ಬ್ರೇಕಿಂಗ್ ನ್ಯೂಸ್
22-05-21 09:20 pm Mangaluru Correspondent ಕರಾವಳಿ
ಮಂಗಳೂರು, ಮೇ 22: ಎಂ ಆರ್ ಪಿಎಲ್ ಕಂಪನಿಯ 224 ಉದ್ಯೋಗದ ನೇಮಕಾತಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಸಹಿತ ಕನ್ನಡ ನಾಡಿಗೆ ಬಹುದೊಡ್ಡ ವಂಚನೆ ಎಸಗಲಾಗಿದೆ. ಉತ್ತರ ಪ್ರದೇಶ, ಬಿಹಾರದಿಂದಲೇ ಕನಿಷ್ಠ ನೂರು ಜನ ಅವಕಾಶ ಪಡೆದಿದ್ದು, ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ. ಇಡೀ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಈ ಎಲ್ಲ ವೈಫಲ್ಯ ಮತ್ತು ವಂಚನೆಗಳಿಗೆ ಅವಳಿ ಜಿಲ್ಲೆಗಳ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಈ ಭಾಗದ ಶಾಸಕರುಗಳು ನೇರ ಕಾರಣರಾಗಿದ್ದು, ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಎಮ್ ಆರ್ ಪಿ ಎಲ್ 224 ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ ಡಿವೈಎಫ್ಐ ಪ್ರಬಲ ವಿರೋಧ ದಾಖಲಿಸಿತ್ತು. ಸ್ಥಳೀಯರಿಗೆ 80 ಶೇಕಡಾ ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮತ್ತು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಕ್ಕೊತ್ತಾಯ ಹಾಗೂ ಎಂ ಆರ್ ಪಿ ಎಲ್ ಮುಂಭಾಗ ಸಾಮೂಹಿಕ ಧರಣಿಯನ್ನೂ ನಡೆಸಲಾಗಿತ್ತು. ಪ್ರತಿಭಟನೆಯ ಬಿಸಿಯಿಂದ ಎಚ್ಚೆತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣ ಕಂಪೆನಿಗೆ ನೋಟೀಸು ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವಂತೆ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಂಪೆನಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿತ್ತು. ಸಂಸದರಾದ ನಳಿನ್ ಕುಮಾರ್ ಕಟೀಲ್ ಸಹಿತ ಯಾವೊಬ್ಬ ಶಾಸಕರೂ ಆಗ ಧ್ವನಿಗೂಡಿಸಿರಲಿಲ್ಲ. ಇದೀಗ ಕೊರೊನಾ, ಲಾಕ್ಡೌನ್ ಗದ್ದಲಗಳ ಮಧ್ಯೆ ಕಂಪೆನಿ ತನ್ನ ಅಜೆಂಡಾ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ದಕ್ಷಿಣ ಕನ್ನಡಕ್ಕೆ ಎರಡು, ಉಡುಪಿಗೆ ಎರಡು ಸಹಿತ ಇಡೀ ಕರ್ನಾಟಕಕ್ಕೆ ಕೇವಲ 13 ಸ್ಥಾನಗಳು ಮಾತ್ರ ದೊರಕಿದೆ. ಅದೇ ಸಂದರ್ಭ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಒಟ್ಟು ನೂರು ಸ್ಥಾನಗಳು ದೊರಕಿವೆ. ದಕ್ಷಿಣ ಭಾರತದ ಇತರ ರಾಜ್ಯಗಳ ಅಭ್ಯರ್ಥಿಗಳೂ ಅತಿ ಕಡಿಮೆ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟು ಉತ್ತರ ಭಾರತದ ರಾಜ್ಯಗಳ ಅಭ್ಯರ್ಥಿಗಳನ್ನೇ ಗುರುತಿಸಿ ಆಯ್ಕೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳ ಹಲವಾರು ಪ್ರತಿಭಾವಂತ ಯುವಜನರು ಅತ್ಯುತ್ತಮವಾಗಿ ಪರೀಕ್ಷೆ ಎದುರಿಸಿದ್ದರೂ ಅವರನ್ನು ಹೀನಾಯವಾಗಿ ಹೊರದಬ್ಬಲಾಗಿದೆ. ಈಗ ಆಯ್ಕೆಯಾಗಿರುವ ಉತ್ತರ ಭಾರತದ ಅಭ್ಯರ್ಥಿಗಳ ಸಾಮರ್ಥ್ಯದ ಕುರಿತೂ ಹಲವು ಅನುಮಾನಗಳು ವ್ಯಕ್ತವಾಗಿವೆ.
ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ, ಪಿತೂರಿ, ವಂಚನೆಯ ವಾಸನೆ ಹೊಡೆಯುತ್ತಿದೆ. ನೇಮಕಾತಿ ಅಧಿಕಾರಿ ಸಹಿತ ಕಂಪೆನಿಯ ಉನ್ನತ ಅಧಿಕಾರಿಗಳು, ಆಳುವ ಸರಕಾರದ ರಾಜಕಾರಣಿಗಳು ಹಗರಣದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ. ಈಗಿನ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಳೀಯರಿಗೆ 80 ಶೇಕಡಾ ಮೀಸಲಿನೊಂದಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಹಾಗೂ ನಡೆದಿರುವ ನೇಮಕಾತಿ ಪ್ರಕ್ರಿಯೆಯ ಹಗರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಡಿವೈಎಫ್ಐ ಒತ್ತಾಯಿಸುತ್ತದೆ. ಹಾಗೂ ಈ ಎಲ್ಲಾ ಅಕ್ರಮ, ಸ್ಥಳೀಯರಿಗೆ ಆಗಿರುವ ಅನ್ಯಾಯಗಳಿಗೆ ತುಳುನಾಡಿನ ಸಂಸದರು, ಶಾಸಕರು ನೇರ ಹೊಣೆಯಾಗಿದ್ದು ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ನೈತಿಕ ಹೊಣೆ ಹೊರಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಎಂಆರ್ ಪಿಎಲ್ ಉದ್ಯೋಗ ಕರಾವಳಿ ಜನರಿಗೆ ಗಗನ ಕುಸುಮವೇ ? ಶಾಸಕರು, ಸಂಸದರ ವಿರುದ್ಧ ಭುಗಿಲೆದ್ದ ಆಕ್ರೋಶ
Mangalore High-level MRPL Job allocation Scam involved by BJP leaders claims Muneer Katipalla. He also demands the resignation of Naleen Kumar kateel and MP Shobha Karandlaje of resignation for making fake promises to the youths of Mangalore.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm