ಬ್ರೇಕಿಂಗ್ ನ್ಯೂಸ್
04-02-22 02:17 pm HK Desk news ಕರಾವಳಿ
ಕುಂದಾಪುರ, ಫೆ.4 : ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಭಾರೀ ಹೊಯ್ದಾಟಕ್ಕೆ ಕಾರಣವಾಗಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಗೇಟ್ ಒಳಗೆ ಬಂದು ತಮಗೆ ತರಗತಿಗೆ ಪ್ರವೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ, ವಿದ್ಯಾರ್ಥಿನಿಯರು ಮತ್ತು ಕಾಲೇಜು ಉಪನ್ಯಾಸಕರ ನಡುವೆ ವಾಗ್ವಾದ ನಡೆದಿದ್ದು ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರ ಜೊತೆ ಪೋಷಕರು ಕೂಡ ಕಾಲೇಜಿಗೆ ಬಂದಿದ್ದು, ಉಪನ್ಯಾಸಕರು ಮಕ್ಕಳ ಮನವೊಲಿಕೆ ಮಾಡಿದ್ದಾರೆ. ಸರಕಾರದ ಆದೇಶ ಪಾಲನೆ ಮಾಡಬೇಕಾಗುತ್ತದೆ. ಅದಕ್ಕೆ ನೀವು ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಆದರೆ, ತಮ್ಮ ಪಟ್ಟು ಸಡಿಲಿಸದ ವಿದ್ಯಾರ್ಥಿನಿಯರು, ಕಾಲೇಜಿನ ಅರ್ಧದಲ್ಲಿ ನೀವು ಬರಬೇಡಿ ಎಂದರೆ ನಾವೇನು ಮಾಡೋದು ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಈ ವೇಳೆ ಸ್ಥಳಕ್ಕೆ ಬಂದ ಪ್ರಾಂಶುಪಾಲರು, ಮೈದಾನದಲ್ಲೇ ವಿದ್ಯಾರ್ಥಿನಿಯರನ್ನು ತಡೆದು ನಿಲ್ಲಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಪೊಲೀಸರನ್ನೂ ಕರೆಸಿದ್ದಾರೆ. 20ರಷ್ಟು ವಿದ್ಯಾರ್ಥಿನಿಯರು ಹೊರಗೆ ನಿಂತಿದ್ದು, ಕನಿಷ್ಠ ತಮ್ಮನ್ನು ಕಾಲೇಜು ಒಳಗಿನ ಸ್ಟೇಜ್ ಬಳಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಪ್ರಾಂಶುಪಾಲರು ಅವಕಾಶ ಕೊಡದೇ ಹೊರಗೆ ತೆರಳುವಂತೆ ಹೇಳಿದ್ದಾರೆ.
ಇದೇ ವೇಳೆ, ಕಾಲೇಜು ಗೇಟಿಗೆ ಬೀಗ ಹಾಕಿದ್ದು, ಹೊರಭಾಗದಲ್ಲಿ ನಿಂತ ಪೋಷಕರು ವಾಗ್ವಾದ ನಡೆಸಿದ್ದಾರೆ. ಆದರೆ ಸ್ಥಳಕ್ಕೆ ಬಂದ ಕುಂದಾಪುರ ಪೊಲೀಸ್ ಇನ್ ಸ್ಪೆಕ್ಟರ್ ಶ್ರೀಕಾಂತ್ ಪೋಷಕರನ್ನು ತರಾಟೆಗೆ ತೆಗೆದುಕೊಂಡಿದ್ದು ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರೆ ಎಫ್ಐಆರ್ ದಾಖಲು ಮಾಡುವುದಾಗಿ ಬೆದರಿಸಿದ್ದಾರೆ. ಆದರೆ ಪೊಲೀಸರ ಎಚ್ಚರಿಕೆಗೆ ಮಣಿಯದ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಬಳಿ ಕುಳಿತು ಪುಸ್ತಕ ತೆಗೆದು ಓದಲು ತೊಡಗಿದ್ದಾರೆ. ಸರಕಾರದ ಗೊಂದಲದ ಆದೇಶ ಮತ್ತು ವಿದ್ಯಾರ್ಥಿನಿಯರು ಪಟ್ಟು ಹಿಡಿದು ನಡೆಸುತ್ತಿರುವ ಹೋರಾಟಕ್ಕೆ ಕಾಲೇಜು ಸಿಬಂದಿ ಹೈರಾಣಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯೊಬ್ಬಳು, ಹಿಜಾಬ್ ನಮ್ಮ ಜೀವನದ ಭಾಗ. ನಮ್ಮ ಹಿರಿಯರು ಹಿಜಾಬ್ ಧರಿಸುತ್ತಿದ್ದರು. ನನ್ನತ್ತೆ ಕೂಡ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದರು. ಅಚಾನಕ್ಕಾಗಿ ಈ ರೂಲ್ಸ್ ಯಾಕೆ ಬಂತು. ನಾವು ಹಿಜಾಬ್ ಹಾಕಿದರೆ ಯಾರಿಗೇನು ತೊಂದರೆ ಇದೆ. ನಮ್ಮ ಪ್ರಶ್ನೆಗೆ ಉತ್ತರ ಇಲ್ಲ. ಪ್ರಾಂಶುಪಾಲರು ಸರಕಾರದ ಸೂಚನೆ ಎನ್ನುತ್ತಾರೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಯಾಕೆ ಬಂತು. ನಿನ್ನೆಯಿಂದ ನಮ್ಮನ್ನು ಗೇಟ್ ಒಳಗೆ ಬಿಡುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೈಕೋರ್ಟಿನಿಂದ ರಾಜ್ಯ ಸರಕಾರಕ್ಕೆ ನೋಟಿಸ್
ಇತ್ತ ಉಡುಪಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದಿದ್ದು, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಯಾಗಿದೆ. ಅಲ್ಲದೆ, ಉಡುಪಿ ಜಿಲ್ಲಾಡಳಿತ, ಕಾಲೇಜು ಆಡಳಿತ, ಶಿಕ್ಷಣ ಇಲಾಖೆ ಕಾರ್ಯದರ್ಶಿ, ಶಾಸಕರನ್ನು ಕೂಡ ಪ್ರತಿವಾದಿ ಮಾಡಲಾಗಿದ್ದು, ಎಲ್ಲರಿಗೂ ನೋಟಿಸ್ ಜಾರಿಯಾಗಿದೆ. ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದ್ದು ಅಂದು ರಾಜ್ಯ ಸರಕಾರದ ಕಡೆಯಿಂದ ಉತ್ತರ ನೀಡಬೇಕಾಗಿದೆ.
The controversy over the wearing of Hijab continued in the town even on Friday February 4, the third day of the tussle. Muslim girl students attended the government PU college today too with Hijabs and they were refused entry into the college compound.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm