ಬ್ರೇಕಿಂಗ್ ನ್ಯೂಸ್
02-02-22 12:31 pm Mangalore Correspondent ಕರಾವಳಿ
ಮಂಗಳೂರು, ಫೆ.2 : ನೈಟ್ ಕರ್ಪ್ಯೂ ಜಾರಿಯಿಂದಾಗಿ ರದ್ದುಗೊಂಡಿದ್ದ ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ಮತ್ತೆ ಆರಂಭಿಸಲು ಪ್ರಯತ್ನ ನಡೆದಿದೆ. ಈ ಬಗ್ಗೆ ಕಂಬಳ ಸಮಿತಿಯ ಪ್ರಮುಖರು ಸಭೆ ನಡೆಸಿದ್ದು ಉಳಿದಿರುವ ಕಂಬಳದ ವೇಳಾಪಟ್ಟಿಯನ್ನು ಮರು ನಿಗದಿಗೊಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ 2021-22ರ ಸಾಲಿನ ಕಂಬಳವನ್ನು ಕಳೆದ ಜನವರಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಕೊರೋನಾ ಕರ್ಫ್ಯೂ ತೆರವುಗೊಂಡ ಕಾರಣ ಕಂಬಳವನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸಭೆ ನಡೆಸಿ ಕಂಬಳದ ಪರಿಷ್ಕೃತ ದಿನಾಂಕಗಳನ್ನು ನಿಗದಿಪಡಿಸಿದೆ ಎಂದು ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ತಿಳಿಸಿದ್ದಾರೆ.

ಕಳೆದ ಡಿ.5ರಂದು ಕಂಬಳ ಸೀಸನ್ ಆರಂಭಗೊಂಡಿತ್ತು. ಹಳೆ ವೇಳಾಪಟ್ಟಿಯಂತೆ ಹೊಕ್ಕಾಡಿಗೋಳಿ, ಮೂಡುಬಿದಿರೆ, ಮಿಯ್ಯಾರ್, ಕಕ್ಕೆಪದವು, ಮುಲ್ಕಿಯಲ್ಲಿ ಕಂಬಳ ಈಗಾಗಲೇ ನಡೆದಿದ್ದು ಉಳಿದ ಕಡೆಯ ಕಂಬಳಗಳು ಬಾಕಿಯಾಗಿದ್ದವು. ಇದೀಗ ಜಿಲ್ಲಾಡಳಿತದ ಅನುಮತಿ ಪಡೆದು ಫೆಬ್ರವರಿ 5ರಿಂದ ಕಂಬಳ ಸೀಸನ್ ಆರಂಭಿಸಿದ್ದು ಮೊದಲ ಕಂಬಳ ಬಾರಾಡಿ ಬೀಡುವಿನಲ್ಲಿ ನಡೆಯಲಿದೆ. ಫೆ.13 ರಂದು ಅಡ್ವೆ ನಂದಿಕೂರು, 19ರಂದು ವಾಮಂಜೂರು ತಿರುವೈಲ್ ಕಂಬಳ, 26ಕ್ಕೆ ಐಕಳ ಬಾವ, ಮಾರ್ಚ್ 5ರಂದು ಪೈವಳಿಕೆ ಕಂಬಳ, 12 ರಂದು ಕಟಪಾಡಿ, 19 ರಂದು ಪುತ್ತೂರು ಕಂಬಳ, 26 ರಂದು ಮಂಗಳೂರಿನ ಬಂಗ್ರಕುಳೂರು, ಎಪ್ರಿಲ್ 2ರಂದು ಉಪ್ಪಿನಂಗಡಿ, 9 ರಂದು ಬಂಗಾಡಿ, ಎಪ್ರಿಲ್ 16 ರಂದು ವೇಣೂರು ಕಂಬಳದೊಂದಿಗೆ ಮುಕ್ತಾಯಗೊಳ್ಳಲಿದೆ.
ಕೊರೊನಾದಿಂದಾಗಿ ಈ ಬಾರಿ ಕಂಬಳ ಸೀಸನ್ ಮುಗಿದೇ ಹೋಯ್ತು ಎಂಬ ಮಾತುಗಳು ಕೇಳಿಬಂದಿದ್ದವು. ಕಂಬಳ ಅಭಿಮಾನಿಗಳು, ಕಂಬಳದ ಕೆಲಸಗಾರರು, ಮೂರು ಜಿಲ್ಲೆಗಳಲ್ಲಿ ಹರಡಿರುವ ನೂರಕ್ಕೂ ಹೆಚ್ಚು ಜೋಡಿ ಕೋಣಗಳ ಮಾಲೀಕರು ಮತ್ತು ಸಾವಿರಾರು ಕಾರ್ಮಿಕರು ನಿರಾಶೆಗೊಂಡಿದ್ದರು. ಆದರೆ ಕರ್ಫ್ಯೂ ತೆರವಾದೊಡನೆ ಕಂಬಳ ಸಮಿತಿ ಸಭೆ ಸೇರಿದ್ದು ವಿಳಂಬ ಮಾಡದೆ ಹಳೆಯ ರೀತಿಯಲ್ಲೇ ಶನಿವಾರ, ಭಾನುವಾರದ ಕಂಬಳವನ್ನು ಮತ್ತೆ ಆರಂಭಿಸಿದೆ.
With the lifting of the night curfew in the district, preparations are afoot to hold the remaining Kambalas. The Kambala Samithi has brought out the revised schedule for holding the remaining Kambalas.
13-10-26 03:49 pm
HK News Staffer
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm