ಬ್ರೇಕಿಂಗ್ ನ್ಯೂಸ್
17-09-20 07:51 pm Mangalore Reporter ಕರಾವಳಿ
ಮಂಗಳೂರು, ಸೆಪ್ಟಂಬರ್ 17: ತಾನೊಂದು ಬಗೆದರೆ ವಿಧಿಯೊಂದು ಬಗೆಯುತ್ತೆ ಅಂತಾರೆ. ಆ ಮಹಿಳೆಯ ಬದುಕಲ್ಲೂ ಅದೇ ಆಗಿತ್ತು. ಆಕೆ ತನ್ನ ಗಂಡನ ಉಳಿವಿಗಾಗಿ ಗೋಗರೆದರು. ಸಹಾಯಕ್ಕಾಗಿ ಅಂಗಲಾಚಿದರು. ಮಹಿಳೆಯ ನೋವು ಕಂಡು ನೆರವಿನ ಕೈಗಳೂ ಸಹಾಯ ಹಸ್ತ ಚಾಚಿದವು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಸಾವಿರ ಹೃದಯಗಳು ಮಿಡಿದರೂ ಜೀವ ಉಳಿಯಲೇ ಇಲ್ಲ !
ಹೌದು.. ದಾನಿಗಳು ಮಿಡಿದರೂ ವಿಧಿ ಮಾತ್ರ ಮರುಗಲೇ ಇಲ್ಲ. ಆಕೆಯ ಹೆಸರು ಗೀತಾ.. ಎರಡು ದಿನಗಳ ಹಿಂದೆ ಆಕೆಯ ಗಂಡ ಬೋಳಾರದ ರಂಜೇಶ್ ಶೆಟ್ಟಿ ಕಿಡ್ನಿ ಕಾಯಿಲೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಐಸಿಯುನಲ್ಲಿ ದಾಖಲಿಸಲು ಆಕೆಯ ಬಳಿ ಹಣ ಇರಲಿಲ್ಲ. ತನ್ನಲ್ಲಿದ್ದ ಬಂಗಾರವನ್ನು ಮಾರಿ 50 ಸಾವಿರ ರೂಪಾಯಿ ಮಾಡಿ, ಐಸಿಯುಗೆ ದಾಖಲು ಮಾಡಿದ್ದರು. ಆಬಳಿಕ ಆಸ್ಪತ್ರೆ ಬಳಿಯ ಮೆಡಿಕಲ್ ಶಾಪ್ ಒಂದರಲ್ಲಿ ತನ್ನ ನೋವನ್ನು ಹೇಳಿಕೊಂಡರು. ಮೆಡಿಕಲ್ ಶಾಪ್ ಹುಡುಗ ಆಪದ್ಬಾಂಧವ ಆಸಿಫ್ ಅವರಿಗೆ ಸುದ್ದಿ ಮುಟ್ಟಿಸಿದ್ದರು. ನೇರವಾಗಿ ಆಸ್ಪತ್ರೆಗೆ ಧಾವಿಸಿ ಬಂದ ಆಸಿಫ್, ಒಂದು ವಿಡಿಯೋ ಮಾಡಿ ಅದರಲ್ಲಿ ಅಕೌಂಟ್ ನಂಬರ್ ದಾಖಲಿಸಿ, ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಮಹಿಳೆ ಗೀತಾ ತುಳುವಿನಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದರು. ಬಂಗಾರ ಮಾರಿ 50 ಸಾವಿರ ತಂದಿದ್ದೇನೆ. ದಯವಿಟ್ಟು ನನ್ನ ಗಂಡನನ್ನು ಉಳಿಸಿ ಕೊಡಿ. ಸಣ್ಣ ಮಗು ಇದೆ ಎಂದು ಅಳು ತೋಡಿಕೊಂಡಿದ್ದರು. ಅಲ್ಲದೆ, ಆಸಿಫ್ ಕೂಡ ಧರ್ಮ ಭೇದ ನೋಡದೆ ಈ ತಾಯಿಯ ಮಾಂಗಲ್ಯ ಉಳಿಸಲು ನೆರವಾಗಿ ಎಂದು ಮನವಿ ಮಾಡಿದ್ದರು. ಸೆ.15ರ ರಾತ್ರಿ ಎಂಟು ಗಂಟೆಗೆ ಅಪ್ಲೋಡ್ ಆಗಿದ್ದ ಈ ವಿಡಿಯೋ ವಾಟ್ಸಪ್ ಗ್ರೂಪ್ ಗಳಲ್ಲಿ ಭಾರೀ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶ- ವಿದೇಶಗಳಿಂದ ನೆರವಿನ ಮಹಾಪೂರವೂ ಹರಿದು ಬಂದಿತ್ತು. ಕೇವಲ ಅರ್ಧ ದಿನದಲ್ಲಿ 14 ಲಕ್ಷ ರೂಪಾಯಿ ಸಂಗ್ರಹ ಆಗಿತ್ತು. ಕರುಣೆಗೆ ಮಿಡಿವ ಹೃದಯಗಳು ನಮ್ಮ ನಡುವೆ ಇವೆ ಎನ್ನುವುದನ್ನು ಸಹೃದಯರು ತೋರಿಸಿಕೊಟ್ಟಿದ್ದರು. ಮರುದಿನ ಮಧ್ಯಾಹ್ನ ಮತ್ತೊಂದು ವಿಡಿಯೋ ಮಾಡಿದ್ದ ಆಸಿಫ್, ಚಿಕಿತ್ಸೆಗೆ ಐದು ಲಕ್ಷ ಬೇಕಾಗಿತ್ತು. ಏಳು ಲಕ್ಷ ಬರಬಹುದು ಅಂದ್ಕೊಂಡಿದ್ದೆವು. ನಿರೀಕ್ಷೆಗೂ ಮೀರಿ ನೆರವು ನೀಡಿದ್ದೀರಿ. ನಿಮ್ಮ ನೆರವಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದರು.
ಆದರೆ, ಮಹಿಳೆಯ ನೋವಿಗೆ ಸಾವಿರ ಹೃದಯಗಳು ಮಿಡಿದರೂ ಆಕೆಯ ಗಂಡನನ್ನು ಮಾತ್ರ ಉಳಿಸಿಕೊಳ್ಳಲು ಆಗಲಿಲ್ಲ. ಮೊದಲೇ ಹೃದಯ ರೋಗಿಯಾಗಿದ್ದ ರಂಜೇಲ್ ಶೆಟ್ಟಿಗೆ ಹಿಂದೊಮ್ಮೆ ಸರ್ಜರಿ ಆಗಿತ್ತು. ಈಗ ಕಿಡ್ನಿ ವೈಫಲ್ಯ ಆಗಿದ್ದಲ್ಲದೆ, ಕೊರೊನಾ ರೋಗ ಬಾಧಿತರಾಗಿ ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ. ಸಾವಿರ ಹೃದಯಗಳು ಸೇರಿ ಬಡಿದಾಡಿದರೂ ವಿಧಿಯಾಟ ಬದಲಿಸಲಿಲ್ಲ. ಆದರೆ, ಮಾನವೀಯತೆಗೆ ಜನ ಸ್ಪಂದಿಸುತ್ತಾರೆ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm