ಬ್ರೇಕಿಂಗ್ ನ್ಯೂಸ್
14-04-26 10:48 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 14: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಸೇನಾ ದಾಳಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಇರಾನ್ ಇದೀಗ ತನ್ನ ನೆರೆಹೊರೆಯ ಐದು ಅರಬ್ ರಾಷ್ಟ್ರಗಳಿಂದ ಪರಿಹಾರ ಕೊಡುವಂತೆ ಆಗ್ರಹಿಸಿದೆ.
ಭಾರೀ ನಷ್ಟದ ಕಾರಣ ಇರಾನ್ ತನ್ನ ನೆರೆಯ ಐದು ಅರಬ್ ರಾಷ್ಟ್ರಗಳಿಂದ ಪರಿಹಾರ ಕೋರಿದ್ದು, ತಮ್ಮ ಪ್ರದೇಶಗಳನ್ನು ತನ್ನ ದೇಶದ ವಿರುದ್ಧದ ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ "ಅಮೆರಿಕ-ಇಸ್ರೇಲಿ ಆಕ್ರಮಣ"ಕ್ಕೆ ಅನುವು ಮಾಡಿಕೊಟ್ಟಿದೆ ಎಂಬುದಾಗಿ ಇರಾನ್ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.
ಇರಾನ್‌ನ ರಾಯಭಾರಿ ಮತ್ತು ಖಾಯಂ ಪ್ರತಿನಿಧಿ ಅಮೀರ್- ಸಯೀದ್ ಇರವಾನಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಜಮಾಲ್ ಫೇರ್ಸ್ ಅಲ್ರೋವೈ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಜೋರ್ಡಾನ್ ಮಾಡಿದ ಪರಿಹಾರದ ಬೇಡಿಕೆಗಳನ್ನು ತಿರಸ್ಕರಿಸಿದರು. ಪ್ರಸ್ತುತ ಸಂದರ್ಭಗಳಲ್ಲಿ, ಈ ಐದು ದೇಶಗಳು "ಅಮೆರಿಕ-ಇಸ್ರೇಲ್ ಆಕ್ರಮಣಕ್ಕೆ ಅನುಕೂಲ ಮಾಡಿಕೊಟ್ಟ ಕಾರಣ ವಿಶ್ವಸಂಸ್ಥೆ ಚಾರ್ಟರ್‌ನ 51ನೇ ವಿಧಿಯನ್ನು (ಸ್ವ-ರಕ್ಷಣೆಯ ಹಕ್ಕು) ಕಾನೂನುಬದ್ಧವಾಗಿ ಅನ್ವಯಿಸಲು ಸಾಧ್ಯವಿಲ್ಲ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಟೆಹ್ರಾನ್ "ಆಕ್ರಮಣಶೀಲತೆಯ ಬಲಿಪಶು" ಎಂದು ಪ್ರತಿಪಾದಿಸಿಕೊಂಡಿದ್ದು, ಅದರ ಅಂತರ್ಗತ ಸ್ವ-ರಕ್ಷಣೆಯ ಹಕ್ಕನ್ನು ಚಲಾಯಿಸುತ್ತಿದೆ ಎಂದು ರಾಯಭಾರಿ ಪತ್ರದಲ್ಲಿ ಬರೆದಿದ್ದಾರೆ.
ಪತ್ರದ ಪ್ರಕಾರ, ಕೆಲವು ಸಂದರ್ಭಗಳಲ್ಲಿ, "ಇರಾನ್‌ನೊಳಗಿನ ನಾಗರಿಕ ಗುರಿಗಳ ವಿರುದ್ಧ ಕಾನೂನುಬಾಹಿರ ಸಶಸ್ತ್ರ ದಾಳಿಗಳನ್ನು ಆ ರಾಷ್ಟ್ರಗಳು ನೇರವಾಗಿ ನಡೆಸಿವೆ" ಎಂದು ಹೇಳಿದೆ. ಇರಾನ್‌ನ ಮಿಷನ್ ಐದು ದೇಶಗಳು ತಮ್ಮ ಪ್ರದೇಶಗಳನ್ನು ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ ಮತ್ತು ಕೆಲವು ಸಂದರ್ಭಗಳಲ್ಲಿ, ಅಂತಹ ಕ್ರಮಗಳಲ್ಲಿ ನೇರವಾಗಿ ಭಾಗವಹಿಸುವ ಮೂಲಕ "ಅಂತರಾಷ್ಟ್ರೀಯವಾಗಿ ಅಪರಾಧ ಕೃತ್ಯಗಳನ್ನು" ಎಸಗಿವೆ. ತಕ್ಷಣವೇ ಆ ಕೃತ್ಯಗಳನ್ನು ನಿಲ್ಲಿಸುವಂತೆ ಕರೆ ನೀಡಿದೆ.
ಈ ರೀತಿಯ ನೆರವು ಅಂತರಾಷ್ಟ್ರೀಯ ನೀತಿಗಳ ಉಲ್ಲಂಘನೆಯಾಗಿದ್ದು, ತಪ್ಪು ಕೃತ್ಯಗಳ ಪರಿಣಾಮವಾಗಿ ಉಂಟಾದ ಎಲ್ಲಾ ವಸ್ತು ಮತ್ತು ನೈತಿಕ ಹಾನಿಗಳಿಗೆ ಪರಿಹಾರವನ್ನು ಒಳಗೊಂಡಂತೆ ಇಸ್ಲಾಮಿಕ್ ಗಣರಾಜ್ಯ ಇರಾನ್‌ಗೆ ಸಂಪೂರ್ಣ ಪರಿಹಾರವನ್ನು ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm