ಬ್ರೇಕಿಂಗ್ ನ್ಯೂಸ್
13-04-26 10:35 pm HK News Staffer ದೇಶ - ವಿದೇಶ
ಮುಂಬೈ, ಎಪ್ರಿಲ್ 13: ಬಹುರಾಷ್ಟ್ರೀಯ ಕಂಪನಿ ಟಿಸಿಎಸ್ ನಲ್ಲಿ ಹೈಫೈ ಲವ್ ಜಿಹಾದ್, ಮತಾಂತರ, ಸೆಕ್ಸ್ ದಂಧೆ ನಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿದ್ದು ಮಹಾರಾಷ್ಟ್ರ ಪೊಲೀಸರು ಘಟನೆ ಸಂಬಂಧಿಸಿ 9 ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಕಂಪನಿಯ ಎಚ್ಆರ್ ಮ್ಯಾನೇಜರ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಟಿಸಿಎಸ್ ಕಂಪನಿಯ ನಾಸಿಕ್ ಕಚೇರಿಯಲ್ಲಿ ಇಂತಹ ಆರೋಪ ಕೇಳಿಬಂದಿದ್ದು, ಹಲವಾರು ಟೆಕ್ಕಿಗಳು ತಮ್ಮನ್ನು ಬೀಫ್ ತಿನ್ನುವಂತೆ ಪೀಡಿಸಿರುವುದು, ನಮಾಜ್ ಮಾಡುವಂತೆ ಒತ್ತಡ ಹೇರಿರುವುದು, ಸೆಕ್ಸ್ ದಂಧೆಗೆ ಬಳಸಿ ಮತಾಂತರಕ್ಕೆ ಯತ್ನಿಸಿರುವ ಬಗ್ಗೆ ಕಂಪನಿಯ ಹಿರಿಯ ಸಿಬಂದಿ ಬಗ್ಗೆ ಆರೋಪ ಮಾಡಿದ್ದಾರೆ. ಸಂಸ್ಥೆಯ ಉದ್ಯೋಗಿಗಳು ಹಿರಿಯ ಮುಸ್ಲಿಂ ಸಹೋದ್ಯೋಗಿಗಳು ನಡೆಸುತ್ತಿರುವ ಕಿರುಕುಳದ ಬಗ್ಗೆ ಪದೇ ಪದೇ ದೂರಿತ್ತಿದ್ದರೂ ಎಚ್ಆರ್ ಮ್ಯಾನೇಜರ್ ನಿರ್ಲಕ್ಷ್ಯ ವಹಿಸಿದ್ದಾನೆ. ಇದಕ್ಕಾಗಿ ಎಚ್ಆರ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.


ಹೊಸತಾಗಿ ಕೆಲಸ ಕೇಳಿಕೊಂಡು ಬಂದ ಯುವತಿಯರನ್ನು ರಾಕೆಟ್ ಗೆ ಬಳಸುತ್ತಿದ್ದು, ಅವರನ್ನು ಕೆಲಸ ತೆಗೆಸಿಕೊಡುವ ಭರವಸೆ ಕೊಟ್ಟು ದುರ್ಬಳಕೆ ಮಾಡುತ್ತಿದ್ದರು. ಅಲ್ಲದೆ, ಅವರ ಫೋಟೋ, ವಿಡಿಯೋ ತೆಗೆದಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದರು. ಎಚ್ಆರ್ ಮ್ಯಾನೇಜರ್ ನಿರ್ಲಕ್ಷ್ಯ ವಹಿಸಿದ್ದು ಪದೇ ಪದೇ ಕೃತ್ಯ ಮರುಕಳಿಸಲು ಕಾರಣವಾಗಿದೆ. ಕೃತ್ಯದಲ್ಲಿ ಮಹಿಳಾ ಉದ್ಯೋಗಿಗಳು ಕೂಡ ತೊಡಗಿಸಿದ್ದು, ಕೃತ್ಯ ಬಯಲಾಗುತ್ತಲೇ ತಲೆಮರೆಸಿಕೊಂಡಿದ್ದಾರೆ ಎಂದು ಎಸಿಪಿ ಸಂದೀಪ್ ಮಿಟ್ಕೆ ತಿಳಿಸಿದ್ದಾರೆ.
ನಾಶಿಕ್ ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಲೈಂಗಿಕ ದೌರ್ಜನ್ಯ ವಿರೋಧಿ ಕಾಯ್ದೆಯಡಿ ತನಿಖೆಗೆ ಆದೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರ ತನಿಖೆಗೆ ವಿಶೇಷ ತಂಡವನ್ನು ನೇಮಕ ಮಾಡಿದೆ. ವಿಷಯ ಬೆಳಕಿಗೆ ಬರುತ್ತಲೇ ಆರೋಪ ಹೊತ್ತ ಹಿರಿಯ ಸಿಬಂದಿಯನ್ನು ಟಿಸಿಎಸ್ ಕಂಪನಿ ಕೆಲಸದಿಂದ ತೆಗೆದುಹಾಕಿದೆ.
ಕೆಲವು ಸೀನಿಯರ್ ಉದ್ಯೋಗಿಗಳು ಹೇಳುವ ಪ್ರಕಾರ, ಇಂತಹ ಸೆಕ್ಸ್ ದಂಧೆ ಎಲ್ಲ ಕಡೆಯೂ ಆಗುತ್ತದೆ, ಆದರೆ ಇಲ್ಲಿ ಮಹಿಳಾ ಉದ್ಯೋಗಿಗಳನ್ನು ಬೇರೆ ಬೇರೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳಲಾಗಿದೆ. ಆನಂತರ, ಅವರನ್ನು ಮತಾಂತರಕ್ಕೆ ಪೀಡಿಸಿದ್ದಾರೆ. ಹಿಂದು ದೇವರನ್ನು ನಿಂದಿಸಿ ಅಲ್ಲಾನೊಬ್ಬನೇ ದೇವರು ಎಂದು ಹೇಳುತ್ತ, ಅಲ್ಲಾನನ್ನು ಪೂಜಿಸಲು ಒತ್ತಾಯಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳಿದ್ದು, ಮಹಾರಾಷ್ಟ್ರ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am