ಬ್ರೇಕಿಂಗ್ ನ್ಯೂಸ್
31-12-21 06:47 pm Mangalore Correspondent ಕರಾವಳಿ
ಉಳ್ಳಾಲ, ಡಿ.31 : ಕೊರಗಜ್ಜನ ಕ್ಷೇತ್ರ ಸೇರಿದಂತೆ ದೈವಸ್ಥಾನ, ಮಸೀದಿಗಳಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದಿರುವ ದೇವದಾಸ್ ದೇಸಾಯಿ ಜೈಲಿನಿಂದ ಹೊರಬಂದರೆ ಆತನ ಕೈ ಕಾಲು ಕಡಿಯುತ್ತೇನೆಂದು ಕ್ರೈಸ್ತ ವ್ಯಕ್ತಿಯೊಬ್ಬ ಹೇಳಿಕೊಂಡಿರುವ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೊಕ್ಕೊಟ್ಟು ನಿವಾಸಿ ರೋಶನ್ ಡಿಸೋಜ ಎಂಬವರು ತುಳುನಾಡ ಕಾರಣಿಕ ದೈವ ಕೊರಗಜ್ಜನ ಆರಾಧಕರಾಗಿದ್ದು ಕೊರಗಜ್ಜನ ಕ್ಷೇತ್ರವನ್ನ ಅಪವಿತ್ರಗೊಳಿಸಿದ ದೇವದಾಸ್ ದೇಸಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಸ್ವತಃ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ವಿಡಿಯೋ ವೈರಲ್ ಆಗಿದೆ.
ನಾಲ್ಕು ದಿವಸಗಳ ಹಿಂದೆ ಮಂಗಳೂರಿನ ಮಾರ್ನಮಿಕಟ್ಟೆಯ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿತ್ತು. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಹಲವು ತಿಂಗಳುಗಳಿಂದ ಕೊರಗಜ್ಜನ ಕಟ್ಟೆ, ದೈವಸ್ಥಾನ, ಮಸೀದಿಗಳಿಗೆ ಬಳಸಿದ ಕಾಂಡೋಮ್ , ಕ್ರೈಸ್ತ ಧರ್ಮ ಪ್ರಚೋದಿತ ಬರಹಗಳುಳ್ಳ ಕರಪತ್ರಗಳನ್ನ ಇರಿಸುತ್ತಿದ್ದ ಹುಬ್ಬಳ್ಳಿ ಮೂಲದ, ಕ್ರೈಸ್ತನಾಗಿ ಮತಾಂತರಗೊಂಡಿದ್ದ ದೇವದಾಸ್ ದೇಸಾಯಿಯನ್ನ ಪೊಲೀಸರು ಬಂಧಿಸಿದ್ದರು.
ಈ ಬಗ್ಗೆ ತೊಕ್ಕೊಟ್ಟು ನಿವಾಸಿ ರೋಶನ್ ಅವರು ಕೊರಗಜ್ಜನ ಕ್ಷೇತ್ರ ಸೇರಿದಂತೆ ದೈವಸ್ಥಾನ ,ಮಸೀದಿಗಳನ್ನ ಅಪವಿತ್ರಗೊಳಿಸಿದ್ದ ದೇವದಾಸ ದೇಸಾಯಿ ವಿರುದ್ಧ ಕೈ ಕಾಲು ಕಡಿಯುವ ಬೆದರಿಕೆ ಹಾಕಿದ್ದಾರೆ. ಜಿಲ್ಲೆಯ ಆರಾಧ್ಯ ಕೊರಗಜ್ಜನ ಕ್ಷೇತ್ರವನ್ನ ಅಪವಿತ್ರಗೊಳಿಸಿದ ಆರೋಪಿ ದೇವದಾಸ್ ದೇಸಾಯಿ ಸಮಾಜದ ನಡುವೆ ಒಡಕು ಮೂಡಿಸಲು ಪ್ರಯತ್ನಿಸಿದ್ದು ಅಕ್ಷಮ್ಯ. ಈತನಿಗೆ ಕಾನೂನು ಸರಿಯಾದ ಶಿಕ್ಷೆ ನೀಡಬೇಕು. ಒಂದು ವೇಳೆ ಇಂಥವನು ಜೈಲಿನಿಂದ ಬಿಡುಗಡೆಯಾದರೆ ನಾನೇ ಅವನ ಕೈ ಕಾಲು ಕಡಿಯುವುದಾಗಿ ರೋಶನ್ ಡಿಸೋಜ ಭಾವುಕರಾಗಿ ನುಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರ ಅಪವಿತ್ರ ಯತ್ನ ; ಭಾರೀ ಆಕ್ರೋಶ
ಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲೂ ಅಪಮಾನ ಕೃತ್ಯ ! ಕಾಂಡೋಮ್ ಪತ್ತೆ
ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್, ಸಿಎಂ ಬಿಎಸ್ವೈ ಭಾವಚಿತ್ರಕ್ಕೆ ಶಿಲುಬೆ ಹಾರ !! ಉಳ್ಳಾಲದಲ್ಲಿ ಕಿಡಿಗೇಡಿ ಕೃತ್ಯ
Mangalore Condoms in temple, Catholic Man threatens of chopping accused legs and hands if released, videos goes viral. A 62-year-old Christian man in Karnataka has been arrested for desecrating several Hindu temples by dropping used condoms. Devadas Desai (62), son of John Desai, was arrested by Mangaluru South Police for dropping used condoms at various temple premises and in donation boxes in temples in the region. The police were looking for the accused behind such repeated desecrations for a year, and finally made the arrest.
25-07-25 04:07 pm
Bangalore Correspondent
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
25-07-25 04:40 pm
HK News Desk
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
26-07-25 11:37 am
Mangalore Correspondent
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
DIG Anucheth Mangalore, SIT Dharmasthala: ಎಸ್...
25-07-25 06:05 pm
Udupi: ಸೊಸೈಟಿಗೆ ಅಡಿಟ್ ಮಾಡಿಕೊಡಲು ಲಂಚ ಬೇಡಿಕೆ ;...
25-07-25 02:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am