ಲಿ ಹರಡಿಕೊಂಡಿರುವ ಜಿಎಸ್ ಬಿ ಸಮುದಾಯ ವ್ಯವಹಾರ ಕ್ಷೇತ್ರದಲ್ಲಿ ಭಾರೀ ಹೆಸರು ಪಡೆದಿದ್ದು, ಹಿಂದಿನಿಂದಲೂ ಆರೆಸ್ಸೆಸ್, ತತ್ವ ಸಿದ್ಧಾಂತಗಳ ಪರವಾಗಿ ನಿಲ್ಲುವ ಮೂಲಕ ಗಮನ ಸೆಳೆದಿದೆ.
High Court Advocate Devadatt Kamat from Udupi who has been representing the female Muslim students in both the Karnataka High Court and the Supreme Court in the ongoing hijab row, has been subject to criticism by GSB Community. According to sources, apart from comments and messages online, some members of the Gaud Saraswat Brahmin (GSB) community, to which Devadatt belongs, had asked for him to be excommunicated.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm