ಬ್ರೇಕಿಂಗ್ ನ್ಯೂಸ್
23-04-21 07:02 pm Mangaluru correspondent ಕರಾವಳಿ
ಕೊಣಾಜೆ, ಎ.23: ಕೊರೊನಾ ಸೋಂಕಿನ ಹಿನ್ನೆಲೆ ರಾಜ್ಯದೆಲ್ಲೆಡೆ ಕರ್ಫ್ಯೂ, ಅಘೋಷಿತ ಬಂದ್ ವಾತಾವರಣ ನೆಲೆಸಿದ್ದರೆ ಕೊಣಾಜೆ ಠಾಣೆ ಸಮೀಪದ ಪರಂಡೆ ಎಂಬಲ್ಲಿ ಅಕ್ರಮ ಕೋಳಿ ಅಂಕ ನಡೆಸಲಾಗುತ್ತಿತ್ತು. ಮಾಹಿತಿ ಪಡೆದ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಕೆಲವು ಪೊಲೀಸರ ಹಿಂಬಾಗಿಲ ಸಹಕಾರದಿಂದ ಅಕ್ರಮ ಕೋಳಿ ಅಂಕಗಳು ನಡೆಯುವುದು ಮಾಮೂಲಿ ಆಗಿದೆ. ಆದರೆ ಈಗ ಕೊರೊನಾ ಭೀತಿಯಲ್ಲಿ ಅಧಿಕಾರಿಗಳು, ಪೊಲೀಸರೆಲ್ಲ ಸೇರಿ ಊರಿನೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದರೆ, ಇದರ ಗೊಡವೆಯೇ ಇಲ್ಲ ಎಂಬಂತೆ ಕೊಣಾಜೆ ಬಳಿ ಭಾರೀ ಕೋಳಿ ಅಂಕ ಏರ್ಪಡಿಸಲಾಗಿತ್ತು. ಮಧ್ಯಾಹ್ನದ ಬಳಿಕ ನೂರಾರು ಜೂಜು ಪ್ರಿಯರನ್ನು ಒಟ್ಟು ಸೇರಿಸಿ ಅಕ್ರಮ ಕೋಳಿ ಅಂಕ ನಡೆಸಲಾಗುತ್ತಿತ್ತು.

ಕೊಣಾಜೆ ಪೊಲೀಸ್ ಠಾಣೆಯಿಂದ 3 ಕಿಮೀ ದೂರದ ಪರಂಡೆ ಎಂಬಲ್ಲಿ ಸ್ಥಳೀಯ ಕುಟುಂಬವೊಂದಕ್ಕೆ ಸಂಬಂಧಿಸಿದ ವಾರ್ಷಿಕ ಕೋಲ ನಡೆದಿದ್ದು ಆ ಪ್ರದೇಶದಲ್ಲೇ ಕೊರೊನಾ ಕಟ್ಟುನಿಟ್ಟಿನ ಆದೇಶಗಳನ್ನು ಧಿಕ್ಕರಿಸಿ ಕೋಳಿ ಅಂಕ ನಡೆಸಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರೋರ್ವರು ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದು ಅಕ್ರಮ ಕೋಳಿ ಅಂಕದೆಡೆಗೆ ರಹಸ್ಯ ಕ್ಯಾಮೆರಾ ಚಲಾಯಿಸಲು ನಮ್ಮ ಪ್ರತಿನಿಧಿ ತೆರಳಿದಾಗ ಅದಾಗಲೇ ಅಲ್ಲಿ ಕೊಣಾಜೆ ಪೊಲೀಸರ ಎಂಟ್ರಿ ಆಗಿ ಜೂಜುಕೋರರೆಲ್ಲ ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.

ಸ್ಥಳೀಯರು ಅಕ್ರಮ ಕೋಳಿ ಅಂಕದ ಬಗ್ಗೆ ರಹಸ್ಯವಾಗಿ ಪೊಲೀಸರಿಗೆ ದೂರಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಕೊಣಾಜೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಅಂಕವನ್ನು ನಿಲ್ಲಿಸಿದ್ದಾರೆ. ಜೂಜಿನಲ್ಲಿ ನಿರತರಾಗಿದ್ದ 7 ಮಂದಿ ಮತ್ತು ಅಂಕದ ಕೋಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
The Konaje Police raid on Cockfight event and take seven persons into Custody. The public alleged that amid covid tough guidelines the event was organised without anyone's fear.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm