ಬ್ರೇಕಿಂಗ್ ನ್ಯೂಸ್
07-01-22 07:52 pm Mangalore Correspondent ಕರಾವಳಿ
ಉಡುಪಿ, ಜ.7 : ರಾತ್ರಿ ಕರ್ಫ್ಯೂ ಹೇರಿಕೆಯಿಂದಾಗಿ ಯಕ್ಷಗಾನ ಮತ್ತು ರಂಗಭೂಮಿ ಕಲಾವಿದರು ತುಂಬ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ರಾತ್ರಿ ವೇಳೆಯ ಯಕ್ಷಗಾನ, ನಾಟಕದ ದುಡಿಮೆಯಿಲ್ಲದೆ ಕಲಾವಿದರು ಬದುಕು ಸಾಗಿಸುವಂತಿಲ್ಲ. ಹೀಗಾಗಿ ಕರ್ಫ್ಯೂ ಹೇರಿದರೂ, ರಾತ್ರಿ 12 ಗಂಟೆ ವರೆಗೆ ಯಕ್ಷಗಾನ ಮತ್ತು ರಂಗಭೂಮಿ ಚಟುವಟಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನೂರಾರು ಕಲಾವಿದರು ಉಡುಪಿ ಜಿಲ್ಲಾಧಿಕಾರಿ ಕಚೇರಿಯೆದುರಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಸರಕಾರದ ನೀತಿಯನ್ನು ಸಹಿಸಿಕೊಂಡಿದ್ದೇವೆ. ಯಕ್ಷಗಾನ ಮೇಳಗಳು, ವೃತ್ತಿನಿರತ ನಾಟಕ ತಂಡಗಳು ಹೀಗೆ ರಂಗಭೂಮಿಯನ್ನೇ ನೆಚ್ಚಿಕೊಂಡ ಸಾವಿರಾರು ಕಲಾವಿದರು, ಕಾರ್ಮಿಕರು ಕರಾವಳಿಯಲ್ಲಿದ್ದಾರೆ. ಅವರೆಲ್ಲರ ಬದುಕಿಗೂ ರಾತ್ರಿ ಕರ್ಫ್ಯೂ ಕಲ್ಲು ಹಾಕಿದೆ. ಇದೇ ಸ್ಥಿತಿ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಲಾವಿದರು ಬೆದರಿಕೆ ಹಾಕಿದ್ದಾರೆ.

ಕುಂದಾಪುರ ಕಲಾಕ್ಷೇತ್ರ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಒಂದು ನಾಟಕ, ಯಕ್ಷಗಾನ ಅಂದರೆ ಕೇವಲ ಎದುರಲ್ಲಿ ಕಾಣುವ ಕಲಾವಿದರು ಮಾತ್ರ ಅಲ್ಲ. ಇದೇ ಕಲೆಯನ್ನು ನೆಚ್ಚಿಕೊಂಡ ನೂರಾರು ಕಾರ್ಮಿಕರು ಇದರ ಹಿಂದಿದ್ದಾರೆ. ಸೌಂಡ್ಸ್, ವೇಷಭೂಷಣ, ಮೇಕಪ್, ಬೆಳಕು ಇನ್ನಿತರ ಕಾರ್ಮಿಕರು ಇದ್ದಾರೆ. ಒಂದು ಯಕ್ಷಗಾನ ಅಂದರೆ ಕನಿಷ್ಠ ನೂರಕ್ಕೂ ಹೆಚ್ಚು ಮಂದಿ ದುಡಿಯುತ್ತಾರೆ. ಅವರೆಲ್ಲರಿಗೂ ಯಕ್ಷಗಾನ, ರಂಗಭೂಮಿ ಅನ್ನ ನೀಡುತ್ತದೆ. ಸರಕಾರ ದಿಢೀರ್ ಆಗಿ ಕರ್ಫ್ಯೂ ವಿಧಿಸಿ, ನಿಗದಿಯಾದ ನಾಟಕ, ಯಕ್ಷಗಾನಗಳನ್ನೂ ರದ್ದುಪಡಿಸಿದರೆ ಇದನ್ನು ನಂಬಿಕೊಂಡವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಮೂರು ಮುತ್ತು ನಾಟಕ ತಂಡದ ಸತೀಶ್ ಪೈ ಮಾತನಾಡಿ, ನಾವು 50 ವರ್ಷಗಳಿಂದಲೂ ನಾಟಕವನ್ನೇ ವೃತ್ತಿಯಾಗಿಸಿ ಬದುಕು ನಡೆಸುತ್ತಾ ಬಂದಿದ್ದೇವೆ. ಆದರೆ ಕೋವಿಡ್ ಕಳೆದ ಎರಡು ವರ್ಷಗಳಲ್ಲಿ ನಮ್ಮನ್ನು ತೀರಾ ಮಲಗಿಸಿ ಬಿಡ್ತು. ಆದರೂ ಸಾಲ ಮಾಡಿಕೊಂಡು ಮತ್ತೆ ರಂಗಕ್ಕಿಳಿದಿದ್ದೇವೆ. ಈಗ ಮತ್ತೆ ಕರ್ಫ್ಯೂ ಹೇರಲಾಗಿದೆ. ಹೀಗಾದರೆ ಇದನ್ನೇ ನಂಬಿಕೊಂಡವರ ಗತಿ ಏನು.. ಕಳೆದ ಬಾರಿ ಕಲಾವಿದರಿಗೆ ಪರಿಹಾರ ಕೊಡುತ್ತೇವೆ ಎಂದರು. ನಾವು ಪರಿಹಾರ, ಹಣ ಯಾವುದನ್ನೂ ಕೇಳುವುದಿಲ್ಲ. ನಮಗೆ ರಾತ್ರಿ 12 ಗಂಟೆ ವರೆಗೆ ಅವಕಾಶ ಕೊಡಿ. ಅಷ್ಟೇ ಸಾಕು.. ಕೋವಿಡ್ ಹರಡದಂತೆ ಮುಂಜಾಗ್ರತೆ ವಹಿಸಬೇಕು ಅನ್ನುವುದು ಗೊತ್ತಿದೆ. ಆದರೆ ಎಲ್ಲವನ್ನೂ ಬಂದ್ ಮಾಡಿ ಕುಳಿತರೆ ನಾವು ಊಟಕ್ಕೆ ಏನು ಮಾಡಬೇಕು ಅನ್ನೋದನ್ನು ಸರಕಾರ ಹೇಳಬೇಕು ಎಂದು ಹೇಳಿದರು.
ಜನವರಿಯಿಂದ ಎಪ್ರಿಲ್ ವರೆಗೆ ನಮಗೆ ಸೀಸನ್ ಇದ್ದಂತೆ. ನಾಟಕ, ಯಕ್ಷಗಾನ ಎಲ್ಲ ಹೆಚ್ಚು ನಡೆಯೋದು ಇದೇ ಸಮಯದಲ್ಲಿ. ಇಂಥ ಸಂದರ್ಭದಲ್ಲೇ ಕರ್ಫ್ಯೂ ಹೇರಿ, ನಮ್ಮನ್ನು ಬಿಕ್ಕಟ್ಟಿಗೆ ಸಿಲುಕಿಸಿದರೆ ಹೇಗೆ.. ಸರಕಾರ ಕರುಣೆ ತೋರಬೇಕು ಅನ್ನುವುದು ನಮ್ಮ ಮೂರು ಜಿಲ್ಲೆಗಳ ಕಲಾವಿದರು, ಇದೇ ಕಲೆಯನ್ನು ಆಶ್ರಯಿಸಿದ ಸಾವಿರಾರು ಕುಟುಂಬಗಳ ಕಳಕಳಿಯ ಮನವಿ ಎಂದರು ಸತೀಶ್ ಪೈ. ನೂರಕ್ಕೂ ಹೆಚ್ಚು ವಿವಿಧ ಮಾದರಿಯ ಕಲಾವಿದರು ಇದ್ದರು. ತಮ್ಮ ಸಂಕಷ್ಟ, ಬವಣೆಯನ್ನು ಹೇಳಿಕೊಂಡರು.
ಕೊನೆಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ಥಳಕ್ಕಾಗಮಿಸಿ, ಮನವಿ ಸ್ವೀಕರಿಸಿದರು. ನಾವು ಸರಕಾರದ ಗಮನಕ್ಕೆ ತರುತ್ತೇವೆ. ನಾವು ಏನೂ ಮಾಡೋದಕ್ಕೆ ಆಗೋದಿಲ್ಲ. ನಿಮ್ಮ ಕಷ್ಟದ ಅರಿವು ನಮಗಿದೆ, ಅದನ್ನು ತಲುಪಿಸುವ ಕಾರ್ಯ ಮಾಡುತ್ತೇನೆ ಎಂದರು.
A symbolic protest was held by performing artistes working in the field of Yakshagana and stage drama in front of the DC's office here on Friday January 7 to draw the attention of the ruling BJP government to the hardships faced by them due to the weekend and night curfews.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm