ಬ್ರೇಕಿಂಗ್ ನ್ಯೂಸ್
07-02-22 01:19 pm HK Desk news ಕರಾವಳಿ
ಉಡುಪಿ, ಫೆ.7 : ಉಡುಪಿ, ಕುಂದಾಪುರದಲ್ಲಿ ಹಿಜಾಬ್ ವಿಚಾರ ಬೆಂಕಿ ಹೊತ್ತಿಸಿದೆ. ರಾಜ್ಯ ಸರಕಾರ ಹಿಜಾಬ್, ಕೇಸರಿ ಶಾಲು ನಿಷೇಧಿಸಿ ಸಮವಸ್ತ್ರ ಕಡ್ಡಾಯ ಮಾಡಿದ್ದರೂ, ವಿದ್ಯಾರ್ಥಿಗಳು ಪಟ್ಟು ಸಡಿಲಿಸಿಲ್ಲ. ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು ಭಾರೀ ಹೊಯ್ದಾಟ ನಡೆದಿದೆ.
ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೊರಗಡೆ ಹಿಜಾಬ್ ಮತ್ತು ಕೇಸರಿ ಶಾಲು ನಿಷೇಧಿಸಿದ ಬಗ್ಗೆ ಸರ್ಕಾರಿ ಆದೇಶವನ್ನು ಅಂಟಿಸಿದ್ದು ಸಮವಸ್ತ್ರ ಧಾರಿಗಳಿಗೆ ಮಾತ್ರ ಕಾಲೇಜಿಗೆ ಪ್ರವೇಶ ಎಂದು ಷರತ್ತು ಹಾಕಲಾಗಿದೆ. ಅದರಂತೆ, ಕಾಲೇಜಿನ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಕೇಸರಿ ಶಾಲು ಹಾಕಿದವರು ಅದನ್ನು ತೆಗೆದಲ್ಲಿ ಮಾತ್ರ ಪ್ರವೇಶ ಎಂದಿದ್ದಾರೆ.
ಕೇಸರಿ ಶಾಲು ಹಾಕಿ ಒಳ ಬಂದವರನ್ನು ಹಿಂದಕ್ಕೆ ಕಳಿಸಿದ್ದಾರೆ. ಹಿಜಾಬ್ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕೂಡ ಒಳಗಡ ಬಿಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಕಾಲೇಜು ಹೊರಗಡೆ ಹೈಡ್ರಾಮಾ ನಡೆದಿದೆ. ನಾವು ಹಿಂದಿನಿಂದಲೂ ಹಿಜಾಬ್ ಧರಿಸಿ ಬರುತ್ತಿದ್ದೇವೆ. ಈಗ ಹಿಜಾಬ್ ಬೇಡ, ತೆಗೆಯಿರಿ ಎಂದರೆ ನಾವು ತೆಗೆಯಲ್ಲ. ಅದು ನಮ್ಮ ಧಾರ್ಮಿಕ ಹಕ್ಕು. ಕಾಲೇಜಿನ ಸಮವಸ್ತ್ರ ಹಾಕಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಕೊನೆಗೆ, ಸರಕಾರಿ ಕಾಲೇಜಿನ 22 ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ನೀಡಲಾಗಿದ್ದು ಅಲ್ಲಿ ಕುಳಿತಿದ್ದಾರೆ. ಹೈಕೋರ್ಟ್ ಆದೇಶ ಬರುವ ವರೆಗೆ ಕಾಯುತ್ತೇವೆ. ಹಾಗಂತ, ಆದೇಶ ಬಂದಲ್ಲಿ ಪಾಲಿಸುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಇದೇ ವೇಳೆ, ಉಡುಪಿ ಮತ್ತು ಕುಂದಾಪುರದ ಖಾಸಗಿ ಕಾಲೇಜಗಳಲ್ಲೂ ಹಿಜಾಬ್ ಕಿಚ್ಚು ಹೊತ್ತಿಕೊಂಡಿದ್ದು ಹಿಂದು ಸಂಘಟನೆಗಳ ಕುಮ್ಮಕ್ಕಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಬಂದಿದ್ದು ಹಿಜಾಬ್ ತೆಗೆಯಲು ಪಟ್ಟು ಹಿಡಿದಿದ್ದಾರೆ. ಕಾಲೇಜು ಸಿಬಂದಿ, ಉಪನ್ಯಾಸಕರು ವಿದ್ಯಾರ್ಥಿಗಳು ವರ್ತನೆಯಿಂದ ಅಸಹಾಯಕರಾಗಿದ್ದು ಸರಕಾರದ ಆದೇಶ ಪಾಲಿಸಲು ಮುಂದಾಗಿದ್ದಾರೆ. ಕುಂದಾಪುರದ ವೆಂಕಟರಮಣ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದ್ದು ಹಿಂದು - ಮುಸ್ಲಿಂ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಬುರ್ಖಾ, ಹಿಜಾಬ್ ಧರಿಸಿ ಬಂದರೆ ನಾಳೆಯಿಂದ ಕೇಸರಿ ಲುಂಗಿ, ಶಾಲು ಧರಿಸಿ ಹಿಂದು ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳಿಸುತ್ತೇವೆ ಎಂದು ಜಾಗರಣ ವೇದಿಕೆ ನಾಯಕರು ಹೇಳಿದ್ದಾರೆ.
ಕೋಟೇಶ್ವರ ಸರಕಾರಿ ಕಾಲೇಜಿನಲ್ಲೂ 15 ರಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದು ಹಿಜಾಬ್ ವಿರುದ್ಧ ಅಭಿಯಾನ ನಡೆಸಿದ್ದಾರೆ. ನಾವು ಸರಕಾರದ ಆದೇಶ ಪಾಲಿಸುತ್ತೇವೆ. ಕೇಸರಿ, ಹಿಜಾಬ್ ಧರಿಸಲು ಅವಕಾಶ ಇಲ್ಲ. ನಿಯಮ ಉಲ್ಲಂಘಿಸಿದವರಿಗೆ ಅವಕಾಶ ನೀಡಿಲ್ಲ ಎಂದು ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಉಷಾದೇವಿ ಹೇಳಿದ್ದಾರೆ.
ಇದೇ ವೇಳೆ, ಉಡುಪಿಯಲ್ಲಿ ಮಣಿಪಾಲದ ಎಂಜಿಎಂ ಕಾಲೇಜಿನಲ್ಲೂ ಹಿಜಾಬ್ ವಿವಾದ ಎದ್ದಿದ್ದು ಹಿಂದು ವಿದ್ಯಾರ್ಥಿಗಳು ಕೇಸರಿ ಧರಿಸಿ ಬಂದು, ಹಿಜಾಬ್ ತೆಗೆಯುವಂತೆ ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿನಿಯರ ಹಿಜಾಬ್ ತೆಗೆಸಲು ಒತ್ತಡ ಹಾಕಿದ್ದಾರೆ. ಇಲ್ಲದಿದ್ದರೆ ನಾಳೆಯಿಂದ ಕೇಸರಿ ಶಾಲು, ಲುಂಗಿ, ರುದ್ರಾಕ್ಷಿ ಧರಿಸಿ ಬರುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಉಡುಪಿ ಜಿಲ್ಲೆಯ ಮಟ್ಟಿಗೆ ಹಿಜಾಬ್ ವಿವಾದ ಇನ್ನಷ್ಟು ಕಿಚ್ಚಿಗೆ ಕಾರಣವಾಗಿದೆ.
Students of Venkataramana College here went in a procession duly wearing saffron shawls on Monday February 7. When the procession was moving towards the college premises, the principal stopped it in the college grounds. The principal and Kundapur police sub-inspector, Sadashiv Gavaroji, who blocked further movement of the students, told them that those wearing saffron shawls cannot be allowed into the college. The student engaged in an argument with the principal.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm