ಬ್ರೇಕಿಂಗ್ ನ್ಯೂಸ್
18-01-22 12:44 pm HK Desk news ಕರಾವಳಿ
ಕಾಸರಗೋಡು, ಜ.18 : ಇತ್ತೀಚೆಗೆ ವಿಟ್ಲ ಬಳಿಯ ಸಾಲೆತ್ತೂರಿನಲ್ಲಿ ಮದುವೆ ಸಂಭ್ರಮದಲ್ಲಿ ಕೊರಗಜ್ಜನ ರೀತಿ ವೇಷ ತೊಟ್ಟು ಅಪಮಾನಗೈದ ಪ್ರಕರಣದ ಆರೋಪಿ ಮದುವೆ ಗಂಡಿನ ಉಪ್ಪಳದ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ. ಜನವರಿ 17ರ ಸೋಮವಾರ ರಾತ್ರಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮನೆಗೆ ಕಲ್ಲು ತೂರಿದ್ದು, ಕಿಟಕಿ ಗಾಜು ಪುಡಿಯಾಗಿದೆ. ಅಲ್ಲದೆ, ಮನೆಯ ಕಂಪೌಂಡ್ ಗೋಡೆಗೆ ಕೇಸರಿ ಪೈಂಟ್ ಬಳಿಯಲಾಗಿದೆ.
ರಾತ್ರಿ ವೇಳೆ ಏನೋ ಶಬ್ದ ಕೇಳಿ, ಮನೆಯವರು ಹೊರ ಬಂದಿದ್ದಾರೆ. ಹೊರಗಡೆ ಬೈಕಿನಲ್ಲಿ ಇಬ್ಬರು ಯುವಕರು ಕಂಡುಬಂದಿದ್ದು, ಮನೆಮಂದಿ ಬೊಬ್ಬೆ ಹಾಕುತ್ತಲೇ ಪರಾರಿಯಾಗಿದ್ದಾರೆ. ಗಮನಿಸಿದಾಗ ಮನೆಯ ಕಿಟಕಿ ಗಾಜು ಪುಡಿಯಾಗಿತ್ತು. ಅಲ್ಲದೆ, ಕಂಪೌಂಡ್ ಗೋಡೆಯಲ್ಲಿ ಕೇಸರಿ ಬಣ್ಣ ಬಳಿಯಲಾಗಿತ್ತು.


ಘಟನೆ ಬಗ್ಗೆ ಕುಂಬಳೆ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಉಪ್ಪಳ ಬಳಿಯ ಬೇಕೂರಿನಲ್ಲಿರುವ ಉಮರುಲ್ ಬಾಷಿತ್ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಕೊರಗಜ್ಜನ ವೇಷ ತೊಟ್ಟು ವಿಕೃತಿ ಮೆರೆದ ಬಗ್ಗೆ ವಿಟ್ಲ ಠಾಣೆಯಲ್ಲಿ ಮದುಮಗ ಉಮರುಲ್ ಬಾಷಿತ್ ಸೇರಿ 25 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ. ವಿಟ್ಲ ಬಳಿಯ ಸಾಲೆತ್ತೂರಿನ ಯುವತಿಯನ್ನು ಉಪ್ಪಳದ ಉಮರುಲ್ ಬಾಷಿತ್ ಮದುವೆಯಾಗಿದ್ದು, ಮದುವೆಯ ದಿನ ರಾತ್ರಿ ಸಂಪ್ರದಾಯದಂತೆ ವಧುವಿನ ಮನೆಗೆ ಬಂದಿದ್ದಾಗ ಕೊರಗಜ್ಜನ ರೀತಿ ವೇಷ ತೊಟ್ಟಿದ್ದು ಹಿಂದು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿತ್ತು.
ಮುಸ್ಲಿಂ ಮದುವೆ ಸಂಭ್ರಮ ; ಕೊರಗಜ್ಜನ ರೀತಿ ವೇಷ ತೊಟ್ಟು ಕುಣಿದು ಕುಪ್ಪಳಿಸಿದ ಯುವಕರು, ಆಕ್ರೋಶ
ಮುಸ್ಲಿಂ ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ ; ಸಾಲೆತ್ತೂರಿನ ಮನೆಗೆ ಬಜರಂಗದಳ ಮುತ್ತಿಗೆ ಯತ್ನ, ಬಂಧನ
ಅಪಹಾಸ್ಯದ ಬಗ್ಗೆ ಕೊರಗಜ್ಜನಿಗೆ ದೂರು ; ಯಾವ ರೀತಿ ಕುಣಿಸಿದ್ದಾರೋ ಅದೇ ರೀತಿ ಬೀದಿಯಲ್ಲಿ ಅಲೆದಾಡಿಸುತ್ತೇನೆ !
The house of Umarul Baatish from Uppala Bekur, who has been accused of visiting the house of his bride at Vittal Salethur duly dressed and made up like Koragajja deity of Tulunadu, was stoned on Monday January 17. Window glasses were shattered. The miscreants also reportedly painted the compound wall of the said house saffron.
13-10-26 03:38 pm
HK News Staffer
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm